ಟಗರು-2 ಚಿತ್ರಕ್ಕೆ ನಿರ್ದೇಶನ ಯಾರದು..? ಶಿವಣ್ಣ ನಟನೆಯ ಈ ಸಿನಿಮಾ ಅನೌನ್ಸ್, ಆದ್ರೆ ಸೂರಿ ಹೆಸರಿಲ್ಲ..!

ಟೈಟಲ್ ಆಗಲಿ ನಿರ್ದೇಶಕರ ಹೆಸರಾಗಲಿ ಇಲ್ಲ. ಅಸಲಿಗೆ ಟಗರು ಸಿನಿಮಾವನ್ನ ನಿರ್ಮಾಣ ಮಾಡಿದ್ದು ಇದೇ ಕೆಪಿ ಶ್ರೀಕಾಂತ್, ಮತ್ತು ನಿರ್ದೇಶನ ಮಾಡಿದ್ದು ದುನಿಯಾ ಸೂರಿ. 2018ರಲ್ಲಿ ಬಂದ ಟಗರು ಸಿನಿಮಾ ಆ ವರ್ಷದ ಬಿಗ್ಗೆಸ್ಟ್ ಹಿಟ್ ಸಿನಿಮಾ ಅನ್ನಿಸಿಕೊಂಡಿತ್ತು.

Share this Video
  • FB
  • Linkdin
  • Whatsapp

ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್​ (Shivarajkumar) ಬರ್ತ್​ಡೇಗೆ ಹಲವು ಹೊಸ ಸಿನಿಮಾ ಅನೌನ್ಸ್ ಆಗಿವೆ. ಅದ್ರಲ್ಲಿ ಟಗರು-2 ಕೂಡ ಒಂದು. ಆದ್ರೆ ಟಗರು-2 ನಿರ್ದೇಶಕರ ಜಾಗದಲ್ಲಿ ಸೂರಿ ಹೆಸರಿಲ್ಲ. ಹಾಗಾದ್ರೆ ಫಾರ್ಮ್​​ನಲ್ಲಿರದ ದುನಿಯಾ ಸೂರಿ ಟಗರು -2 ಡೈರೆಕ್ಟ್ ಮಾಡಲ್ವಾ..? ಆ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ಯೆಸ್ ಇತ್ತೀಚಿಗೆ ಶಿವರಾಜ್​ಕುಮಾರ್​ ಬರ್ತ್​​ಡೇಗೆ ಹಲವು ಚಿತ್ರಗಳ ಅನೌನ್ಸ್​ಮೆಂಟ್ ಪೋಸ್ಟರ್ಸ್​ ಬಂದಿವೆ. ಅವುಗಳಲ್ಲಿ ಕೆ.ಪಿ. ಶ್ರೀಕಾಂತ್ ನಿರ್ಮಾಣದ ಹೊಸ ಚಿತ್ರ ಕೂಡ ಒಂದು. ವಿನಸ್ ಎಂಟರ್​ಟೈನ್​ಮೆಂಟ್ಸ್ ಬರ್ತ್​ಡೇಗೆ ವಿಶ್ ಮಾಡಿ, ಶಿವಣ್ಣ ಮಚ್ಚು ಹಿಡಿದುಕೊಂಡು, ಕೈ ತೊಳೆಯುತ್ತಿರೋ ಪೋಸ್ಟರ್​ವೊಂದನ್ನ ರಿಲೀಸ್ ಮಾಡಿದೆ. ಇದು ಟಗರು-2 ಅಂತಾನೆ ಫ್ಯಾನ್ಸ್ ನಿರ್ಧಾರ ಮಾಡಿದ್ದಾರೆ.

ಆದ್ರೆ ಇಲ್ಲಿ ಟೈಟಲ್ ಆಗಲಿ ನಿರ್ದೇಶಕರ ಹೆಸರಾಗಲಿ ಇಲ್ಲ. ಅಸಲಿಗೆ ಟಗರು ಸಿನಿಮಾವನ್ನ ನಿರ್ಮಾಣ ಮಾಡಿದ್ದು ಇದೇ ಕೆಪಿ ಶ್ರೀಕಾಂತ್, ಮತ್ತು ನಿರ್ದೇಶನ ಮಾಡಿದ್ದು ದುನಿಯಾ ಸೂರಿ. 2018ರಲ್ಲಿ ಬಂದ ಟಗರು ಸಿನಿಮಾ ಆ ವರ್ಷದ ಬಿಗ್ಗೆಸ್ಟ್ ಹಿಟ್ ಸಿನಿಮಾ ಅನ್ನಿಸಿಕೊಂಡಿತ್ತು.

ಟಗರು ಶಿವನಾಗಿ ಶಿವಣ್ಣನ ಮಾಸ್ ಅವತಾರ.. ಡಾಲಿ , ಚಿಟ್ಟೆ ಪಾತ್ರಗಳಲ್ಲಿ ಧನಂಜಯ್ & ವಸಿಷ್ಠ ಸಿಂಹ.. ಹಸಿ ಹಸಿ ರೌಡಿಸಂ ಕಹಾನಿ, ಮಾಸ್ತಿಯ ಸುಕ್ಕಾ ಸಂಭಾಷಣೆ, ಸೂರಿಯ ನಾನ್ ಲೀನಿಯರ್ ನಿರೂಪಣೆ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಟ್ಟಿತ್ತು.

ಈ ಸಿನಿಮಾ ಧನಂಜಯ್​ ಲೈಫ್​ನೇ ಚೇಂಜ್ ಮಾಡ್ತು. ಧನಂಜಯ್ ಮಾತ್ರ ಅಲ್ಲ ಟಗರುನಲ್ಲಿ ನಟಿಸಿದ ಅನೇಕರು ನಟರು ಯಶಸ್ಸು ಗಳಿಸಿಕೊಂಡ್ರು. ಈಗಲೂ ಟಗರು ಹೆಸರಿಂದಲೇ ಮಾರ್ಕೆಟ್​​ನಲ್ಲಿದ್ದಾರೆ. ಆದ್ರೆ ಅದ್ಯಾಕೋ ಗೊತ್ತಿಲ್ಲ ಟಗರು ಬಳಿಕ ನಿರ್ದೇಶಕ ಸೂರಿ ಮಾತ್ರ ಮತ್ತೊಂದು ಸಕ್ಸಸ್ ಕೊಡೋದಕ್ಕೆ ಆಗ್ಲಿಲ್ಲ.

ಟಗರು ನಂತರ ಧನಂಜಯ್ ಜೊತೆಗೆ ಸೂರಿ ಮಾಡಿದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಕಮಾಲ್ ಮಾಡ್ಲಿಲ್ಲ. ಇನ್ನೂ ಅಂಬರೀಷ್ ಪುತ್ರ ಅಭಿಷೇಕ್ ಅಂಬಿ ಜೊತೆ ಮಾಡಿದ ಬ್ಯಾಡ್ ಮ್ಯಾನರ್ಸ್ ಕೂಡ ಸಕ್ಸಸ್ ಕಾಣಲಿಲ್ಲ.

ಸದ್ಯ ಸೂರಿ ಯುವರಾಜ್​ಕುಮಾರ್ ನಟನೆಯ ಹೊಸ ಚಿತ್ರವನ್ನ ಡೈರೆಕ್ಟ್ ಮಾಡ್ತಾ ಇದ್ದಾರೆ. ಸೂರಿ ಮೊದಲಿನ ಫಾರ್ಮ್​​ನಲ್ಲಿಲ್ಲ. ಇದೇ ಸಮಯದಲ್ಲಿ ಕೆ,ಪಿ ಶ್ರೀಕಾಂತ್ ಅನೌನ್ಸ್ ಮಾಡಿರೋ ಶಿವಣ್ಣನ ಸಿನಿಮಾ ಪೋಸ್ಟರ್​​ನಲ್ಲಿ ಸೂರಿ ಹೆಸರಿಲ್ಲ. ಸೋ ಟಗರು-2 ಸೂರಿ ಡೈರೆಕ್ಟ್ ಮಾಡಲ್ವಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ಅಸಲಿ ವಿಷ್ಯ ಏನು ಅಂದ್ರೆ ಟಗರು-2 ಮಾಡೋದಕ್ಕೆ ನಿರ್ಮಾಪಕ ಕೆ.ಪಿ ಶ್ರೀಕಾಂತ್​ಗೇನೋ ಇಷ್ಟ ಇದೆ. ಆದ್ರೆ ಶಿವಣ್ಣ ಕೈಲಿ ಹತ್ತಾರು ಸಿನಿಮಾಗಳಿವೆ. ಇತ್ತ ಸೂರಿ ಟಗರು ಸೀಕ್ವೆಲ್​ಗೆ ಸೂಟ್ ಆಗೋ ಕಥೆಯನ್ನ ರೆಡಿ ಮಾಡಿಕೊಂಡಿಲ್ಲ. ಅವರು ಬೇರೆ ಪ್ರಾಜೆಕ್ಟ್​​ನಲ್ಲಿ ಬ್ಯುಸಿ ಇದ್ದಾರೆ. ಸೋ ಸದ್ಯ ಅನೌನ್ಸ್ ಆಗಿರೋ ಸಿನಿಮಾ ಟಗರು-2 ಆಗೋ ಸಾಧ್ಯತೆ ಕಮ್ಮಿ ಅಂತಾನೇ ಹೇಳಬಹುದು. ಆದ್ರೆ ಫ್ಯಾನ್ಸ್ ಮಾತ್ರ ಈ ಕಾಂಬಿನೇಷನ್​ನಲ್ಲಿ ಟಗರು-2 ಬರಲಿ, ಮತ್ತೊಮ್ಮೆ ಟಗರು ತನ್ನ ಪೊಗರು ತೋರಿಸಲಿ ಅಂತ ಹಾರೈಸ್ತಾ ಇದ್ದಾರೆ.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ…

Related Video