ಮುಂದಿನ ರಾಯರ ಆರಾಧನೆಗೆ ಬಂದು ಭಕ್ತಿ ಗೀತೆ ಹಾಡುತ್ತೇನೆ ಎಂದಿದ್ದರು ಪುನೀತ್!
ಚಿತ್ರನಟ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣ ಇಡೀ ನಾಡನ್ನೇ ಶೋಕದಲ್ಲಿ ಮುಳುಗಿಸಿದೆ. ಅಪ್ಪು ಅಗಲುವಿಕೆಯನ್ನೂ ಯಾರಿಂದಲೂ ಇನ್ನೂ ಒಪ್ಪಿಕೊಳ್ಳಲಾಗುತ್ತಿಲ್ಲ. ಲಕ್ಷಾಂತರ ಅಭಿಮಾನಿಗಳು, ಕುಟುಂಬದವರು, ಸ್ನೇಹಿತರು ಇನ್ನೂ ಆಘಾತದಿಂದ ಹೊರ ಬಂದಿಲ್ಲ.
ಬೆಂಗಳೂರು (ನ. 01): ಚಿತ್ರನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಅಕಾಲಿಕ ಮರಣ ಇಡೀ ನಾಡನ್ನೇ ಶೋಕದಲ್ಲಿ ಮುಳುಗಿಸಿದೆ. ಅಪ್ಪು ಅಗಲುವಿಕೆಯನ್ನೂ ಯಾರಿಂದಲೂ ಇನ್ನೂ ಒಪ್ಪಿಕೊಳ್ಳಲಾಗುತ್ತಿಲ್ಲ. ಲಕ್ಷಾಂತರ ಅಭಿಮಾನಿಗಳು, ಕುಟುಂಬದವರು, ಸ್ನೇಹಿತರು ಇನ್ನೂ ಆಘಾತದಿಂದ ಹೊರ ಬಂದಿಲ್ಲ. ಇನ್ನು ಪುನೀತ್ ಸಾವಿನ ನಂತರ ಮಂತ್ರಾಲಯ ಭೇಟಿಯ ಸಂದರ್ಭದ ವಿಡಿಯೋವೊಂದು ವೈರಲ್ ಆಗುತ್ತಿದೆ.
ಕಳೆದ ವರ್ಷ ಮಾ.2 ರಂದು ಶ್ರೀಗುರುವೈಭವೋತ್ಸವದಲ್ಲಿ ಭಾಗವಹಿಸಿದ್ದ ಪುನೀತ್ ಮುಂದಿನ ರಾಯರ ಆರಾಧನೆಗೆ (Mantralaya) ಬಂದು ಭಕ್ತಿ ಗೀತೆ ಹಾಡುತ್ತೇನೆಂದು ಹೇಳುತ್ತಿದ್ದ ವೇಳೆ ಅವರ ಹಿಂಬದಿಯಲ್ಲಿದ್ದ ರಾಯರ ಮುಕ್ಕೂಟ, ಬೆಳ್ಳಿ ಮೂರ್ತಿ ಹಾಗೂ ವೀಣೆ ಉಯ್ಯಾಲೆ ಮೇಲಿಂದ ಜಾರಿತ್ತು. ಈ ವಿಡಿಯೋ ಅವರ ಸಾವಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ಗೊಂಡಿತ್ತು. ಇದಕ್ಕೂ, ಪುನೀತ್ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಸ್ಪಷ್ಟಪಡಿಸಿದ್ದಾರೆ.