
ಸಕ್ಸಸ್ ಮಧ್ಯೆ ವಿವಾದದ ಅಪಸ್ವರ; ಪೆರಾರದಲ್ಲಿ ಮಾತನಾಡಿದ್ದು ದೈವನರ್ತಕನಾ, ದೈವನಾ..!?
ಕಾಂತಾರ ಚಾಪ್ಟರ್-1 ತೆರೆಗೆ ಬಂದು 1 ವಾರ ಕಂಪ್ಲೀಟ್ ಆಗಿದೆ. ಇಲ್ಲಿವರೆಗೂ ವಿಶ್ವದಾದ್ಯಂತ ಸಿನಿಮಾ ಗಳಿಕೆ ಮಾಡಿರೋದು ಬರೊಬ್ಬರಿ 509 ಕೋಟಿ. ಆ ಮೂಲಕ 2022ರ ಕಾಂತಾರಕ್ಕೂ ಮೀರಿದ ಗಳಿಕೆಯನ್ನ ಚಾಪ್ಟರ್-1 ಒಂದೇ ವಾರದಲ್ಲಿ ಗಳಿಕೆ ಮಾಡಿದೆ. ಆದರೆ ಇದೀಗ ವಿವಾದದ ಗೂಡಾಗಿದೆ!
ಕಾಂತಾರ ಚಾಪ್ಟರ್-1(Kantara Chapter 1) ಮೊದಲ ವಾರ 500 ಕೋಟಿಯ ಗಡಿ ಮುಟ್ಟಿದೆ. ಈ ದಾಖಲೆಯ ಪ್ರದರ್ಶನ , ಕಲೆಕ್ಷನ್ ನಡುವೆ ದೈವದ ವಿಚಾರಕ್ಕೆ ಒಂದಿಷ್ಟು ವಾದ-ವಿವಾದಗಳು ಆರಂಭ ಆಗಿವೆ. ಒಂದು ಕಡೆ ತುಳು ಒಕ್ಕೂಟ, ದೈವಾರಾಧಕರ ಸಂಘ ಈ ಚಿತ್ರದಿಂದ ತುಳುನಾಡ ದೈವಗಳಿಗೆ ಅವಮಾನ ಆಗ್ತಿದೆ ಅಂದಿದ್ದಾರೆ. ಇನ್ನೊಂದು ಕಡೆಗೆ ನನ್ನ ಹೆಸರಲ್ಲಿ ಹಣ ಮಾಡ್ತಾ ಇರೋರಿಗೆ ಬುದ್ದಿ ಕಲಿಸ್ತಿನಿ ಅಂತ ದೈವ ಹೇಳಿದ ವಿಚಾರ ಕೂಡ ಸದ್ದು ಮಾಡ್ತಾ ಇದೆ. ಈ ಬಗ್ಗೆ ಚಿತ್ರತಂಡ ಹೇಳೋದೇನು..? ಆ ಕುರಿತ ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.
ಯೆಸ್ ಕಾಂತಾರ ಚಾಪ್ಟರ್-1 ತೆರೆಗೆ ಬಂದು 1 ವಾರ ಕಂಪ್ಲೀಟ್ ಆಗಿದೆ. ಇಲ್ಲಿವರೆಗೂ ವಿಶ್ವದಾದ್ಯಂತ ಸಿನಿಮಾ ಗಳಿಕೆ ಮಾಡಿರೋದು ಬರೊಬ್ಬರಿ 509 ಕೋಟಿ. ಆ ಮೂಲಕ 2022ರ ಕಾಂತಾರಕ್ಕೂ ಮೀರಿದ ಗಳಿಕೆಯನ್ನ ಚಾಪ್ಟರ್-1 ಒಂದೇ ವಾರದಲ್ಲಿ ಗಳಿಕೆ ಮಾಡಿದೆ.
ಹೌದು ಕಾಂತಾರ-1 ಬಗ್ಗೆ ಅನೇಕ ವಿವಾದದ ಅಪಸ್ವರಗಳು ಎದ್ದಿವೆ. ಈ ಸಿನಿಮಾ ನೋಡೋದಕ್ಕೆ ಬರುವವರು ದೈವದ ವೇಷ ತೊಟ್ಟು ಬರೊದು, ದೈವ ಆವಾಹನೆ ಆದವರಂತೆ ಮಾಡೋದು ವೈರಲ್ ಆದ ಮೇಲೆ ತುಳು ಒಕ್ಕೂಟದವರು ಪ್ರತಿಭಟನೆ ಮಾಡಿದ್ರು. ಈ ರೀತಿ ಮಾಡಬೇಡಿ ಅಂತ ಚಿತ್ರತಂಡ ಕೂಡ ಮನವಿ ಮಾಡಿತ್ತು.
ಕಾಂತಾರ ಸಿನಿಮಾದ ಮೂಲಕ ದೈವಾರಾಧನೆಗೆ ಅಪಚಾರ ಮಾಡಲಾಗಿದೆ ಅಂತ ದೈವ ನರ್ತಕರು, ದೈವಾರಾಧಕರು ಪಿಲಿಚಂಡಿ, ಬಲವಂಡಿ ದೈವದ ಮೊರೆ ಹೋಗಿದ್ರು. ಶ್ರೀ ಕ್ಷೇತ್ರ ಪೆರಾರ ಪಿಲಿಚಂಡಿ ದೈವದ ಮುಂದೆ ಸಾಮೂಹಿಕ ಪ್ರಾರ್ಥನೆ ಮಾಡಿದ್ರು. ಸಿನಿಮಾದಲ್ಲಿ ದೈವಾರಾಧನೆ ಬಳಕೆ ಬಗ್ಗೆ ದೂರು ಹೇಳಿದ್ದು, ದೈವದ ಆವೇಶವನ್ನು ಅನುಕರಣೆ ಮಾಡುತ್ತಿರುವ ಬಗ್ಗೆ ಕೂಡ ದೈವದೆದುರು ಪ್ರಶ್ನೆ ಕೇಳಿದ್ರು.
ಈ ವೇಳೆ ದೈವ ನುಡಿದಿದ್ದು, ‘ನನ್ನ ಹೆಸರಿನಲ್ಲಿ ಹಣ ಮಾಡುತ್ತಿರುವವರನ್ನು ನಾನು ನೋಡಿಕೊಳ್ಳುತ್ತೇನೆ. ಹಣವೆಲ್ಲಾ ಆಸ್ಪತ್ರೆ ಸೇರುವಂತೆ ಮಾಡುತ್ತೇನೆ. ಅಪಚಾರ ಮಾಡುವವರಿಗೆ ನಾನು ಬುದ್ದಿ ಕಲಿಸುತ್ತೇನೆ. ಇನ್ಮುಂದೆ ಎಲ್ಲಾ ದೈವಸ್ಥಾನಗಳಲ್ಲಿ ಚಿತ್ರೀಕರಣ ನಿಲ್ಲಿಸಿ. ನೀವು ಹೋರಾಟವನ್ನು ಮುಂದುವರಿಸಿ. ನಾನು ನಿಮ್ಮ ಬೆನ್ನ ಹಿಂದೆ ಇದ್ದೇನೆ’ ಅಂತ ಉತ್ತರ ನೀಡಿತ್ತು.
ಈ ವಿಚಾರ ಸದ್ಯ ಭಾರೀ ಚರ್ಚೆಯಾಗ್ತಾ ಇದೆ. ಹಾಗಾದ್ರೆ ಇಂಥದ್ದೊಂದು ಸಿನಿಮಾ ಮಾಡುವ ಮುನ್ನ ರಿಷಬ್ ಶೆಟ್ಟಿ ಌಂಡ್ ಟೀಂ ದೈವದ ಅನುಮತಿ ಪಡೆದಿರಲ್ವಾ..? ಖಂಡಿತ ಪಡೆದಿದ್ರು. ಚಾಪ್ಟರ್-1 ಮಾಡುವ ಮುನ್ನ ದೈವದ ಬಳಿ ಪ್ರಶ್ನೆ ಕೇಳಿದ್ರು. ಆಗ ದೈವ ಈ ಕುರಿತು ಧರ್ಮಸ್ಥಳ ಮಂಜುನಾಥ ಸನ್ನಿಧಾನದಲ್ಲಿ ಕೇಳಿ ಅಂದಿತ್ತು. ಧರ್ಮಸ್ಥಳ ಧರ್ಮಾದಿಕಾರಿಗಳ ಮಾರ್ಗದರ್ಶನ ಪಡೆದೇ ಸಿನಿತಂಡ ಸಿನಿಮಾ ಶುರುಮಾಡಿತ್ತು.
ಸಿನಿಮಾ ಚಿತ್ರೀಕರಣ ಸಮಯದಲ್ಲಿ ಕೆಲ ಅವಗಢಗಳು ಸಂಭವಿಸಿದ್ದನ್ನ ನೋಡಿ, ಆತಂಕಿತರಾಗಿದ್ದ ರಿಷಬ್ ಮತ್ತೆ ದೈವದ ಬಳಿಕ ಪ್ರಶ್ನೆ ಸಿನಿಮಾ ಮುಂದುವರೆಸಿದ್ರು. ರಿಲೀಸ್ ಟೈಂನಲ್ಲಿ ಖುದ್ದು ರಿಷಬ್ , ದೈವದ ಅನುಮತಿಯಿಲ್ಲದೇ ಇಷ್ಟು ದೊಡ್ಡ ಸಿನಿಮಾ ಆಗೋದು ಅಸಾಧ್ಯ ಅಂದಿದ್ರು.
2022ರ ಕಾಂತಾರ ಸಿನಿಮಾದಲ್ಲಿ ಒಂದು ಸನ್ನಿವೇಶ ಇದೆ. ಭೂಮಿ ವಿಚಾರಕ್ಕೆ ಪಂಜುರ್ಲಿ ದೈವದ ಬಳಿ ಪ್ರಶ್ನೆ ಕೇಳುವ ಭೂಮಾಲಿಕ ದೈವದ ಉತ್ತರ ಕೇಳಿ ಸಿಟ್ಟಾಗ್ತಾನೆ. ಇದು ದೈವ ಆಡಿದ ಮಾತೋ ಇಲ್ಲಾ ದೈವನರ್ತಕನ ಮನಸಿನ ಮಾತೋ ಅಂತಾನೇ. ಆಗ ನಾನು ದೈವ ಅಲ್ಲದೇ ಹೋಗಿದ್ರೆ ನನ್ನನ್ನ ಹುಡುಕಿ ಅಂತ ಹೇಳಿ ಕಾಡಿನ ನಡುವೆ ಮಾಯವಾಗುತ್ತೆ.
ಈಗ ರಿಯಲ್ ಲೈಫ್ನಲ್ಲೂ ಅಂಥದ್ದೇ ಸನ್ನಿವೇಶ ಬಂದಿದೆ. ನನ್ನ ಹೆಸರಲ್ಲಿ ದುಡ್ಡು ಮಾಡಿದವರು ಆಸ್ಪತ್ರೆ ಸೇರ್ತಾರೆ ಅಂತ ಹೇಳಿದ್ದು ಯಾರು..? ಅದು ದೈವ ನುಡಿಯಾ ಅಥವಾ ದೈವನರ್ತಕರ ನುಡಿಯಾ ಅಂತ ಪ್ರಶ್ನೆ ಮಾಡಿದ್ದಾರೆ ತುಳು ಸಂಶೋಧಕಿಯ ಡಾ ಲಕ್ಷ್ಮಿ ಜಿ ಪ್ರಸಾದ್
ದೈವ ಹೀಗೆ ಮಾತನಾಡೋದಕ್ಕೆ ಸಾಧ್ಯವೇ ಇಲ್ಲ ಅನ್ನೋ ಸಂಶೋದಕರು, ದೈವ ಎಂದೂ ದುಡ್ಡಿನ ಬಗ್ಗೆ ಮಾತಾನಾಡಲ್ಲ, ದುಡ್ಡು ಮಾಡಿದ್ರೇ ಶಿಕ್ಷೆ ಕೊಡ್ತೀನಿ ಅನ್ನೋದಿಲ್ಲ.ಇದೆಲ್ಲಾ ದೈವನರ್ತಕರ ಮಾತಷ್ಟೇ ಅಂದಿದ್ದಾರೆ.
ಕಾಂತಾರ ಸಿನಿಮಾದಲ್ಲಿ ತೋರಿಸಿರೋದು ಕೂಡ ನಿಜವಲ್ಲ ಅಂದಿರೋ ಇವರು, ಕೋರ್ಟ್ ಮೆಟ್ಟಿಲಲ್ಲಿ ನೋಡಿಕೊಳ್ಳುತ್ತೇನೆ ಅಂತ ದೈವ ಹೇಳೊದು , ಆ ವ್ಯಕ್ತಿ ಕೋರ್ಟ್ ಮೆಟ್ಟಿಲ ಮೇಲೆ ರಕ್ತ ಕಾರಿಕೊಂಡು ಸಾಯೋದು ಕೂಡ ಕಾಲ್ಪನಿಕವಾಗಿ ಹೆಣೆದ ದೃಶ್ಯ ಅಂತಾರೆ.
ಒಟ್ಟಾರೆ ಒಂದು ಕಡೆಗೆ ಅಮೋಘ ಸಕ್ಸಸ್ ಸಿಕ್ಕರೂ , ಕಾಂತಾರ ತಂಡಕ್ಕೆ ವಿವಾದಗಳು ಬೆನ್ನುಬಿದ್ದಿವೆ. ಅದ್ರಲ್ಲೂ ದೈವದ ವಿಚಾರದಲ್ಲಂತೂ ಈ ಸಿನಿಮಾ ಬಂದ ಮೇಲೆ ತುಳು ನಾಡು ರಣರಂಗವಾಗಿದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...