
ಕರ್ಣ ಸೀರಿಯಲ್‌ನಲ್ಲಿ ಏನಾಗ್ತಿದೆ? ಒತ್ತಾಯದ ಮದುವೆಗೆ ಪ್ರಾಣ ಪ್ರೇಮಿಗಳು ಬಲಿಯಾಗ್ತಾರಾ?
ಕುತೂಹಲಕರ ಘಟ್ಟದಲ್ಲಿ ಕರ್ಣ ಧಾರಾವಾಹಿ.. ಪ್ರಾಣ ಪ್ರೇಮಿಗಳ ಮದುವೆಗೆ ವಿಘ್ನ? ನಿತ್ಯಾ ಜೊತೆ ಕರ್ಣನಿಗೆ ಒತ್ತಾಯದ ಮದುವೆನಾ? ನಿಧಿಗೆ ಕರ್ಣ ಇಷ್ಟ, ಕರ್ಣನಿಗೂ ನಿಧಿ ಇಷ್ಟ..! ಆದರೇನು ಮಾಡೋದು? ಮುಂದಿನ ಕಥೆ ಏನಾಗುತ್ತೋ..!
ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುವ ಕರ್ಣ (Karna Serial) ಸೀರಿಯಲ್ ಕಥೆ ರೋಚಕ ಹಂತಕ್ಕೆ ತಲುಪಿದೆ. ಸದ್ಯ ಕರ್ಣನ ಮದುವೆ ಸನ್ನಿವೇಶ ನಡೀತಾ ಇದ್ದು, ಕರ್ಣ ನಿಧಿನಾ ಮದುವೆಯಾಗ್ತಾನೋ..? ನಿತ್ಯಾಳನ್ನ ಮದುವೆಯಾಗ್ತಾನೋ..? ಅಂತ ವೀಕ್ಷಕರು ಕಣ್ಣು ಮಿಟುಕಿಸದೇ ನೋಡ್ತಾ ಇದ್ದಾರೆ. ಕರ್ಣನ ಈ ಟ್ರಯಾಂಗಲ್ ಪ್ರೇಮ್ಕಹಾನಿ ಇಡೀ ಕರುನಾಡ ವೀಕ್ಷಕರ ಕುತೂಹಲ ಕೆರಳಿಸಿದೆ.
ಕರ್ಣ.. ಕನ್ನಡ ಕಿರುತೆರೆ ವೀಕ್ಷಕರ ಮನಸು ಗೆದ್ದಿರೋ ಧಾರಾವಾಹಿ. ಸದ್ಯ ಕರ್ಣ ಧಾರಾವಾಹಿಯಲ್ಲಿ ಕಥಾನಾಯಕ ಕರ್ಣನ ಮದುವೆ ದೃಶ್ಯಾವಳಿಗಳು ನಡೀತಾ ಇವೆ. ಅದ್ಧೂರಿ ಸೆಟ್ನಲ್ಲಿ ಚಿತ್ರೀಕರಣ ನಡೀತಾ ಇದ್ದು ಸೆಟ್ ತುಂಬಾ ಕಲಾವಿದರ ಕಲರವ ಜೋರಾಗಿದೆ.
ನಿಧಿಗೆ ಕರ್ಣ ಇಷ್ಟ, ಕರ್ಣನಿಗೂ ನಿಧಿ ಇಷ್ಟ. ಆದ್ರೆ ಮನೆಯವರ ಒತ್ತಾಯಕ್ಕೆ ಮಣಿದು ನಿತ್ಯಾಳನ್ನ ಕರ್ಣ ಮದುವೆ ಆಗಿಬಿಡ್ತಾನಾ,.? ಇಂಥದ್ದೊಂದು ರೋಚಕ ತಿರುವಿಗೆ ಕರ್ಣ ಧಾರಾವಾಹಿ ಬಂದು ತಲುಪಿದೆ.
ಕರ್ಣ-ನಿಧಿ-ನಿತ್ಯಾರ ನಡುವಿನ ಈ ಟ್ರಯಾಂಗಲ್ ಲವ್ ಸ್ಟೋರಿಲಿ ಏನು ಟ್ವಿಸ್ಟ್ ಬರುತ್ತೆ ಅಂತ ವೀಕ್ಷಕರು ಕುತೂಹಲದಿಂದ ಎದುರು ನೋಡ್ತಾ ಇದ್ದಾರೆ. ಕರ್ಣನ್ ಲವ್ ಸ್ಟೋರಿ ಮುಂದೇನಾಗುತ್ತೆ ಅಂತ ಗೊತ್ತಾಗಬೇಕಂದ್ರೆ ತಪ್ಪದೇ ಮುಂದಿನ ಎಪಿಸೋಡ್ ನೋಡಿ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...