ಜುಲೈ 12ಕ್ಕೆ ಮಕರದಲ್ಲಿ ಶನಿ ಹಿಮ್ಮುಖ ಸಂಚಾರ; ಜನಜೀವನ ದುಸ್ತರ

ಇನ್ನೂ ಆರು ತಿಂಗಳು ಶನಿ ವಕ್ರಿ; ದೇಶದ ಸಮಸ್ಯೆಗಳ ಹೆಚ್ಚಳ
ಸಮುದ್ರ ತೀರಗಳಲ್ಲಿ ಮಹಾಗಾಳಿ, ಭಾರತದ ಜನಜೀವನ ದುಸ್ತರ
ಹೆಚ್ಚುವ ಯುದ್ಧ ಅನಾಹುತ, ಪ್ರಕೃತಿ ಪ್ರಕೋಪ
ರಾಜಕೀಯ ವಲಯದಲ್ಲಿ ಹೆಚ್ಚಲಿದೆ ಜಿದ್ದು - ಕಿಚ್ಚು

First Published Jul 7, 2022, 9:58 AM IST | Last Updated Jul 7, 2022, 9:58 AM IST

ಜುಲೈ 12ರಂದು ಕರ್ಮ ಫಲದಾತ ಶನಿಯು ಮಕರಕ್ಕೆ ಹಿಮ್ಮುಖ ಚಲನೆಯಲ್ಲಿ ಸಾಗಲಿದ್ದಾನೆ. ನಂತರ ಸುಮಾರು ಆರು ತಿಂಗಳ ಕಾಲ ಮಕರದಲ್ಲಿ ವಕ್ರಿಯಾಗಿಯೇ ಉಳಿಯಲಿದ್ದಾನೆ. ಶನಿಯ ಈ ಚಲನೆಯಿಂದ ಸಮಾಜದಲ್ಲಿ ಕಾಳಮಾಯೆ ಹೆಚ್ಚಲಿದೆ. ಉಪಕಾರಕ್ಕೆ ಅಪಕರಿಸುವ ಕಾಲ, ಸಕಲವೂ ತಿಳಿದವನಿಗೆ ದುರ್ಭಿಕ್ಷ ಕಾಲ.. ಸತ್ಯವಂತರಿಗಿದು ಕಾಲವಲ್ಲವಯ್ಯಾ.. ಎಂಬ ಪುರಂದರದಾಸರ ಮಾತುಗಳು ಇಂದು ವಿಪರೀತ ಎನಿಸುವಷ್ಟು ಹೆಚ್ಚು ಒಪ್ಪುತ್ತಿದೆ, ಸಮಾಜದಲ್ಲಿರುವ ಕೆಟ್ಟತನಗಳೆಲ್ಲ ಬೆಳಕಿಗೆ ಬರುವ ಸಮಯ ಇದು ಎನ್ನುತ್ತಾರೆ ಜ್ಯೋತಿಷ್ಯ ತಜ್ಞರಾದ ಹರೀಶ್ ಕಶ್ಯಪ್.

Feng Shui Tips: ಪತ್ನಿ ಜತೆ ಜಗಳ ಬೇಡವಾದ್ರೆ ಈ ಫೆಂಗ್‌ ಶುಯಿ ಟಿಪ್ಸ್‌ ಅನುಸರಿಸಿ

ಶನಿ ವಕ್ರಿಯ ಈ ಸಮಯದಲ್ಲಿ ಸಮಾಜದ ಮೇಲೆ ಏನೆಲ್ಲ ಪರಿಣಾಮವಾಗಲಿದೆ, ಭಾರತದ ರಾಜಕೀಯ ಸ್ಥಿತಿಗತಿ ಹೇಗಿರಲಿದೆ, ಪ್ರಕೃತಿ ವಿಕೋಪಗಳೇನೇನು ಎಲ್ಲವನ್ನೂ ಅವರು ತಿಳಿಸಿದ್ದಾರೆ.