ಜೈಲಲ್ಲಿ ಆಧ್ಯಾತ್ಮಿಕತೆಗೆ ಒಲವು ತೋರಿದ ನಟ ದರ್ಶನ್; ಸಿಗದ ಸೌಲತ್ತು, ನೆಮ್ಮದಿಗಾಗಿ ಹುಡುಕಾಟವೇ?

ಕೋಟಿ ಕೋಟಿ ಆಸ್ತಿ ಇದೆ.. ಆದ್ರೆ ಅನುಭವಿಸೋದಕ್ಕೆ ಸಾಧ್ಯ ಇಲ್ಲ. ಅಮ್ಮ, ತಮ್ಮ, ಮಡದಿ, ಮಗ ಎಲ್ಲಾ ಇದ್ದಾರೆ ಆದ್ರೆ ಅವರ ಜೊತೆ ನೆಮ್ಮದಿಯಾಗಿ ಬದುಕೋಕೆ ಅವಕಾಶ ಇಲ್ಲ. ಅಭಿಮಾನಿಗಳ ದಂಡೇ ಇದೆ ಆದ್ರೆ ಕಣ್ಣೆದರು ಇರೋದು ಮಾತ್ರ ಕುಖ್ಯಾತ ಕೈದಿಗಳು.. 

Share this Video
  • FB
  • Linkdin
  • Whatsapp

ನಟ ದರ್ಶನ್ (Darshan Thoogudeepa) ದರ್ಶನ್ ದಿಂಬು, ಹಾಸಿಗೆಗೋಸ್ಕರ ಪದೇ ಪದೇ ಕೋರ್ಟ್ ಎದುರು ಪರದಾಡ್ತಾ ಇರೋ ವಿಷ್ಯ ಹೊತ್ತೇ ಇದೆ. ಜೈಲಲ್ಲಿ ಚಾಪೆ ಹಾಸಿ, ಕಂಬಳಿ ಹೊದ್ದು ಮಲಗ್ತಾ ಇರೋ ದರ್ಶನ್​ಗೆ ಜೀವನ ನಶ್ವರ ಅನ್ನಿಸಿಬಿಟ್ಟಿದೆಯಾ..? ಜೈಲು ಜೀವನ ದಾಸನನ್ನ ಆಧ್ಯಾತ್ಮಿಕತೆಯತ್ತ ವಾಲುವಂತೆ ಮಾಡ್ತಿದೆಯಾ..? ಸದ್ಯ ದಾಸನ ಜೈಲು ದಿನಚರಿ ಕೇಳಿದ್ರೆ ಅದು ನಿಜ ಅನ್ನಿಸುತ್ತೆ.. ಹೌದು ಜೈಲಲ್ಲಿ ದರ್ಶನ್ ಅಧ್ಯಾತ್ಮ ಪುಸ್ತಕಗಳನ್ನ ಓದ್ತಾ ಇದ್ದಾರಂತೆ.

ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿಂಬು, ಹಾಸಿಗೆ ಕೊಡ್ತಿಲ್ಲ ಅಂತ ಪದೇ ಪದೇ ಕೋರ್ಟ್ ಎದುರು ಅಲವತ್ತುಕೊಳ್ತಾ ಇರೋದನ್ನ ನೋಡಿದ್ರೆ, ದಾಸನ ಜೈಲ್ ಸ್ಥಿತಿ ಹೇಗಿದೆ ಅನ್ನೋದನ್ನ ಯಾರಾದ್ರೂ ಊಹೆ ಮಾಡಬಹುದು. ದರ್ಶನ್​ಗೆ ಕಳೆದ ಬಾರಿ ರಾಜಾತಿಥ್ಯ ಕೊಟ್ಟ ವಿಷ್ಯ ಸುಪ್ರೀಂ ಕೋರ್ಟ್​ನಲ್ಲೂ ಸದ್ದು ಮಾಡಿದ್ದರಿಂದ , ಈ ಸಾರಿ ಜೈಲರ್ಸ್ ದಾಸನ ವಿಷ್ಯದಲ್ಲಿ ಬಲು ಸ್ಕ್ರಿಕ್ಟ್ ಆಗಿದ್ದಾರೆ. ಏನೆಂದರೇ ಏನೂ ಹೆಚ್ಚಿನ ಸೌಲಭ್ಯ ದರ್ಶನ್​ಗೆ ಸಿಕ್ತಾ ಇಲ್ಲ. ಉಳಿದ ಕೈದಿಗಳಿಗೆ ಏನೇನೂ ಸೌಲಭ್ಯಗಳಿವೆಯೋ ಅಷ್ಟೇ ದರ್ಶನ್​ಗೂ ಕೊಡಲಾಗ್ತಾ ಇದೆ. ಇದು ದಾಸನಿಗೆ ನುಂಗಲಾರದ ತುತ್ತಾಗಿದೆ.

ಕಳೆದ ಬಾರಿ ಜಡ್ಜ್ ಎದುರು ನನಗೆ ಸ್ವಲ್ಪ ವಿಷ ಕೊಟ್ಟು ಬಿಡಿ ಸ್ವಾಮಿ ಅಂತ ಕಣ್ಣೀರು ಹಾಕಿದ್ದ ದರ್ಶನ್, ಪದೇ ಪದೇ ತನ್ನ ವಕೀಲರ ಮೂಲಕ ಕೋರ್ಟ್ ನಲ್ಲಿ ತನಗೆ ಸೌಲತ್ತು ಕೊಡಿಸುವಂತೆ ಮನವಿ ಮಾಡ್ತಾ ಇದ್ದಾರೆ. ಜೈಲ್ ಅಧಿಕಾರಿಗಳು ಕನಿಷ್ಟ ಸೌಲಭ್ಯ ಕೂಡ ಕೊಡ್ತಾ ಇಲ್ಲ ಅಂತ ಆರೋಪ ಮಾಡ್ತಿದ್ದಾರೆ. ಆದ್ರೆ ಜೈಲು ಅಧಿಕಾರಿಗಳು ಮಾತ್ರ ಜೈಲ್ ಮ್ಯಾನುವೆಲ್​ನಲ್ಲಿ ಏನಿದೆಯೋ ಅದನ್ನೆಲ್ಲಾ ಕೊಟ್ಟಾಗಿದೆ. ನಾವ್ ಕೊಡೋದು ಇಷ್ಟೇ ಅಂತ ಖಂಡತುಂಡವಾಗಿ ಹೇಳ್ತಾ ಇದ್ದಾರೆ.

ಯೆಸ್ ಜೈಲಿನಲ್ಲಿರೋರಿಗೆ ಸಮಯ ಕಳೆಯೋದೇ ದೊಡ್ಡ ಪ್ರಯಾಸವಾಗಿರುತ್ತೆ. ಶಿಕ್ಷೆ ಆದ ಕೈದಿಗಳಿಗೆ ಏನಾದ್ರೂ ಕೆಲಸ ಮಾಡೋದಕ್ಕೆ ಕೊಡ್ತಾರೆ. ಆದ್ರೆ ವಿಚಾರಣಾಧೀನ ಕೈದಿಗಳು, ಅದ್ರಲ್ಲೂ ದರ್ಶನ್​ರಂಥಾ ಸೆಲೆಬ್ರಿಟಿಗಳನ್ನ ಭದ್ರತೆಯ ದೃಷ್ಟಿಯಿಂದ ಬ್ಯಾರಕ್​ನಲ್ಲಿ ಕೂಡಿ ಹಾಕ್ತಾರೆ. ಖುದ್ದು ದರ್ಶನ್ ಹೇಳಿಕೊಂಡಂತೆ ಬಿಸಿಲಿಗೂ ಬಿಡದಂತೆ ಜೈಲು ಅಧಿಕಾರಿಗಳು ಕೂಡಿ ಹಾಕ್ತಾ ಇದ್ದಾರೆ. ಬಿಸಿಲು ಕಾಣದೇ ಕೈಯೆಲ್ಲಾ ಫಂಗಸ್ ಬಂದ ವಿಷ್ಯ ಖುದ್ದು ದಾಸ ಹೇಳಿಕೊಂಡಿದ್ದ.

ಸೆಷೆನ್ಸ್ ಕೋರ್ಟ್​​ ದರ್ಶನ್​ಗೆ ವಾಕಿಂಗ್​ಗೆ ಅವಕಾಶ ಕೊಡಿ ಅಂತ ಹೇಳಿದ ಮೇಲೆ ಜೈಲು ಆವರಣದಲ್ಲಿ ವಾಕಿಂಗ್​ಗೆ ಅವಕಾಶ ನೀಡಿದ್ದಾರೆ. ಬೆಳಿಗ್ಗೆ 6 ರಿಂದ ಏಳು ಗಂಟೆವರೆಗೂ ವಾಕಿಂಗ್ ಮಾಡೋ ದರ್ಶನ್​ಗೆ 7 ಗಂಟೆಗೆಲ್ಲಾ ತಿಂಡಿ ಕೊಡ್ತಾರಂತೆ. ಆ ಬಳಿಕ ಊಟದ ಸಮಯದವರೆಗೂ ಮತ್ತೆ ಬ್ಯಾರಕ್​ನಲ್ಲಿ ಕೂಡಿ ಹಾಕ್ತಾರೆ. ಭರ್ತಿ ಅರ್ಧ ದಿನ ಸಮಯ ಕಳೆಯೋದೇ ದೊಡ್ಡ ಸವಾಲು. ಸೋ ದಾಸ ಸಮಯ ಕಳೆಯೋದಕ್ಕಂತ ಪುಸ್ತಕದ ಮೊರೆ ಹೋಗಿದ್ದಾನಂತೆ.

ಹೌದು ಅಚ್ಚರಿಯ ವಿಚಾರ ಅಂದ್ರೆ ದರ್ಶನ್ ಜೈಲು ಲೈಬ್ರರಿಯಿಂದ 16 ಪುಸ್ತಕಗಳನ್ನ ತೆಗೆದುಕೊಂಡಿದ್ದು, ಅದ್ರಲ್ಲಿ ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮಹಂಸರ ಪುಸ್ತಕಗಳಿವೆಯಂತೆ. ಭಗವದ್ಗೀತೆ ಕೂಡ ಪಡೆದುಕೊಂಡಿರೋ ದರ್ಶನ್ ಅದನ್ನ ಓದುವ ಪ್ರಯತ್ನ ಮಾಡ್ತಾ ಇದ್ದಾರಂತೆ.

ಬಹುಶಃ ಸೂಪರ್ ಸ್ಟಾರ್ ಆಗಿ ಐಷಾರಾಮಿ ಜೀವನ ನಡೆಸಿದ ವ್ಯಕ್ತಿ ಜೈಲು ಸೇರಿ, ಹಾಸಿಗೆ ದಿಂಬಿಗೂ ಪರದಾಡೋ ಸ್ಥಿತಿ ಬಂದಾಗ ಎಂಥವರಿಗೂ ಒಂದು ರೀತಿ ವೈರಾಗ್ಯ ಬರೋದು ಸಹಜ. ದರ್ಶನ್​ಗೂ ಅಂಥದ್ದೇ ವೈರಾಗ್ಯ ಬಂದಂತೆ ಕಾಣ್ತಾ ಇದೆ. ಅಂತೆಯೇ ಆಧ್ಯಾತ್ಮಿಕ ಪುಸ್ತಕಗಳನ್ನ ಓದೋದ್ರ ಕಡೆಗೆ ಆಸಕ್ತಿ ಬಂದಿದೆ.

ಕೋಟಿ ಕೋಟಿ ಆಸ್ತಿ ಇದೆ.. ಆದ್ರೆ ಅನುಭವಿಸೋದಕ್ಕೆ ಸಾಧ್ಯ ಇಲ್ಲ. ಅಮ್ಮ, ತಮ್ಮ, ಮಡದಿ, ಮಗ ಎಲ್ಲಾ ಇದ್ದಾರೆ ಆದ್ರೆ ಅವರ ಜೊತೆ ನೆಮ್ಮದಿಯಾಗಿ ಬದುಕೋಕೆ ಅವಕಾಶ ಇಲ್ಲ. ಅಭಿಮಾನಿಗಳ ದಂಡೇ ಇದೆ ಆದ್ರೆ ಕಣ್ಣೆದರು ಇರೋದು ಮಾತ್ರ ಕುಖ್ಯಾತ ಕೈದಿಗಳು.. ಪರಿಸ್ಥಿತಿ ಹೀಗಿರೋವಾಗ ದರ್ಶನ್ ನೆಮ್ಮದಿಗಾಗಿ ಆಧ್ಯಾತ್ಮಿಕತೆಯತ್ತ ಹೊರಳಿದ್ರೆ ಅಚ್ಚರಿ ಏನೂ ಇಲ್ಲ ಬಿಡಿ.
ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ...

Related Video