ಮೆಗಾಸ್ಟಾರ್ ಚಿರಂಜೀವಿ ಫ್ಯಾನ್ಸ್​ಗೆ ಯಾಕೆ ಹೊಸ ಗಿಫ್ಟ್ ಕೊಟ್ಟಿದ್ದು? ಸ್ಟೋರಿ ನೋಡಿ!

ರಾಜಕೀಯಕ್ಕೆ ಹೋಗಿ ಒಂದು ಸಣ್ಣ ಗ್ಯಾಪ್ ತೆಗೆದುಕೊಂಡಿದ್ದ ಚಿರಂಜೀವಿ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಯಸ್ಸು 70 ಆದರೂ ಅಭಿಮಾನಿಗಳನ್ನ ಭಿನ್ನ ವಿಭಿನ್ನ ಚಿತ್ರಗಳ ಮೂಲಕ ರಂಜಿಸ್ತಾ ಇದ್ದಾರೆ.

Share this Video
  • FB
  • Linkdin
  • Whatsapp

ಮೆಗಾಸ್ಟಾರ್ ಚಿರಂಜೀವಿಗೆ (Mega Star Chiranjeevi) ಇವತ್ತು ಹುಟ್ಟುಹಬ್ಬದ ಸಂಭ್ರಮ. 70ನೇ ಹುಟ್ಟುಹಬ್ಬದ ಸೆಲೆಬ್ರೇಟ್ ಮಾಡಿಕೊಳ್ತಾ ಇರೋ ಮೆಗಾಸ್ಟಾರ್ ಫ್ಯಾನ್ಸ್​ಗಾಗಿ ವಿಶ್ವಂಭರ ಟೀಸರ್​ನ ಗಿಫ್ಟ್ ಆಗಿ ಕೊಟ್ಟಿದ್ದಾರೆ.

Add Asianetnews Kannada as a Preferred SourcegooglePreferred

ಮೆಗಾಸ್ಟಾರ್ ಚಿರಂಜೀವಿ.. ತೆಲುಗು ಸಿನಿಪ್ರಿಯರ ಆರಾಧ್ಯದೈವ. 1 ಕೋಟಿ ಸಂಭಾವನೆ ಪಡೆದ ಭಾರತೀಯ ಸಿನಿಮಾರಂಗದ ಮೊದಲ ಸೂಪರ್ ಸ್ಟಾರ್. ವಿಶ್ವದಲ್ಲೇ ಅತಿಹೆಚ್ಚು ಅಭಿಮಾನಿ ಸಂಘ ಹೊಂದಿದ್ದ ತಾರೆ. ಚಿರು ಸಿನಿಮಾಗಳು ಬಂತು ಅಂದ್ರೆ ಥಿಯೇಟರ್​ಗೆ ಜನ ಜಾತ್ರೆಗೆ ಹೋದಂತೆ ಹೋಗ್ತಾ ಇದ್ರು. ಚಿರು ಡ್ಯಾನ್ಸ್-ಫೈಟ್​ ಕಣ್ತಿಂಬಿಕೊಳ್ತಾ ಕುಣಿದು ಕುಪ್ಪಳಿಸ್ತಾ ಇದ್ರು.

ರಾಜಕೀಯಕ್ಕೆ ಹೋಗಿ ಒಂದು ಸಣ್ಣ ಗ್ಯಾಪ್ ತೆಗೆದುಕೊಂಡಿದ್ದ ಚಿರಂಜೀವಿ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಯಸ್ಸು 70 ಆದರೂ ಅಭಿಮಾನಿಗಳನ್ನ ಭಿನ್ನ ವಿಭಿನ್ನ ಚಿತ್ರಗಳ ಮೂಲಕ ರಂಜಿಸ್ತಾ ಇದ್ದಾರೆ.

ಯೆಸ್ ಚಿರಂಜೀವಿ ಬರ್ತ್​​ಡೇ ಗಿಫ್ಟ್ ಆಗಿ ವಿಶ್ವಂಭರ ಸಿನಿಮಾ ಹೊಸ ಟೀಸರ್ ರಿಲೀಸ್ ಆಗಿದೆ. ಇದನ್ನ ಬ್ಲಾಸ್ಟ್ ಗ್ಲಿಂಪ್ಸ್ ಅಂತ ಕರೆದಿರೋ ಚಿತ್ರತಂಡ ಅಕ್ಷರಶಃ ಬ್ಲಾಸ್ಟ್ ಮಾಡಿದೆ. ಟೀಸರ್ ನಲ್ಲಿರುವ ದೃಶ್ಯಾವಳಿಗಳು ಅಬ್ಬಬ್ಬ ಅನ್ನೋ ತರಹ ಇವೆ.

ವಿಶ್ವಂಭರ ಫ್ಯಾಂಟಸಿ ಌಕ್ಷನ್ ಕಥಾಹಂದರ ಇರೋ ಸಿನಿಮಾ. ಚಿರುನ ಹಿಂದೆಂದೂ ನೋಡಿರದ ಅವತಾರದಲ್ಲಿ ತೋರಿಸ್ತಾ ಇದ್ದಾರೆ ನಿರ್ದೇಶಕ ವಶಿಷ್ಟ. ಬರೊಬ್ಬರಿ 200 ಕೋಟಿ ಬಜೆಟ್​​ನಲ್ಲಿ ಈ ಸಿನಿಮ ಸಿದ್ದವಾಗ್ತಾ ಇದೆ.

ಅಧ್ಬುತ ವಿಎಫ್​ಎಕ್ಸ್ ವರ್ಕ್ ಇರೋ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ. ಸದ್ಯಕ್ಕಂತೂ ಚಿರು ಬರ್ತ್​ಡೇ ಪ್ರಯುಕ್ತ ಗ್ಲಿಂಪ್ಸ್ ತೋರಿಸಿ ಫ್ಯಾನ್ಸ್​ನ ಹುಚ್ಚೆಬ್ಬಿಸಿದೆ ಚಿತ್ರತಂಡ.

ಇನ್ನೂ ಚಿರಂಜೀವಿ 70ನೇ ಬರ್ತ್​​ಡೇಯನ್ನ ಮೆಗಾ ಫ್ಯಾಮಿಲಿ ವಿಶೇಷವಾಗಿ ಸೆಲೆಬ್ರೇಟ್ ಮಾಡ್ತಾ ಇದೆ. ಇಡೀ ಮೆಗಾಕುಟುಂಬ ಒಟ್ಟಿಗೆ ಸೆಲೆಬ್ರೇಷನ್​ನಲ್ಲಿ ಭಾಗಿಯಾಗ್ತಾ ಇದ್ದು, ಏರ್​ಪೋರ್ಟ್​ ಎಲ್ಲರೂ ಒಟ್ಟಿಗೆ ಇರೋ ಫೋಟೋ ವೈರಲ್ ಆಗ್ತಾ ಇದೆ.

ಒಟ್ಟಾರೆ ದಶಕಗಳ ಕಾಲ ಚಿತ್ರಪ್ರಿಯರನ್ನ ರಂಜಿಸಿದ ಮೆಗಾಸ್ಟಾರ್ ಮತ್ತಷ್ಟು ಹೊಸ ಹೊಸ ಸಿನಿಮಾಗಳ ಮೂಲಕ ಪ್ರೇಕ್ಷರನ್ನ ರಂಜಿಸೋ ತಯಾರಿಯಲ್ಲಿದ್ದಾರೆ. ವಯಸ್ಸು 70 ಆದ್ರೂ 20ರ ತರುಣನಂತೆ ಮಿಂಚ್ತಾ ಇರೋ ಚಿರು ಕಂಡು ಫ್ಯಾನ್ಸ್ ಜೈ ಚಿರಂಜೀವಿ ಅಂತಿದ್ದಾರೆ..! ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

Related Video