
'ಬಾ ನಲ್ಲೆ ಮಧುಚಂದ್ರಕೆ', 'ರಿಂಗ್ ರೋಡ್ ಶುಭಾ'ನಲ್ಲೂ ಇಂಥದ್ದೇ ಕಥೆ; ಮೇಘಾಲಯ ಕೇಸ್ ಸಿನಿಮಾ ಆಗುತ್ತಾ?
ಮೊದಲು ವರ ರಾಜ ರಘುವಂಶಿ ಮೃತದೇಹ ಪತ್ತೆಯಾಗಿತ್ತು. ಬಳಿಕ ಆತನ ಪತ್ನಿ ಸೋನಮ್ ರಘುವಂಶಿಯೇ ಪತಿಯ ಮರ್ಡರ್ ಮಾಡಿಸಿದ್ದು ಅನ್ನೋ ಬೆಚ್ಚಿಬೀಳಿಸೋ ಸಂಗತಿ ಬಯಲಾಗಿತ್ತು. ಸೋನಮ್ ತನ್ನ ಪ್ರಿಯತಮನಿಗಾಗಿ ಸುಪಾರಿ ಕೊಟ್ಟು ಕಟ್ಟಿಕೊಂಡ ಗಂಡನ ಕೊಲೆ ಮಾಡಿಸಿದ್ಳು.
ಇತ್ತೀಚಿಗೆ ಮೇಘಾಲಯದಲ್ಲಿ ನಡೆದ ರಾಜಾ ರಘುವಂಶಿ ಮರ್ಡರ್ ಕೇಸ್ ಇಡೀ ದೇಶಾದ್ಯಂತ ಸದ್ದು ಮಾಡಿದೆ. ಅದ್ರಲ್ಲೂ ನಮ್ಮ ಬಾ ನಲ್ಲೆ ಮಧುಚಂದ್ರಕೆ ಸಿನಿಮಾದ ಜೊತೆಗೆ ಇದನ್ನ ಹೋಲಿಕೆ ಮಾಡ್ತಾ ಇದ್ದಾರೆ. ಈ ಕಥೆಯನ್ನಿಟ್ಟುಕೊಂಡು ಬಾ ನಲ್ಲ ಮಧುಚಂದ್ರಕೆ ಅನ್ನೋ ಸಿನಿಮಾ ಮಾಡಬಹುದು ಅಂತ ಸಲಹೆ ಕೊಡ್ತಾ ಇದ್ದಾರೆ.
ಹೌದು, ಇತ್ತೀಚಿಗೆ ಮೇಘಾಲಯದಲ್ಲಿ ನಡೆದ ಮರ್ಡರ್ ಕೇಸ್ ಬಗ್ಗೆ ದೇಶಾದ್ಯಂತ ಚರ್ಚೆಯಾಗ್ತಾ ಇದೆ. ಅಸಲಿಗೆ ಮೇಘಾಲಯಕ್ಕೆ ಹನಿಮೂನ್ಗೆ ಅಂತ ಬಂದಿದ್ದ ಇಂದೋರ್ ಮೂಲದ ನವದಂಪತಿ ಮೇ 23ನೇ ತಾರೀಖು ಕಣ್ಮರೆ ಆಗಿದ್ರು. ಇದೊಂದು ಮಿಸ್ಸಿಂಗ್ ಕೇಸ್ ಅಂದುಕೊಂಡು ತನಿಖೆಗೆ ಇಳಿದಿದ್ದ ಪೊಲೀಸರಿಗೆ ಬಳಿಕ ರೋಚಕ ವಿವರಗಳು ಸಿಕ್ಕಿದ್ವು.
ಮೊದಲು ವರ ರಾಜ ರಘುವಂಶಿ ಮೃತದೇಹ ಪತ್ತೆಯಾಗಿತ್ತು. ಬಳಿಕ ಆತನ ಪತ್ನಿ ಸೋನಮ್ ರಘುವಂಶಿಯೇ ಪತಿಯ ಮರ್ಡರ್ ಮಾಡಿಸಿದ್ದು ಅನ್ನೋ ಬೆಚ್ಚಿಬೀಳಿಸೋ ಸಂಗತಿ ಬಯಲಾಗಿತ್ತು. ಸೋನಮ್ ತನ್ನ ಪ್ರಿಯತಮನಿಗಾಗಿ ಸುಪಾರಿ ಕೊಟ್ಟು ಕಟ್ಟಿಕೊಂಡ ಗಂಡನ ಕೊಲೆ ಮಾಡಿಸಿದ್ಳು.
ಇದನ್ನ ನೋಡಿದವರು 1993ರಲ್ಲಿ ಬಂದ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಬಾ ನಲ್ಲೆ ಮಧುಚಂದ್ರಕೆ ಸಿನಿಮಾವನ್ನ ನೆನಪಿಸಿಕೊಂಡಿದ್ರು. ಅಸಲಿಗೆ ಈ ಸಿನಿಮಾದಲ್ಲಿ ನಾಯಕ ನಾಯಕಿನ್ನ ಮಧುಚಂದ್ರಕೆ ಕರೆದೊಯ್ದು ಕೊಲೆ ಮಾಡ್ತಾನೆ. ಆದ್ರೆ ಸೋನಮ್ ಕೇಸ್ನಲ್ಲಿ ಪತ್ನಿಯೇ ಪತಿಯ ಕೊಲೆ ಮಾಡಿಸಿದ್ದಾಳೆ. ಅಷ್ಟು ಬಿಟ್ರೆ ಎಲ್ಲಾ ಸೇಮ್ ಟು ಟೇಮ್.
ಅಸಲಿಗೆ ಬಾ ನಲ್ಲೆ ಮಧುಚಂದ್ರಕೆ ಸಿನಿಮಾದ ಕಥೆ ಕೂಡ ನಿಜ ಘಟನೆಯೊಂದರ ಸ್ಪೂರ್ತಿಯಿಂದ ಮೂಡಿಬಂದಿತ್ತು. ಪೊಲೀಸ್ ಅಧಿಕಾರಿಯೊಬ್ರು ಹೇಳಿದ ಕ್ರೈಂ ಕಥೆಯೊಂದನ್ನ ಕೇಳಿ ಬಾ ನಲ್ಲೆ ಮಧುಚಂದ್ರಕೆ ಅನ್ನೋ ಕಾದಂಬರಿ ಬರೆದಿದ್ರು ನಾಗತಿಹಳ್ಳಿ ಚಂದ್ರಶೇಖರ್. ಮುಂದೆ ಅದೇ ಕಾದಂಬರಿ ಆಧರಿಸಿ ಈ ಸಿನಿಮಾ ಮಾಡಿದ್ರು.
ಇನ್ನೂ ಮೇಘಾಲಯ ಮರ್ಡರ್ ಕೇಸ್ಗೆ ಹೋಲಿಕೆಯಾಗುವಂಥಾ ಮತ್ತೊಂದು ಕನ್ನಡ ಸಿನಿಮಾ ಇದೆ. ಅದುವೇ ರಿಂಗ್ ರೋಡ್ ಶುಭಾ. 2015ರಲ್ಲಿ ಬಂದ ಈ ಸಿನಿಮಾ ಕೂಡ ಒಂದು ನೈಜ ಕಥೆಯನ್ನ ಆಧರಿಸಿ ಸಿದ್ದವಾಗಿತ್ತು. 2003ರಲ್ಲಿ ಶುಭಾ ಅನ್ನೋ ಯುವತಿ ಎಂಗೇಜ್ ಮೆಂಟ್ ಅಗಿದ್ದ ತನ್ನ ಭಾವಿ ಪತಿಯನ್ನ ಗೆಳೆಯನಿಗೋಸ್ಕರ ಕೊಲೆ ಮಾಡಿಸಿದ್ದಳು.
ಇದೀಗ ಮೇಘಾಲಯ ಮರ್ಡರ್ ಕೇಸ್ನ ನೋಡಿ ಈ ಸಿನಿಮಾಗಳನ್ನ ಜನ ನೆನಪು ಮಾಡಿಕೊಳ್ತಾ ಇದ್ದಾರೆ. ಅದ್ರಲ್ಲೂ ಮೇಘಾಲಯ ಹನಿಮೂನ್ ಮರ್ಡರ್ ಕೇಸ್ನ ಒಂದೊಂದು ವಿವರಗಳು ಕೂಡ ಬೆಚ್ಚಿ ಬೀಳಿಸೋ ತರಹ ಇದಾವೆ. ಸೋ ಇದನ್ನ ಆಧರಿಸಿ ಬಾ ನಲ್ಲ ಮಧುಚಂದ್ರಕೆ ಅನ್ನೋ ಸಿನಿಮಾ ಬಂದ್ರೂ ಅಚ್ಚರಿ ಏನಿಲ್ಲ.!