
ತಮಿಳುನಾಡು ಬಿಜೆಪಿಗೆ ಮತ್ತೊಬ್ಬ ಸೂಪರ್ ಸ್ಟಾರ್ ಎಂಟ್ರಿ..? ದಳಪತಿ ವಿಜಯ್‌ಗೆ ಟಕ್ಕರ್ ಕೊಡ್ತಾರಾ..?
ವಿಜಯ್ ಅಷ್ಟೇ ಅಲ್ಲದೇ ತಮಿಳುನಾಡು ಪಾಲಿಟಿಕ್ಸ್ನಲ್ಲಿ ಇನ್ನೂ ಹಲವು ತಾರೆಯರಿದ್ದಾರೆ. ಕಮಲ್ ಹಾಸನ್ ಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಖುಷ್ಬು ಭಾರತೀಯ ಜನತಾ ಪಾರ್ಟಿಯಲ್ಲಿದ್ದಾರೆ. ಶರತ್ ಕುಮಾರ್ ಕೂಡ ತಮ್ಮದೇ ಪಕ್ಷವನ್ನ ಕಟ್ಟಿ ಅಖಾಡಲ್ಲಿದ್ದಾರೆ. ಈಗ ಮತ್ತೊಬ್ಬ ಸ್ಟಾರ್ ನಟಿ
ತಮಿಳುನಾಡಿನಲ್ಲಿ ಇನ್ನೂ ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಸೋ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗ್ಲೇ ದಳಪತಿ ವಿಜಯ್ ತಮ್ಮದೇ ಹೊಸ ಪಕ್ಷ ಕಟ್ಟಿ ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ. ವಿಜಯ್ ಮಾತ್ರ ಅಲ್ಲ ಇನ್ನೂ ಹಲವು ನಟ-ನಟಿಯರು ರಾಜಕೀಯಕ್ಕೆ ಧುಮುಕ್ತಾ ಇದ್ದಾರೆ. ಸದ್ಯ ಪುಟ್ನಂಜಿ ಮೀನಾ ಕೂಡ ಕಮಲ ಮುಡಿದು ರಾಜಕೀಯ ರಂಗಕ್ಕೆ ಇಳದಿದ್ದಾರೆ.
2026ರಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇನ್ನೂ ಕೆಲವೇ ತಿಂಗಳಲ್ಲಿ ನಡೆಯಲಿರೋ ಎಲೆಕ್ಷನ್ ಬಗ್ಗೆ ಈಗಿನಿಂದಲೂ ಭರ್ಜರಿ ತಯಾರಿ ಶುರುವಾಗಿದೆ. ಸೋ ಸಿನಿರಂಗದಲ್ಲೂ ಈ ಬಗ್ಗೆ ಸಂಚಲನ ಶುರುವಾಗಿದೆ. ತಮಿಳುನಾಡಿನಲ್ಲಿ ಮೊದಲಿಂದಲೂ ರಾಜಕಾರಣಕ್ಕೂ ಸಿನಿಮಾಗೂ ಅವಿನಾಭಾವ ನಂಟು. ತಮಿಳುನಾಡಿನ ಸಿಎಂಗಳಾಗಿ ಮೆರೆದ ಎಂ.ಜಿ.ಆರ್, ಕರುಣಾನಿಧಿ, ಜಯಲಲಿತಾ ಸಿನಿಮಾರಂಗದಿಂದಲೇ ಬಂದವರು.
ಯೆಸ್ ಎಂ.ಜಿ.ಆರ್ , ಕರುಣಾನಿಧಿ, ಜಯಲಲಿಲಾ ಜಾಗವನ್ನ ತುಂಬ್ತಿನಿ ಅಂತ ಈ ಸಾರಿ ದಳಪತಿ ವಿಜಯ್ ಸಜ್ಜಾಗಿದ್ದಾರೆ. ಡಿಎಂಕೆ, ಎಐಎಡಿಎಂಕೆ ನಡುವೆ ತಮ್ಮದೇ ಆದ ಟಿವಿಕೆ ಪಾರ್ಟಿ ಕಟ್ಟಿ ಅಖಾಡಕ್ಕೆ ಇಳಿದಿದ್ದಾರೆ ವಿಜಯ್. ರಾಜಕೀಯಕ್ಕಾಗಿ ಸಿನಿಮಾರಂಗದಿಂದಲೇ ದೂರವಾಗ್ತಾ ಇದ್ದಾರೆ. ಜನನಾಯಗನ್ ವಿಜಯ್ ಅವರ ಕೊನೆ ಚಿತ್ರವಾಗಲಿದೆ.
ವಿಜಯ್ ಅಷ್ಟೇ ಅಲ್ಲದೇ ತಮಿಳುನಾಡು ಪಾಲಿಟಿಕ್ಸ್ನಲ್ಲಿ ಇನ್ನೂ ಹಲವು ತಾರೆಯರಿದ್ದಾರೆ. ಕಮಲ್ ಹಾಸನ್ ಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಖುಷ್ಬು ಭಾರತೀಯ ಜನತಾ ಪಾರ್ಟಿಯಲ್ಲಿದ್ದಾರೆ. ಶರತ್ ಕುಮಾರ್ ಕೂಡ ತಮ್ಮದೇ ಪಕ್ಷವನ್ನ ಕಟ್ಟಿ ಅಖಾಡಲ್ಲಿದ್ದಾರೆ. ಇವರೆಲ್ಲರ ನಡುವೆ ಈಗ ಮತ್ತೊಬ್ಬ ಸ್ಟಾರ್ ನಟಿ ರಾಜಕೀಯ ರಂಗಕ್ಕೆ ಧುಮುಕಿದ್ದಾರೆ.
ಹೌದು ನಟಿ ಮೀನಾ ರಾಜಕೀಯಕ್ಕೆ ಬರೋದು ಬಹುತೇಕ ಖಚಿತವಾಗಿದೆ. ಬಾಲನಟಿಯಾಗಿ ಬಣ್ಣದ ದುನಿಯಾಗೆ ಬಂದ ಮೀನಾ ಮುಂದೆ ನಾಯಕನಟಿಯಾಗಿ ಪಂಚಭಾಷಾ ತಾರೆಯರಾಗಿ ಮಿಂಚಿದವರು. ಕನ್ನಡದಲ್ಲೂ ಮೀನಾ ಹಲವು ಚಿತ್ರಗಳನ್ನ ಮಾಡಿದ್ದಾರೆ. ಅದ್ರಲ್ಲೂ ಪುಟ್ನಂಜ ಸಿನಿಮಾದಲ್ಲಿ ರವಿಮಾಮನ ಜೊತೆ ಪುಟ್ನಂಜಿಯಾಗಿ ಇವರು ಮಾಡಿದ ಮೋಡಿ ಮರೆಯೋದುಂಟೇ.
ಪುಟ್ನಂಜ, ಮೊಮ್ಮಗ, ಚೆಲುವೆ, ಸಿಂಹಾದ್ರಿಯ ಸಿಂಹ, ಸ್ವಾತಿ ಮುತ್ತು , ಶ್ರೀಮಂಜುನಾಥ ಸೇರಿದಂತೆ ಮೀನಾ ಹಲವು ಕನ್ನಡ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಮೀನಾ ನಟಸಿದ ಕೊನೆ ಕನ್ನಡ ಸಿನಿಮಾ ಮೈ ಆಟೋಗ್ರಾಫ್.
ಮೀನಾ ಇತ್ತೀಚಿಗೆ ಉಪರಾಷ್ಟ್ರಪತಿ ಜಗದೀಪ್ ದಂಖರ್ ಅವರನ್ನ ಭೇಟಿ ಮಾಡಿದ್ರು. ಕಳೆದ ಕೆಲವು ದಿನಗಳಿಂದ ಅನೇಕ ರಾಜಕೀಯ ನಾಯಕರನ್ನ ಭೇಟಿ ಮಾಡಿದ್ದಾರೆ. ಸೋ ಮೀನಾ ನಡೆಗಳನ್ನ ನೋಡಿದವರು ಸದ್ಯದಲ್ಲೇ ಅವರು ಬಿಜೆಪಿ ಸೇರ್ಪಡೆಯಾಗ್ತಾರೆ ಅಂತ ಹೇಳ್ತಾ ಇದ್ದಾರೆ.
ಒಟ್ನಲ್ಲಿ ತಮಿಳುನಾಡಿನ ಸಿನಿಪಾಲಿಟಿಕ್ಸ್ನಲ್ಲಿ ಮೀನಾ ತಮ್ಮದೂ ಒಂದು ಅಧ್ಯಾಯ ಓಪನ್ ಮಾಡೋಕೆ ಸಜ್ಜಾಗಿದ್ದಾರೆ. ಮೀನಾ ಕನ್ನಡಿಗರಿಗೂ ಚಿರಪರಿಚಿತೆ. ಸೋ ಕನ್ನಡಿಗರು ಪುಟ್ನಂಜಿಯ ಪಾಲಿಟಿಕ್ಸ್ಗೆ ಆಲ್ ದಿ ಬೆಸ್ಟ್ ಹೇಳ್ತಾ ಇದ್ದಾರೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..