ಮೆಟ್ರೋನಲ್ಲೇ ಆಂಟಿಯರ ಮಸ್ತ್‌ ಮಸ್ತ್‌ ಡ್ಯಾನ್ಸ್, ಪಡ್ಡೆ ಹೈಕ್ಳು ಫಿದಾ..

ಮೆಟ್ರೋ ರೈಲಿನಲ್ಲಿ ಇಬ್ಬರು ಮಹಿಳೆಯರು ಸಖತ್ ಆಗಿ ಡಾನ್ಸ್ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

First Published Jul 2, 2022, 2:31 PM IST | Last Updated Jul 2, 2022, 2:31 PM IST

ಡಾನ್ಸ್ ಅಂದ್ರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ತಮಟೆ ಸದ್ದಿಗೆ ಡಾನ್ಸ್ ಗೊತ್ತಿರುವವರೂ ಯಾರೂ ಕೂಡ ಸುಮ್ಮನೆ ಕುಳಿತುಕೊಳ್ಳುವುದೇ ಇಲ್ಲ. ಮದುವೆ ಕಾರ್ಯಕ್ರಮಗಳಲ್ಲಿ ಬಸ್‌ಗಳಲ್ಲಿ ರಸ್ತೆಯಲ್ಲಿ ಹೀಗೆ ಎಲ್ಲೆಂದರಲ್ಲಿ ಡಾನ್ಸ್ ಮಾಡುವವರನ್ನು ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ಕಡೆ ಮೆಟ್ರೋ ರೈಲಿನಲ್ಲಿ ಇಬ್ಬರು ಮಹಿಳೆಯರು ಸಖತ್ ಆಗಿ ಡಾನ್ಸ್ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೈಲಿನಲ್ಲಿ ಕಂಬ ಹಿಡಿದು ಮಹಿಳೆಯರು ಬಿಂದಾಸ್ ಆಗಿ ಡಾನ್ಸ್ ಮಾಡುತ್ತಿದ್ದರೆ, ಅತ್ತ ರೈಲಿನಲ್ಲಿರುವ ಇತರ ಪ್ರಯಾಣಿಕರು ಮಹಿಳೆಯರ ಡಾನ್ಸ್ ಅನ್ನು ತಮ್ಮ ಮೊಬೈಲ್‌ಗಳಲ್ಲಿ ರೆಕಾರ್ಡ್ ಮಾಡುತ್ತಿದ್ದು, ಜೊತೆಗೆ ಚಪ್ಪಾಳೆ ತಟ್ಟುತ್ತಾ ಪ್ರೋತ್ಸಾಹಿಸುತ್ತಿದ್ದಾರೆ.