Asianet Suvarna News Asianet Suvarna News

ಹುಟ್ಟಿದ 6 ತಿಂಗಳಿಗೆ ತೆರೆಗೆ, 27 ಚಿತ್ರಗಳು, ಸಾಮಾಜಿಕ ಕೆಲಸಗಳು, ಯಾವತ್ತೂ ಚಿರಸ್ಥಾಯಿ ಅಪ್ಪು!

ಅದು 1975, ಮಾರ್ಚ್‌ 17 ರಂದು ಚೆನ್ನೈ ಆಸ್ಪತ್ರೆಯಲ್ಲಿ ಡಾ. ರಾಜ್ ದಂಪತಿಗೆ ಹುಟ್ಟಿದ ಕಂದ ಪುನೀತ್ ರಾಜ್‌ಕುಮಾರ್. ಸಹೋದರರಾದ ಶಿವಣ್ಣ, ರಾಘಣ್ಣ, ಸಹೋದರಿಯರಾದ ಪೂರ್ಣಿಮಾ, ಲಕ್ಷ್ಮೀ ಅವರ ಮುದ್ದಿನ ತಮ್ಮ, ಪ್ರೀತಿಯ ಅಪ್ಪುವಾಗಿ ಬೆಳೆಯುತ್ತಾರೆ. 

First Published Nov 16, 2021, 5:50 PM IST | Last Updated Nov 16, 2021, 6:20 PM IST

ಬೆಂಗಳೂರು (ನ. 16): ಅದು 1975, ಮಾರ್ಚ್‌ 17 ರಂದು ಚೆನ್ನೈ ಆಸ್ಪತ್ರೆಯಲ್ಲಿ ಡಾ. ರಾಜ್ ದಂಪತಿಗೆ ಹುಟ್ಟಿದ ಕಂದ ಪುನೀತ್ ರಾಜ್‌ಕುಮಾರ್. ಸಹೋದರರಾದ ಶಿವಣ್ಣ, ರಾಘಣ್ಣ, ಸಹೋದರಿಯರಾದ ಪೂರ್ಣಿಮಾ, ಲಕ್ಷ್ಮೀ ಅವರ ಮುದ್ದಿನ ತಮ್ಮ, ಪ್ರೀತಿಯ ಅಪ್ಪುವಾಗಿ ಬೆಳೆಯುತ್ತಾರೆ. 6 ತಿಂಗಳಿಗೆ 'ಪ್ರೇಮದ ಕಾಣಿಕೆ' ಮೂಲಕ ತೆರೆಯೇರಿದ ಅದೃಷ್ಟವಂತ. ಆ ನಂತರ ಸಾಲು ಸಾಲು ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸುತ್ತಾರೆ. 'ಬೆಟ್ಟದ ಹೂ' ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆಯುತ್ತಾರೆ.

Puneeth Rajkumar: ನಾಗೇಂದ್ರ ಪ್ರಸಾದ್, ಗುರುಕಿರಣ್ ನುಡಿ ನಮನಕ್ಕೆ ಕಿಚ್ಚ ಸುದೀಪ್ ಧ್ವನಿ

ಅಪ್ಪನ ಎದುರು ನಟಿಸಿ ಸೈ ಎನಿಸಿಕೊಳ್ಳುತ್ತಾರೆ. ಚಿಕ್ಕಂದಿನಲ್ಲಿಯೇ ನಟನೆ ಮಾತ್ರವಲ್ಲ ಗಾಯನದಲ್ಲಿಯೂ ಹೆಸರು ಮಾಡುತ್ತಾರೆ. 2002 ರಲ್ಲಿ  ನಾಯಕನಟನಾಗಿ ತೆರೆ ಮೇಲೆ ಬರುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ 27 ಚಿತ್ರಗಳಲ್ಲಿ ನಟಿಸಿದ್ಧಾರೆ. 6 ರಾಜ್ಯ ಪ್ರಶಸ್ತಿ, 5 ಫಿಲ್ಮ್‌ಫೇರ್ ಪ್ರಶಸ್ತಿ, 4 ಸೈಮಾ ಪ್ರಶಸ್ತಿಗಳನ್ನು ಪಡೆದಿದ್ಧಾರೆ. ಪುನೀತ್ ದಿಢೀರನೇ ನಮ್ಮನ್ನಗಲಿ ಹೋಗಿರುವುದು ಅವರ ಕುಟುಂಬಕ್ಕೆ, ಚಿತ್ರರಂಗಕ್ಕೆ, ಇಡೀ ರಾಜ್ಯಕ್ಕೆ, ಅಭಿಮಾನಿಗಳಿಗೆ ದೊಡ್ಡ ಆಘಾತ. ಅಪ್ಪು ಅವರ ನಟನೆ, ಸಮಾಜಸೇವೆ, ಒಳ್ಳೆಯ ಕೆಲಸಗಳು, ಅವರ ವ್ಯಕ್ತಿತ್ವ ಯಾವತ್ತೂ ಚಿರಸ್ಥಾಯಿ.