ಹೊಸ ಹೆಜ್ಜೆಯಿಟ್ಟ ರಶ್ಮಿಕಾ ಮಂದಣ್ಣ; ಜಗತ್ತನ್ನೇ ಹೆದರಿಸಲು ಸಜ್ಜಾದ ನ್ಯಾಷನಲ್ ಕ್ರಶ್!

ಇಷ್ಟು ದಿನ ಬಬ್ಲಿ ಬಬ್ಲಿ ಕ್ಯಾರೆಕ್ಟರ್​ಗಳನ್ನ ಮಾಡ್ತಾ ಫ್ಯಾನ್ಸ್​ ಹೃದಯ ಕದೀತಾ ಇದ್ದ ರಶ್ಮಿಕಾ ಈಗ, ಫ್ಯಾನ್ಸ್ ಹೃದಯ ಢವ ಢವ ಅನ್ನಬೇಕು ಹಾಗ್ ಮಾಡ್ತಿನಿ ಅಂತ ಸಜ್ಜಾಗಿದ್ದಾರೆ.

Share this Video
  • FB
  • Linkdin
  • Whatsapp

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಇಷ್ಟು ದಿನ ಬರೀ ಕ್ಯೂಟ್-ಬಬ್ಲಿ ಪಾತ್ರಗಳನ್ನ ಮಾಡಿಕೊಂಡು ಬಂದಿದ್ರು. ಆದ್ರೀಗ ಕಿರಿಕ್ ಬ್ಯೂಟಿ ಡಿಫ್ರೆಂಟ್ ಡಿಫ್ರೆಂಟ್ ಕ್ಯಾರೆಕ್ಟರ್​​ಗಳನ್ನ ಚೂಸ್ ಮಾಡ್ತಾ ಇದ್ದಾರೆ. ರಶ್ಮಿಕಾ ನಟಿಸಿರೋ ಥಮಾ ಅನ್ನೋ ಹಾರರ್​ ಮೂವಿ ಇನ್ನೇನು ರಿಲೀಸ್​ಗೆ ಸಜ್ಜಾಗಿದೆ. ಈ ನಡುವೆ ರಶ್ಮಿಕಾ ಇನ್ನೊಂದು ಹಾರರ್ ಮೂವಿಗೆ ಯೆಸ್ ಅಂದಿದ್ದಾರೆ.

ಹೆದರಿಸಲು ಸಜ್ಜಾದ ನ್ಯಾಷನಲ್ ಕ್ರಶ್; ಥಮಾ ನಂತ್ರ ಕಾಂಚನಾ-4ನಲ್ಲಿ ರಶ್ಮಿಕಾ!
ಯೆಸ್ ಇಷ್ಟು ದಿನ ಬಬ್ಲಿ ಬಬ್ಲಿ ಕ್ಯಾರೆಕ್ಟರ್​ಗಳನ್ನ ಮಾಡ್ತಾ ಫ್ಯಾನ್ಸ್​ ಹೃದಯ ಕದೀತಾ ಇದ್ದ ರಶ್ಮಿಕಾ ಈಗ, ಫ್ಯಾನ್ಸ್ ಹೃದಯ ಢವ ಢವ ಅನ್ನಬೇಕು ಹಾಗ್ ಮಾಡ್ತಿನಿ ಅಂತ ಸಜ್ಜಾಗಿದ್ದಾರೆ. ಕಾಂಚನಾ-4 ಸಿನಿಮಾದಲ್ಲಿ ನಟಿಸೋಕೆ ರಶ್ಮಿಕಾ ಸೈನ್ ಮಾಡಿದ್ದು, ರಾಘವ್ ಲಾರೆನ್ಸ್ ಜೊತೆಗೂಡಿ ಹೆದರಿಸೋದಕ್ಕೆ ಬರ್ತಾ ಇದ್ದಾರೆ.

ನಿಮಗೆ ಗೊತ್ತಿರೋ ಹಾಗೆ ಕಾಂಚನಾ ತಮಿಳಿನ ಸೂಪರ್ ಹಿಟ್ ಹಾರರ್ ಕಾಮಿಡಿ ಸಿನಿಮಾ ಸರಣಿ. ಇದೀಗ ಕಾಂಚನಾ-4 ಬರ್ತಾ ಇದ್ದು, ನಿರ್ದೇಶಕ ರಾಘವ್ ಲಾರೆನ್ಸ್ ಕಿರಿಕ್ ಬ್ಯೂಟಿನಾ ಈ ದೆವ್ವಗಳ ಕಿರಿಕ್ ಕಥೆಗೆ ಕಾಸ್ಟ್ ಮಾಡಿಕೊಂಡಿದ್ದಾರೆ.

ಇನ್ನೂ ಇದಕ್ಕೂ ಮುನ್ನ ರಶ್ಮಿಕಾ ನಟನೆಯ ಮತ್ತೊಂದು ಹಾರರ್ ಸಿನಿಮಾ ನಿಮ್ಮೆದುರು ಬರಲಿದೆ. ಬಾಲಿವುಡ್ ನ ಫೇಮಸ್ ಹಾರರ್ ಕಾಮಿಡಿ ಯೂನಿವರ್ಸ್​​ನ ಲೇಟೆಸ್ಟ್ ಮೂವಿ ‘ಥಾಮಾ’ನಲ್ಲಿ ಶ್ರೀವಲ್ಲಿ ದೆವ್ವದ ಅವತಾರದಲ್ಲಿ ಮಿಂಚಿದ್ದಾರೆ. ಇತ್ತೀಚಿಗಷ್ಟೇ ಬಂದ ಥಾಮಾ ಟೀಸರ್ ಸಖತ್ ಸದ್ದು ಮಾಡಿತ್ತು.

ರಶ್ಮಿಕಾ ಕರೀಯರ್​ನಲ್ಲಿ ಥಾಮಾ ಮೊಟ್ಟ ಮೊದಲ ಹಾರರ್ ಮೂವಿ. ಟೀಸರ್​ನಲ್ಲಿ ಕಿರಿಕ್ ಬ್ಯೂಟಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಇಲ್ಲಿ ಹಾರರ್ ಜೊತೆ ಥ್ರಿಲ್ ಕೂಡ ಇರುತ್ತೆ ಅನ್ನೋ ಸೂಚನೆ ಕೊಟ್ಟಿದ್ದಾರೆ.

ಇದಲ್ಲದೇ ರಶ್ಮಿಕಾ ಮೈಸಾ ಅನ್ನೋ ನಾಯಕಿ ಪ್ರಧಾನ ಌಕ್ಷನ್ ಸಿನಿಮಾದಲ್ಲಿ ಬೇರೆ ನಟಿಸ್ತಾ ಇದ್ದಾರೆ. ಇದ್ರಲ್ಲಿ ರಶ್ಮಿಕಾ ಌಕ್ಷನ್ ಕ್ವೀನ್ ಆಗಿ ಮಿಂಚಿಲಿದ್ದಾರಂತೆ. ಒಟ್ನಲ್ಲಿ ರಶ್ಮಿಕಾ ‘ಇಷ್ಟು ದಿನ ಒಂದು ಲೆಕ್ಕ ಇನ್ಮುಂದೆ ಬೇರೆ ಲೆಕ್ಕ’ ಅಂತ ರಶ್ಮಿಕಾ ಹೊಸ ಹೊಸ ಅವತಾರದಲ್ಲಿ ಬರೋದಕ್ಕೆ ಸಜ್ಜಾಗ್ತಿದ್ದಾರೆ. ಕಿರಿಕ್ ಬ್ಯೂಟಿಯ ಕ್ಯೂಟ್ & ಹಾಟ್ ಅವತಾರ ನೋಡಿದವರು, ಇನ್ಮುಂದೆ ಹೊಸ ಅವತಾರ ನೋಡ್ಲಿಕ್ಕೆ ಸಜ್ಜಾಗಿ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

Related Video