ಫೆಬ್ರವರಿ ಫೆಸ್ಟಿವಲ್‌ಗೆ ಸಜ್ಜಾಗಿದೆ ಸ್ಯಾಂಡಲ್‌ವುಡ್: ವೇದ ಬಳಿಕ ಬಹುದೊಡ್ಡ ಸಂಭ್ರಮದಲ್ಲಿ ಚಿತ್ರರಂಗ!
ಈ ತಿಂಗಳು ಪೂರ್ತಿ ಕನ್ನಡ ಚಿತ್ರರಂಗ ಫುಲ್ ಬ್ಯುಸಿಯಾಗಿರೋದಲ್ಲದೇ ಸಿನಿ ಪ್ರೇಕ್ಷಕರನ್ನ ಯದ್ವಾ ತದ್ವ ರಂಜಿಸಿಲಿದೆ. ಯಾಕಂದ್ರೆ ಫೆಬ್ರವರಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಫೆಂಟಾಸ್ಟಿಕ್ ಕಾರ್ಯಕ್ರಮಗಳು ನಡೆಯುತ್ತಿವೆ.
ಇಂಡಿಯನ್ ಸಿನಿ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಕಾಶಮಾನವಾಗಿ ಬೆಳಕು ಚೆಲ್ಲುತ್ತಿರೋದು ನಮ್ಮ ಸ್ಯಾಂಡಲ್‌ವುಡ್. ಕಳೆದ ವರ್ಷ ಕನ್ನಡದ ಚಿತ್ರರಂಗದ ವೈಭವ ಹೇಗಿತ್ತು ಅನ್ನೋದು ನೀವೆಲ್ಲಾ ನೋಡಿದ್ದೀರಾ. ಆದ್ರೆ ಈ ವರ್ಷ ಜನವರಿ ತಿಂಗಳು ಕಳೆದ್ರು ಕನ್ನಡ ಚಿತ್ರರಂಗದಲ್ಲಿ ಯಾವ ವೈಭವ, ವೈಬ್ರೇಷನ್ ಆಗಲಿಲ್ಲ. ಡಿಸೆಂಬರ್ ಕೊನೆಯಲ್ಲಿ ಬಂದ ಶಿವಣ್ಣನ ವೇದ ಸಿನಿಮಾ ಬಿಟ್ರೆ ಕನ್ನಡದ ಮತ್ತಿನ್ಯಾವ ದೊಡ್ಡ ಸ್ಟಾರ್ ಸಿನಿಮಾಗಳು ಬೆಳ್ಳಿತೆರೆ ಮೇಲೆ ಬರಲಿಲ್ಲ, ವಿಜೃಂಭಿಸಲೂ ಇಲ್ಲ. ಜನವರಿ ತಿಂಗಳಲ್ಲಿ ಎಂಟರ್ಟೈನ್ಮೆಂಟ್ ಮಾಡದ ಸ್ಯಾಂಡಲ್ವುಡ್ ಈಗ ಫೆಬ್ರವರಿಯಲ್ಲಿ ಭಾರಿ ಫೇಸ್ಟಿವೆಲ್‌ಗೆ ಸಜ್ಜಾಗಿದೆ. 2023ರ ಜನವರಿ ತಿಂಗಳು ಪೂರ್ತಿ ಸ್ಯಾಂಡಲ್‌ವುಡ್ ಕಾಲಿ ಕೂತಿತ್ತು. ಯಾವ ಬಿಗ್ ಸ್ಟಾರ್ಸ್ ಸಿನಿಮಾಗಳು ತೆರೆ ಮೇಲೆ ಗೆಲ್ಲಲೂ ಇಲ್ಲ. ಟ್ರೈಲರ್, ಟೀಸರ್ ಬರಲೇ ಇಲ್ಲ. ಆದ್ರೆ ಫೆಬ್ರವರಿಯಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಫೆಸ್ಟಿವಲ್ ಧಮಾಕ ನಡೆಯಲಿದೆ.
ಈ ತಿಂಗಳು ಪೂರ್ತಿ ಕನ್ನಡ ಚಿತ್ರರಂಗ ಫುಲ್ ಬ್ಯುಸಿಯಾಗಿರೋದಲ್ಲದೇ ಸಿನಿ ಪ್ರೇಕ್ಷಕರನ್ನ ಯದ್ವಾ ತದ್ವ ರಂಜಿಸಿಲಿದೆ. ಯಾಕಂದ್ರೆ ಫೆಬ್ರವರಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಫೆಂಟಾಸ್ಟಿಕ್ ಕಾರ್ಯಕ್ರಮಗಳು ನಡೆಯುತ್ತಿವೆ. ಕನ್ನಡದ ಚಿತ್ರರಂಗದಲ್ಲಿ ಫೆಬ್ರವರಿ ಫೆಸ್ಟಿವೆಲ್ ಶುರುಮಾಡೋದೆ ರಿಯಲ್ ಸ್ಟಾರ್ ಉಪೇಂದ್ರ. ಉಪೇಂದ್ರ ಅಂದ್ಮೇಲೆ ಎಂಟರ್ಟೈನ್ಮೆಂಟ್ಬಗ್ಗೆ ಹೊಸದಾಗೇನೂ ಹೇಳ್ಬೇಕಿಲ್ಲ. ಅದರ ಲೆವೆಲ್ ಬೇರೆಯದ್ದೇ ಆಗಿರುತ್ತೆ. ಉಪ್ಪಿಯ ಫಸ್ಟ್ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಮಾಸ್ ಸಾಂಗ್ ಫೆಬ್ರವರಿ ನಾಲ್ಕನೇ ತಾರೀಖು ರಿಲೀಸ್ ಆಗ್ತಿದೆ. ಹೈದರಾಬಾದ್ನಲ್ಲಿ ಈ ಇವೆಂಟ್ ನಡೆಯುತ್ತಿದೆ.
ಎರಡೂವರೆ ವರ್ಷದ ಬಳಿಕ ಹಾಸಿಗೆಯಿಂದ ಎದ್ದು ಬಂದ ನಟಿ ರಿಷಿಕಾ; ವಿಡಿಯೋ ವೈರಲ್
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಂಜಯ್ ದತ್ ಜೊತೆ ಕೆಡಿ ಸಿನಿಮಾ ಶೂಟಿಂಗ್ ಫ್ಲೋರ್ಗೆ ಹೋಗಿದ್ದಾರೆ. ಆ ಖುಷಿ ಧ್ರುವನ ಫ್ಯಾನ್ಸ್ಗೆ ಒಂದ್ ಕಡೆ ಆದ್ರೆ ಮತ್ತೊಂದ್ ಕಡೆ ಅದ್ಧೂರಿ ಹುಡುಗ ಮತ್ತೊಂದು ಮಾಸ್ ಎಂಟರ್ಟೇಬರ್ 'ಮಾರ್ಟಿನ್' ಸಿನಿಮಾದಿಂದ ಈ ತಿಂಗಳು ಬಿಗ್ ಸಪ್ರೈಸ್ ಒಂದು ಸಿಕ್ತಾ ಇದೆ. ಇಷ್ಟು ದಿನ ತಣ್ಣಗಿದ್ದ ಮಾರ್ಟಿನ್ ಈ ಫೆಬ್ರವರಿಯಿಂದ ಸ್ಯಾಂಡಲ್ವುಡ್ ಅಖಾಡಕ್ಕೆ ಇಳಿಯಲಿದ್ದು, ಮಾರ್ಟಿನ್ ಟೀಸರ್ ಫೆಬ್ರವರಿ 23ಕ್ಕೆ ರಿಲೀಸ್ ಅಂತ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆಪ್ತಬಳಗ ಮಾಹಿತಿ ನೀಡಿದೆ. ಫೆಬ್ರವರಿ ಫೆಸ್ಟಿವೆಲ್ನ ವೈಬ್ ಹೆಚ್ಚಿಸೋಕೆ ಡಾಲಿ ಕೂಡ ಕೈ ಜೋಡಿಸಿದ್ದಾರೆ. ನಟ ರಾಕ್ಷಸ ಡಾಲಿ ಧನಂಜಯ್ ನಟನೆಯ ಮೋಸ್ಟ್ ಎಕ್ಸ್ಪೆಕ್ಟೆಡ್ ಹೊಯ್ಸಳ ಸಿನಿಮಾ ಮಾರ್ಚ್ 30ಕ್ಕೆ ತೆರೆ ಮೇಲೆ ಬರೋದಾಗಿ ತಿಳಿಸಿದೆ. ಆದ್ರೆ ಫೆಬ್ರವರಿಯ ಎರಡನೇ ವಾರ ಹೊಯ್ಸಳ ಟೀಸರ್ ರಿಲೀಸ್ ಆಗ್ತಿದೆ.
ಈ ತಿಂಗಳ ಮತ್ತೆರಡು ಬಹು ದೊಡ್ಡ ಇವೆಂಟ್ ಅಂದ್ರೆ ಕಾರ್ನಾಟಕ ಚಲನಚಿತ್ರ ಕಪ್ ಮತ್ತು ಸೆಲೆಬ್ರೆಟಿ ಕ್ರಿಕೆಟ್ ಲೀಗ್. ಕಿಚ್ಚ ಸುದೀಪ್ ಹಾಗು ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್ ಸಾರಥ್ಯದ ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಮೆಂಟ್ ಬೆಂಗಳೂರಿನ ಚಿನ್ನಾಸ್ವಾಮಿ ಕ್ರಿಡಾಂಗಣದಲ್ಲಿ ನಡೆಯುತ್ತಿದೆ. ಫೆಬವರಿ 25 ಮತ್ತು 26ಕ್ಕೆ ಕೆಸಿಸಿ ಟೂರ್ನಮೆಂಟ್ ಆಯೋಜನೆ ಆಗಿದೆ. ಆ ದಿನ ಇಡೀ ಸ್ಯಾಂಡಲ್ವುಡ್ನ ತಾರೆಯರು ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆ ಸಿಸಿಎಲ್ ಕ್ರಿಕೆಟ್ ಟೂರ್ನಿ ಕೂಡ ಶುರುವಾಗ್ತಿದೆ. ಫೆಬವರಿ 18ರಿಂದ ಸಿಸಿಎಲ್ ನಡೆಯುತ್ತಿದೆ. ಹೀಗಾಗಿ ಈ ತಿಂಗಳು ಸ್ಯಾಂಡಲ್ವುಡ್ ಮಟ್ಟಿಗೆ ಫೆಂಟಾಸ್ಟಿಕ್ ಫೆಬ್ರವರಿ ಆಗಿರಲಿದೆ.