Asianet Suvarna News Asianet Suvarna News

Head Bush Controversy: 'ವೀರಗಾಸೆ ಸಮುದಾಯಕ್ಕೆ ಅವಮಾನ ಮಾಡಿಲ್ಲ'

ಹೆಡ್‌ಬುಷ್‌ ವಿವಾದ ಕೊನೆಗೂ ಅಂತ್ಯಗೊಂಡಿದೆ. ವೀರಗಾಸೆ ಸಮುದಾಯಕ್ಕೆ ಅವಮಾನ ಮಾಡಿಲ್ಲ. ನಟ ಧನಂಜಯ ಬೆನ್ನಿಗೆ ನೊಳಂಬ ಲಿಂಗಾಯತ ಸಂಘ ನಿಂತಿದ್ದಾರೆ. ಹೌದು! ನಟ ಧನಂಜಯ ನೊಳಂಬ ಲಿಂಗಾಯತ ಸಂಘದ ಜೊತೆ ಮಾತುಕತೆಯನ್ನು ನಡೆಸಿದ್ದು, ಮಾತುಕತೆ ಬಳಿಕ ಸಂಘದ ಅಧ್ಯಕ್ಷ ಎಸ್.ಆರ್‌.ಪಾಟೀಲ್‌ ವೀರಗಾಸೆ ಸಮುದಾಯಕ್ಕೆ ಅಪಚಾರ ಮಾಡೋ ಭಾವನೆ ಧನಂಜಯ್‌ ಅವರಿಗಿಲ್ಲ.

First Published Oct 27, 2022, 2:50 AM IST | Last Updated Oct 27, 2022, 2:50 AM IST

ಹೆಡ್‌ಬುಷ್‌ ವಿವಾದ ಕೊನೆಗೂ ಅಂತ್ಯಗೊಂಡಿದೆ. ವೀರಗಾಸೆ ಸಮುದಾಯಕ್ಕೆ ಅವಮಾನ ಮಾಡಿಲ್ಲ. ನಟ ಧನಂಜಯ ಬೆನ್ನಿಗೆ ನೊಳಂಬ ಲಿಂಗಾಯತ ಸಂಘ ನಿಂತಿದ್ದಾರೆ. ಹೌದು! ನಟ ಧನಂಜಯ ನೊಳಂಬ ಲಿಂಗಾಯತ ಸಂಘದ ಜೊತೆ ಮಾತುಕತೆಯನ್ನು ನಡೆಸಿದ್ದು, ಮಾತುಕತೆ ಬಳಿಕ ಸಂಘದ ಅಧ್ಯಕ್ಷ ಎಸ್.ಆರ್‌.ಪಾಟೀಲ್‌ ವೀರಗಾಸೆ ಸಮುದಾಯಕ್ಕೆ ಅಪಚಾರ ಮಾಡೋ ಭಾವನೆ ಧನಂಜಯ್‌ ಅವರಿಗಿಲ್ಲ. ಜಯರಾಜ್‌ ಕತೆಯಲ್ಲಿದ್ದಂತೆ ಧನಂಜಯ್ ಸಿನಿಮಾವನ್ನು ಮಾಡಿದ್ದಾರೆ. ಒಬ್ಬ ನಟನ ಸಿನಿಮಾವನ್ನು ಸಿನಿಮಾದಂತೆಯೇ ನೋಡಬೇಕು. ಅಲ್ಲದೇ ಒಬ್ಬ ಕಲಾವಿದನ ಬೆಳವಣಿಗೆಯಲ್ಲಿ ಸಮಸ್ಯೆಯನ್ನು ಮಾಡಬೇಡಿ. ಧನಂಜಯ್ ಕ್ಷಮೆ ಕೇಳುವಂತೆದ್ದೇನು ಇಲ್ಲ. ವಿವಾದ ಬೆಳೆಸೋದು ಬೇಡ. ಇದನ್ನ ಇಲ್ಲಿಗೆ ಮುಗಿಸೋಣ ಎಂದು ಎಸ್.ಆರ್‌.ಪಾಟೀಲ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories