ಜಂಟಲ್‌ಮ್ಯಾನ್ ಅಪ್ಪು: ರಮ್ಯಾ ಕನಸನ್ನು ನನಸು ಮಾಡ್ಲೇ ಇಲ್ಲ!

ಅಪ್ಪು ಜೊತೆ 'ಆಕಾಶ್', 'ಅಭಿ', 'ಅರಸು' ಸಿನಿಮಾಗಳಲ್ಲಿ ಮೋಹಕ ತಾರೆ ರಮ್ಯಾ ನಟಿಸಿದ್ದರು. ನಾನು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವಾಗ ನಾವಿಬ್ಬರೂ ಒಟ್ಟಿಗೆ ನಟಿಸೋಣ ಎಂದು ಅಪ್ಪು ರಮ್ಯಾ ಅವರಿಗೆ ಹೇಳಿದ್ದರಂತೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ನಮ್ಮನ್ನಗಲಿ ಇಂದಿಗೆ ಒಂದು ವರ್ಷವಾಗಿದೆ. ಬರೀ ಅವರ ಸಮಾಧಿ ಬಳಿ ಅಲ್ಲದೇ ರಾಜ್ಯಾದ್ಯಂತ ಅವರ ಒಂದನೇ ವರ್ಷದ ಪುಣ್ಯ ತಿಥಿ ನಡೆದಿದೆ. ಈ ವೇಳೆ ಬರೀ ಚಿತ್ರರಂಗವಷ್ಟೇ ಅಲ್ಲದೇ, ವಿವಿಧ ಕ್ಷೇತ್ರದ ಗಣ್ಯರು ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ವಿಶೇಷವಾಗಿ ಅಪ್ಪು ಜೊತೆ 'ಆಕಾಶ್', 'ಅಭಿ', 'ಅರಸು' ಸಿನಿಮಾಗಳಲ್ಲಿ ಮೋಹಕ ತಾರೆ ರಮ್ಯಾ ನಟಿಸಿದ್ದರು. ನಾನು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವಾಗ ನಾವಿಬ್ಬರೂ ಒಟ್ಟಿಗೆ ನಟಿಸೋಣ ಎಂದು ಅಪ್ಪು ರಮ್ಯಾ ಅವರಿಗೆ ಹೇಳಿದ್ದರಂತೆ. ಆ ಕನಸನ್ನು ಪುನೀತ್ ನನಸು ಮಾಡ್ಲೇ ಇಲ್ಲ!

ಇನ್ನು ಪುನೀತ್ ರಾಜ್‌ಕುಮಾರ್ ಜೊತೆ ನಾನು ಸಾಕಷ್ಟು ವಿಷಯ ಚರ್ಚೆ ಮಾಡಿದ್ದೆ. ಅಪ್ಪು ಡೈರೆಕ್ಷನ್ ಮಾಡಿದ್ರೆ ನಾನೇ ಹೀರೋಯಿನ್ ಅಂತ ಹೇಳಿದ್ದರು. ಶಿವಣ್ಣ ಅವರ ಹಾಡಿಗೆ ನಾನು ಕೊರಿಯೋಗ್ರಫಿ ಮಾಡಬೇಕು ಎಂದು ಪುನೀತ್ ಆಸೆಪಟ್ಟಿದ್ದರು ಎಂದು ರಮ್ಯಾ ಹೇಳಿದ್ದಾರೆ. ಜೊತೆಗೆ ಇತ್ತೀಚೆಗಷ್ಟೇ ನಡೆದ ಪುನೀತ ಪರ್ವ ಕಾರ್ಯಕ್ರಮದಲ್ಲಿ ಅಪ್ಪು ಬಗ್ಗೆ ರಮ್ಯಾ ಕೆಲವೊಂದು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ಹಂಚಿಕೊಂಡಿದ್ದರು. ಶೂಟಿಂಗ್ ವೇಳೆ ಅಪ್ಪು ನಡೆದುಕೊಳ್ಳುತ್ತಿದ್ದ ರೀತಿ, ವ್ಯಕ್ತಿತ್ವದ ಕುರಿತು ಅಪ್ಪು ಅವರೇ ನನಗೆ ಡಾನ್ಸ್ ಹೇಳಿಕೊಡುತ್ತಿದ್ದರು. ನನಗೆ ಡ್ಯಾನ್ಸ್ ಸ್ಟೆಪ್ಸ್ ಬರುತ್ತಿಲ್ಲ ಅಂದಾಗ ಮಾಸ್ಟರ್ ಬಳಿ ಹೋಗಿ ಕೆಲವು ಸ್ಟೆಪ್ಸ್ ಬದಲಾಯಿಸುತ್ತಿದ್ದರು. ಇವತ್ತು ಈ ವೇದಿಕೆ ಮೇಲೆ‌ ಇದ್ದೇನೆ ಅಂದ್ರೆ ಅದಕ್ಕೆ ಅಣ್ಣಾವ್ರ ಕುಟುಂಬವೇ ಕಾರಣ ಅಂತಾ ರಮ್ಯಾ ತಿಳಿಸಿದ್ದರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Related Video