Madhagaja Response: ಮದಗಜ ಮೈಂಡ್‌ ಬ್ಲೋಯಿಂಗ್ ಎಂದ ಪ್ರೇಕ್ಷಕ ಪ್ರಭು..!

ನಟ ಶ್ರೀಮುರಳಿ (Srimurali) ಅಭಿನಯದ ಬಹುನಿರೀಕ್ಷಿತ ಚಿತ್ರ ‘ಮದಗಜ’ (Madhagaja) ಚಿತ್ರ ಡಿ.3 ರಂದು ಅದ್ದೂರಿಯಾಗಿ ಬಿಡುಗಡೆಯಾಗಿದೆ. ಅಯೋಗ್ಯ ಮಹೇಶ್‌ ನಿರ್ದೇಶನದ ಈ ಚಿತ್ರ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಿದೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 04): ನಟ ಶ್ರೀಮುರಳಿ (Srimurali) ಅಭಿನಯದ ಬಹುನಿರೀಕ್ಷಿತ ಚಿತ್ರ ‘ಮದಗಜ’ (Madhagaja) ಚಿತ್ರ ಡಿ.3 ರಂದು ಅದ್ದೂರಿಯಾಗಿ ಬಿಡುಗಡೆಯಾಗಿದೆ. ಅಯೋಗ್ಯ ಮಹೇಶ್‌ ನಿರ್ದೇಶನದ ಈ ಚಿತ್ರ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಉಮಾಪತಿ ಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರವನ್ನು ವೀಕ್ಷಿಸಿದ ಪ್ರೇಕ್ಷಕ ಮೈಂಡ್‌ ಬ್ಲೋಯಿಂಗ್ ಸಿನಿಮಾ ಎನ್ನುತ್ತಿದ್ದಾರೆ. 

Madhagaja Collection: ಮೊದಲ ದಿನವೇ ಶ್ರೀ ಮುರಳಿ ಸಿನಿಮಾ ಸೂಪರ್ ಹಿಟ್!

'ಮದಗಜ' ಪಕ್ಕಾ ಆಕ್ಷನ್, ಥ್ರಿಲ್ಲಿಂಗ್ ಮೂವಿ. ವಾರಣಾಸಿಯಲ್ಲಿ ತೆರೆದುಕೊಳ್ಳುವ 'ಮದಗಜ' ಕಥೆ ನಂತರ ಕರ್ನಾಟಕದಲ್ಲಿ ಮುಂದುವರೆಯುತ್ತಿದೆ. ಚಿಕ್ಕಂದಿನಲ್ಲಿ ಅಮ್ಮ ಅಪ್ಪನಿಂದ ದೂರವಾಗಿ ವಾರಣಾಸಿಯಲ್ಲಿ ಬೆಳೆಯುತ್ತಾನೆ. ನಂತರ ಹುಟ್ಟೂರಿಗೆ ವಾಪಸ್ಸಾಗಿ ತಂದೆ ತಾಯಿಯ ಆಸೆಗಳನ್ನು ಈಡೇರಿಸಲು ಏನೆಲ್ಲಾ ಮಾಡುತ್ತಾನೆ ಎಂಬುದೇ ಒನ್ ಲೈನ್ ಸ್ಟೋರಿ. ಇನ್ನು ಪಟಾಕಿ ಪೋರಿ ಆಶಿಕಾ ರಂಗನಾಥ್, ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ನೋಡಿದ ಪ್ರೇಕ್ಷಕರು ಮೈಂಡ್ ಬ್ಲೋಯಿಂಗ್ ಎನ್ನುತ್ತಿದ್ದಾರೆ. 

Related Video