ಮೊದಲು ಕಲಿತದ್ದೇ ತಮಿಳು.. ರಶ್ಮಿಕಾ ಮಂದಣ್ಣ ಭಾಷಾಪ್ರೇಮಕ್ಕೆ ಬಹುಪರಾಕ್ ಹೇಳಲ್ವ? ಲೆಕ್ಕಾಚಾರ ಕರೆಕ್ಟ್‌ ..!

‘ನಾವು ಕುಬೇರ ಚಿತ್ರದ ಪ್ರಮೋಷನ್​ನ ಚೆನ್ನೈನಲ್ಲಿ ಆರಂಭಿಸಿದ್ದೇವೆ. ನನ್ನ ಬಾಲ್ಯ ಇಲ್ಲಿ ಕಳೆದ ಕಾರಣಕ್ಕೆ ಚೆನ್ನೈಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಇದೆ. ನನಗೆ ಖುಷಿ ಇದೆ. ನಾನು ಇವೇಂಟ್ ದಿನ ಸಾಕಷ್ಟು ನಕ್ಕಿದ್ದೇನೆ. ‘ನನ್ನ ಬಾಲ್ಯ ಚೆನ್ನೈನಲ್ಲೇ ಕಳೆದಿದ್ದೇನೆ. 

Share this Video
  • FB
  • Linkdin
  • Whatsapp

ಕಿರಿಕ್ ಬ್ಯೂಟಿ ರಶ್ಮಿಕಾ ಬೆಳೆದ ಎತ್ತರ ಎಂಥದ್ದು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ರಶ್ಮಿಕಾ ಈ ಪರಿಯ ಬೆಳವಣಿಗೆ ಹಿಂದೆ ಅದೃಷ್ಟ, ಪ್ರತಿಭೆ ಜೊತೆಗೆ ಆಕೆಯ ಚಾಲಾಕಿತನವೂ ಕಾರಣ ಅಂದ್ರೆ ತಪ್ಪಾಗಲ್ಲ. ರಶ್ ಚಾಲಾಕಿ ಚೆಲುವೆ ಅನ್ನೋದನ್ನ ಪ್ರೂವ್ ಮಾಡೋವಂಥಾ ಮತ್ತೊಂದು ಘಟನೆ ಈಗ ಚೆನ್ನೈನಲ್ಲಿ ನಡೆದಿದೆ.

ಯೆಸ್ ನಮ್ಮ ಕಿರಿಕ್ ಬ್ಯೂಟಿ ರಶ್ಮಿಕಾ ಅದ್ಯಾಪರಿಯ ಚಾಲಾಕಿ ಚೆಲುವೆ ಅನ್ನೋದನ್ನ ಹೇಳಲೇಬೇಕಿಲ್ಲ. ತನ್ನ ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ರಶ್ ಹೇಗೆ ಅವಕಾಶಗಳನ್ನ ಬಳಸಿಕೊಂಡು ಮೇಲೆ ಬಂದಳು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಅಂತೆಯೇ ಈ ಕೂರ್ಗಿ ಚೆಲುವೆ ಈಗ ಇಡೀ ಇಂಡಿಯಾದಲ್ಲೇ ನಂ.1 ನಟಿಮಣಿ.

ರಶ್ಮಿಕಾ ಎಲ್ಲೇ ಹೋದರೂ ನಾನು ಇದೇ ಊರವಳು ಅಂದುಬಿಡ್ತಾರೆ. ಈ ಹಿಂದೆ ಸಿಕಂದರ್ ಸಿನಿಮಾದ ಪ್ರಮೋಷನ್​ಗೆ ಹೈದ್ರಾಬಾದ್​ಗೆ ಬಂದಾಗ, ನಾನು ತೆಲುಗು ಅಮ್ಮಾಯಿ. ನಾನ್ ನಿಮ್ಮವಳೇ ಕಣ್ರೀ ಅಂದಿದ್ಳು ರಶ್ಮಿಕಾ.

ರಶ್ಮಿಕಾಳ ಈ ಹೇಳಿಕೆ ವಿರುದ್ದ ಕನ್ನಡ ಸಂಘಟನೆಗಳು ಕೆಂಡಾಮಂಡಲ ಆಗಿದ್ವು. ಸಿನಿಮಾ ಪ್ರಚಾರಕ್ಕಾಗಿ ಪಕ್ಕದೂರನ್ನ ನನ್ನೂರು ಅನ್ನೋ ಈ ನಟಿ ಅದೆಂಥಾ ಘಾಟಿ ಅಂತ ಜನ ಟ್ರೋಲ್ ಮಾಡಿದ್ರು. ಆದ್ರೆ ರಶ್ಮಿಕಾ ಟ್ರೋಲ್​ಗಳಿಗೆಲ್ಲಾ ತಲೆಕೆಡಿಸಿಕೊಳ್ಳೋ ಬೆಡಗಿನೇ ಅಲ್ಲ. ಅಂತೆಯೇ ಸದ್ಯ ನಾನು ತಮಿಳ್ ಪೆಣ್ ಅಂತಂದು ಕಣ್​​ಮಿಟುಕಿಸಿದ್ದಾರೆ ರಶ್ಮಿಕಾ.

ಸದ್ಯ ರಶ್ಮಿಕಾ ನಟನೆಯ ಕುಬೇರ ಸಿನಿಮಾ ರಿಲೀಸ್​​ಗೆ ಸಜ್ಜಾಗಿದೆ. ಧನುಷ್, ನಾಗಾರ್ಜುನ್ ನಟಿಸಿರೋ ಈ ಚಿತ್ರ ಪ್ಯಾನ್ ಇಂಡಿಯಾ ಮೂವಿಯಾದ್ರೂ ಮೂಲ ತಮಿಳು ಸಿನಿಮಾ. ಸೋ ಮೊದಲು ಚೆನ್ನೈನಲ್ಲಿ ಸಿನಿಮಾದ ಪ್ರಮೋಷನ್ ಶುರುವಾಗಿದೆ. ಪ್ರಮೋಷನ್​ಗೆ ಬಂದಿರೋ ರಶ್ಮಿಕಾ ಒಂದಿಷ್ಟು ಫೋಟೋಸ್ ಶೇರ್ ಮಾಡಿ ತನ್ನ ತಮಿಳು ಪ್ರೇಮದ ಬಗ್ಗೆ ಸುದೀರ್ಘ ಪೋಸ್ಟ್ ಹಾಕಿದ್ದಾರೆ.

‘ನಾವು ಕುಬೇರ ಚಿತ್ರದ ಪ್ರಮೋಷನ್​ನ ಚೆನ್ನೈನಲ್ಲಿ ಆರಂಭಿಸಿದ್ದೇವೆ. ನನ್ನ ಬಾಲ್ಯ ಇಲ್ಲಿ ಕಳೆದ ಕಾರಣಕ್ಕೆ ಚೆನ್ನೈಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಇದೆ. ನನಗೆ ಖುಷಿ ಇದೆ. ನಾನು ಇವೇಂಟ್ ದಿನ ಸಾಕಷ್ಟು ನಕ್ಕಿದ್ದೇನೆ. ‘ನನ್ನ ಬಾಲ್ಯ ಚೆನ್ನೈನಲ್ಲೇ ಕಳೆದಿದ್ದೇನೆ. ಅಪ್ಪ ಇಲ್ಲಿ ಕೆಲಸ ಮಾಡುತ್ತಿದ್ದರಿಂದ ನಾವು ಚೆನ್ನೈನಲ್ಲಿ ವಾಸಿಸುತ್ತಿದ್ದೆವು. ನಾನು ರಸ್ಕಿನ್ ಎಂಬ ಶಾಲೆಯಲ್ಲಿ ಓದಿದೆ ಮತ್ತು ಆ ಶಾಲೆ ಇನ್ನೂ ಇದೆಯೋ ಇಲ್ಲವೋ ನನಗೆ ತಿಳಿದಿಲ್ಲ. ಅದರ ನಂತರ ನಾವು ಕೂರ್ಗ್‌ಗೆ ಸ್ಥಳಾಂತರಗೊಂಡೆವು. ನಾನು ಕಲಿತ ಮೊದಲ ಭಾಷೆ ತಮಿಳು’ ಎಂದಿದ್ದಾರೆ. 
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

Related Video