'ಧರ್ಮಸ್ಥಳ ಫೈಲ್ಸ್ ' ಸಿನಿಮಾಗೆ ನಿರ್ಮಾಪಕ ಎ ಗಣೇಶ್ ಸಜ್ಜು; ಕಂಡೀಷನ್‌ಗೂ ಒಪ್ಪಿಗೆ!

ಹೌದು ಕಾಶ್ಮೀರ್ ಫೈಲ್ಸ್ ಮತ್ತು ದಿ ಕೇರಳ ಸ್ಟೋರಿ ಚಿತ್ರಗಳಲ್ಲಿ ಕೂಡ ನೈಜ ಕಥೆ ಇತ್ತು. ಹಲವು ನೈಜ ಘಟನೆಗಳನ್ನ ಆದರಿಸಿ ಮಾಡಿದ ಈ ಚಿತ್ರಗಳು ಬಾಕ್ಸಾಫೀಸ್​ನಲ್ಲಿ ಕೊಳ್ಳೆ ಹೊಡೆದಿದ್ವು. ಅದೇ ಮಾದರಿನಲ್ಲಿ ಧರ್ಮಸ್ಥಳ ಫೈಲ್ಸ್ ಮಾಡ್ತಿನಿ ಅಂತ ಹೊರಟಿದೆ ನಿರ್ಮಾಪಕ ಎ ಗಣೇಶ್ ತಂಡ.

Share this Video
  • FB
  • Linkdin
  • Whatsapp

ಕಾಶ್ಮೀರ್ ಫೈಲ್ಸ್, ದಿ ಕೇರಳ ಸ್ಟೋರಿ ಮಾದರಿಯಲ್ಲಿ ಧರ್ಮಸ್ಥಳ ಫೈಲ್ಸ್ ಸಿನಿಮಾ ಸಿನಿಮಾ ಮಾಡೋಕೆ ಸಜ್ಜಾಗಿದ್ದಾರೆ ಒಬ್ಬ ಕನ್ನಡ ನಿರ್ಮಾಪಕ. ಈಗಾಗ್ಲೇ ಈ ಟೈಟಲ್​ಗೆ ಫಿಲ್ಮ್ ಚೇಂಬರ್​ನಲ್ಲಿ ಒಪ್ಪಿಗೆ ಕೂಡ ಸಿಕ್ಕಿದೆ. ಹಾಗಾದ್ರೆ ‘ಧರ್ಮಸ್ಥಳ ಫೈಲ್ಸ್’ ಸಿನಿಮಾ ಬರೋದು ಪಕ್ಕಾನಾ..? ಇದ್ರಲ್ಲಿ ಏನೆಲ್ಲಾ ಇರಲಿದೆ..? ಆ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮ ಸದ್ಯ ದೇಶಾದ್ಯಂತ ಸುದ್ದಿ ಮಾಡಿದೆ. ಸದ್ಯ ಧರ್ಮಸ್ಥಳದಲ್ಲಿ ಶವಗಳನ್ನ ಹೂತಿಟ್ಟ ಆರೋಪದ ತನಿಖೆ ನಡೀತಾ ಇದ್ದು, ಗ್ರಾಮದಲ್ಲಿ ಉತ್ಖನನ ನಡೀತಾ ಇದೆ. ಈ ತನಿಖೆ ನಡೀತಾ ಇರೋ ಹೊತ್ತಲ್ಲೇ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್​​ನಲ್ಲಿ ಧರ್ಮಸ್ಥಳ ಫೈಲ್ಸ್ ಅನ್ನೋ ಸಿನಿಮಾದ ಟೈಟಲ್ ರೆಜಿಸ್ಟರ್ ಆಗಿದೆ. ಈ ಟೈಟಲ್​ಗೆ ಚೆಂಬರ್ ಒಪ್ಪಿಗೆ ಕೂಡ ಕೊಟ್ಟಿದೆ.

ಹೌದು ಕಾಶ್ಮೀರ್ ಫೈಲ್ಸ್ ಮತ್ತು ದಿ ಕೇರಳ ಸ್ಟೋರಿ ಚಿತ್ರಗಳಲ್ಲಿ ಕೂಡ ನೈಜ ಕಥೆ ಇತ್ತು. ಹಲವು ನೈಜ ಘಟನೆಗಳನ್ನ ಆದರಿಸಿ ಮಾಡಿದ ಈ ಚಿತ್ರಗಳು ಬಾಕ್ಸಾಫೀಸ್​ನಲ್ಲಿ ಕೊಳ್ಳೆ ಹೊಡೆದಿದ್ವು. ಅದೇ ಮಾದರಿನಲ್ಲಿ ಧರ್ಮಸ್ಥಳ ಫೈಲ್ಸ್ (Dharmasthala Files) ಮಾಡ್ತಿನಿ ಅಂತ ಹೊರಟಿದೆ ನಿರ್ಮಾಪಕ ಎ ಗಣೇಶ್ ತಂಡ.

ಹೌದು ಫಿಲ್ಮ್ ಚೇಂಬರ್ ಈ ಕುರಿತ ಕಾನೂನು ಸಮಸ್ಯೆಗಳಿಗೆ ನೀವೆ ಜವಾಬ್ದಾರರು ಅನ್ನೋ ಷರತ್ತು ಹಾಕಿಯೇ ಟೈಟಲ್ ಕೊಟ್ಟಿದೆ. ಈ ಕುರಿತು ಕಾನೂನು ಸಮಸ್ಯೆಗಳು ಬಂದ್ರೆ ಅದಕ್ಕೆ ಚೆಂಬರ್ ಹೊಣೆ ಆಗೋದಿಲ್ಲ ಅಂತ ಲೆಟರ್ ಬರೆಸಿಕೊಳ್ಳಲಾಗಿದೆ.

ಸದ್ಯ ಈ ಟೈಟಲ್​ನ ರೆಜಿಸ್ಟರ್ ಮಾಡಿಸಿರೋ ನಿರ್ಮಾಪಕ ಎ.ಗಣೇಶ್ ಇದನ್ನ ಸಿನಿಮಾ ಮಾಡೋದಾ.. ಅಥವಾ ವೆಬ್ ಸರಣಿ ಮಾಡೋದಾ ಅಂತ ತೀರ್ಮಾನ ಮಾಡಿಲ್ವಂತೆ. ಸ್ಕ್ರಿಪ್ಟ್ ಮತ್ತು ಕಾನೂನು ಪ್ರಕ್ರಿಯೆಗಳು ಕಂಪ್ಲೀಟ್ ಆದ ಮೇಲೆ ಈ ಬಗ್ಗೆ ಫೈನಲ್ ಮಾಡ್ತಿವಿ. ಆದ್ರೇ ಏನೇ ಮಾಡಿದ್ರೂ ಪ್ಯಾನ್ ಇಂಡಿಯಾ ಲೆವೆಲ್​ಗೆ ಮಾಡ್ತೀವಿ ಅಂದಿದ್ದಾರೆ.

ನಿರ್ಮಾಪಕ ಎ.ಗಣೇಶ್ ಈ ಹಿಂದೆ ದೇವರ ಮಗ, ಪಾಂಡುರಂಗ ವಿಠಲ, ದಂಡ ದಶಗುಣಂ ನಂತಹ ದೊಡ್ಡ ಸಿನಿಮಾಗಳನ್ನ ಮಾಡಿದವರು. ಸದ್ಯ ಧರ್ಮಸ್ಥಳ ಫೈಲ್ಸ್ ಮಾಡ್ತಿನಿ ಅಂತ ಸಿದ್ದವಾಗಿದ್ದು ಖ್ಯಾತ ಸಂಭಾಷಣೆಕಾರ ಎಂ.ಎಸ್ ರಮೇಶ್​ಗೆ ಸ್ಕ್ರಿಪ್ಟ್ ಹೊಣೆ ವಹಿಸಿದ್ದಾರಂತೆ. ಮಲಯಾಳಂ ನಿರ್ದೇಶಕ ವಿ.ಕೆ ಪ್ರಕಾಶ್ ನಿರ್ದೇಶನ ಮಾಡಲಿದ್ದಾರಂತೆ.

ಯಾವುದಾದ್ರೂ ವಿವಾದಗಳು ಸದ್ದು ಮಾಡಿದಾಗ ಅದರ ಬಗ್ಗೆ ಟೈಟಲ್ ರೆಜಿಸ್ಟರ್ ಮಾಡಿಸಿ ಸುದ್ದಿ ಮಾಡೋದು ನಮ್ಮ ಕನ್ನಡ ನಿರ್ಮಾಪಕರ ಹಳೇ ಚಾಳಿ. ಸೋ ಧರ್ಮಸ್ಥಳ ಫೈಲ್ಸ್ ಕೂಡ ಅಂಥದ್ದೇ ಗಿಮಿಕ್ಕಾ..? ಅಥವಾ ನಿಜಕ್ಕೂ ಈ ಬಗ್ಗೆ ಸಿನಿಮಾ ಅಥವಾ ವೆಬ್​​ಸರಣಿ ಬರುತ್ತಾ ಕಾದುನೋಡಬೇಕು.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

Related Video