ಬಾಲಿವುಡ್’ನಲ್ಲಿ ಮತ್ತೊಂದು ರಾಮಾಯಣ: ರಾವಣನಾಗಿ ರಾಕಿಂಗ್ ಸ್ಟಾರ್?

ಬಾಲಿವುಡ್’ನಲ್ಲಿ ಮತ್ತೊಂದು ರಾಮಾಯಣ ಆಧಾರಿತ ಸಿನಿಮಾ ಬರುತ್ತಿದ್ದು, ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್ ಹಾಗೂ ಯಶ್ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

Share this Video
  • FB
  • Linkdin
  • Whatsapp

ಬಾಲಿವುಡ್’ನಲ್ಲಿ ರಾಮಾಯಣದ ಗಾಳಿ ಬೀಸುತ್ತಿದ್ದು, ಕಳೆದ ಒಂದು ವರ್ಷದಿಂದ ಬಿಟೌನ್ ರಾಮಾಯಣವನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದೆ. ಈ ಪ್ರಯತ್ನದಲ್ಲಿ ಬಾಲಿವುಡ್ ಕ್ಯೂಟ್ ಕಪಲ್ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಇದ್ದು, ಇದರ ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಹೆಸರೂ ಚಾಲ್ತಿಗೆ ಬಂದಿದೆ. ಆಲಿಯಾ ಹಾಗೂ ರಣಬೀರ್ ತಮ್ಮ ರಾಮಾಯಣ ಸಿನಿಮಾಗಾಗಿ ಯಶ್ ಅವರಿಗೆ ಬಿಗ್ ಆಫರ್ ಕೊಟ್ಟಿದ್ದಾರಂತೆ. ಇದು ನಿರ್ದೇಶಕ ನಿತೇಶ್ ತಿವಾರಿ ಅವರ ಡ್ರೀಮ್ ಪ್ರಾಜೆಕ್ಟ್ ಆಗಿದ್ದು, ಈ ಸಿನಿಮಾ ಶೂಟಿಂಗ್ ಡಿಸೆಂಬರ್‌ನಲ್ಲಿ ಪ್ರಾರಂಭವಾಗಲಿದೆ. ರಾಮನ ಅವತಾರದಲ್ಲಿ ರಣಬೀರ್, ಸೀತೆಯಾಗಿ ಆಲಿಯಾ ನಟಿಸುತ್ತಾರೆ. ಆದ್ರೆ ರಾವಣನ ಪಾತ್ರಕ್ಕೆ ಒಬ್ಬ ಖಡಕ್ ಇಮೇಜ್ ಇರೋ ಹೀರೋ ಬೇಕು. ಅದಕ್ಕಾಗಿ ರಾವಣನ ಪಾತ್ರದ ಫೈಲ್ ಈಗ ರಾಕಿಂಗ್ ಸ್ಟಾರ್ ಯಶ್ ಬಳಿ ಬಂದಿದೆ ಎನ್ನಲಾಗಿದೆ.

Related Video