ಮನಗೆದ್ದ ಕಿರೀಟಿ, 'ಜೂನಿಯರ್'​ ನೋಡಿ ಕಣ್ಣೀರಿಟ್ಟ ಜನ... ಶ್ರೀಲೀಲಾ ಡಾನ್ಸ್‌ಗೆ ಪಟಾಕಿಯಾದ ಪಡ್ಡೆಗಳು!

ಜೂನಿಯರ್ ಸಿನಿಮಾ ಕನ್ನಡ ತೆಲುಗುನಲ್ಲಿ ರಿಲೀಸ್ ಆಗಿದೆ. ಯಾವ್ದೇ ಸಿನಿಮಾ ಆಗ್ಲಿ ಪ್ರೇಕ್ಷಕರ ಕಣ್ಣಚ್ಚಲ್ಲಿ ನೀರು ತರಿಸುತ್ತೆ ಅಂದ್ರೆ ಆ ಸಿನಿಮಾ ಗೆದ್ದ ಹಾಗೆ. ಈಗ ಬಂದಿರೋ ಜೂನಿಯರ್ ಸಿನಿಮಾ ಅದನ್ನ ಸಾಧ್ಯ ಮಾಡಿದೆ. ಸೀನಿಯರ್ ನಟರ ಮಧ್ಯೆ ಜೂನಿಯರ್ ಆಗಿ ಬಂದ ನಟ ಕಿರೀಟಿ ಸಖತ್ ..

Share this Video
  • FB
  • Linkdin
  • Whatsapp

ಸ್ಯಾಂಡಲ್​ವುಡ್​​ ಅಂಗಳಕ್ಕೆ 'ಜೂನಿಯರ್'​ ಎಂಟ್ರಿ ಆಗಿದ್ದಾರೆ. ಈ ಜೂನಿಯರ್ (Junior) ಬರು ಬರುತ್ತಲೇ ಪವರ್ ಸ್ಟಾರ್ ಪುನೀತ್​ರನ್ನ ನೆನಪಿಸಿದ್ದಾರೆ. ಯಾಕಂದ್ರೆ ಅಪ್ಪು ಅವರ ಹಾಗೆ ಡಾನ್ಸ್​, ಫೈಟ್​​, ಆ್ಯಕ್ಟಿಂಗ್, ಪುನೀತ್​​ ಆಯ್ಕೆ ಮಾಡಿಕೊಳ್ಳಿತ್ತಿದ್ದ ಕಥೆಯ ಹಾಗೆ ಕೌಟುಂಬಿಕ ಸ್ಟೋರಿ ಜೊತೆ ಕನ್ನಡ ಸಿನಿ ಪ್ರೇಕ್ಷರಕ ಮನಸ್ಸು ದೋಚಿದ್ದಾನೆ. ಅವನೇ ಜೂನಿಯರ್​​​​ ಕಿರೀಟಿ.. ಹಾಗಾದ್ರೆ ಕಿರೀಟಿಯ ಜೂನಿಯರ್ ಸಿನಿಮಾ ಹೇಗಿದೆ..? ಸಿನಿಮಾ ನೋಡಿದವರ ಏನಂದ್ರು ನೋಡೋಣ ಬನ್ನಿ..

ಜೂನಿಯರ್ ಸಿನಿಮಾ ಕನ್ನಡ ತೆಲುಗುನಲ್ಲಿ ರಿಲೀಸ್ ಆಗಿದೆ. ಯಾವ್ದೇ ಸಿನಿಮಾ ಆಗ್ಲಿ ಪ್ರೇಕ್ಷಕರ ಕಣ್ಣಚ್ಚಲ್ಲಿ ನೀರು ತರಿಸುತ್ತೆ ಅಂದ್ರೆ ಆ ಸಿನಿಮಾ ಗೆದ್ದ ಹಾಗೆ. ಈಗ ಬಂದಿರೋ ಜೂನಿಯರ್ ಸಿನಿಮಾ ಅದನ್ನ ಸಾಧ್ಯ ಮಾಡಿದೆ. ಸೀನಿಯರ್ ನಟರ ಮಧ್ಯೆ ಜೂನಿಯರ್ ಆಗಿ ಬಂದ ನಟ ಕಿರೀಟಿ ಸಖತ್ ಎಂಟರ್​ಟೈನ್ಮೆಂಟ್ ಮಾಡಿದ್ದಾರೆ. ಸಿನಿಮಾ ನೋಡಿದವರೆಲ್ಲಾ ಕಿರೀಟಿಗೆ ವಿಜಯದ ಕಿರೀಟ ತೊಡಿಸುತ್ತಿದ್ದಾರೆ.

ನಿರ್ದೇಶಕ ರಾಧಾಕೃಷ್ಣ ಆಕ್ಷನ್ ಕಟ್ ಹೇಳಿರೋ ಜೂನಿಯರ್ ಸಿನಿಮಾದಲ್ಲಿ ಪ್ರೇಕ್ಷಕರ ಕಣ್ಣಂಚಲ್ಲಿ ನೀರು ತರಿಸೋ ಎಮೋಷನಲ್ ಸ್ಟೋರಿ ಇದೆ. ಕಿಚ್ಚನ ಮಾಣಿಕ್ಯ ಸಿನಿಮಾ ನಂತರ ಕ್ರೇಜಿಸ್ಟಾರ್​ ರವಿಚಂದ್ರನ್ ಅಪ್ಪನಾಗಿ ನಿಮ್ಮನ್ನ ಅವರಿಸಿಕೊಳ್ತಾರೆ. ಅಪ್ಪ-ಮಗ-ಮಗಳ ಸಂಬಂಧದ ಕಥೆ ಈ ಜೂನಿಯರ್​​ರ ಜೀವಾಳ.

ರವಿಚಂದ್ರನ್ ಕಿರೀಟಿ ತಂದೆ ರೋಲ್ ಮಾಡಿದ್ರೆ, ಜನಿಲಿಯಾ ಕಿರೀಟಿ ಅಕ್ಕನ ಪಾತ್ರ ಮಾಡಿದ್ದಾರೆ. ಆದ್ರೆ ಅದು ಗೊತ್ತಾಗೋದು ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ. ಇದರ ಜೊತೆ ಹಾಟಿ ಶ್ರೀಲೀಲಾ ಕಿಕ್ಕು ನಿಮ್ಮನ್ನ ಸೀಟು ತುದಿಗೆ ತಂದು ಕೂರಿಸುತ್ತೆ. ಕಿರೀಟಿಯಲ್ಲಿ ನಟನೆ, ಡಾನ್ಸ್​, ಫೈಟಿಂಗ್​​ನಲ್ಲಿ ತಪ್ಪು ಹುಡುಕೋದೇ ಕಷ್ಟ. ನಟನೆಯ ಯಾವ್ದೇ ಬ್ಯಾಕ್​​ಗ್ರೌಂಡ್ ಇಲ್ಲದಿದ್ರು, ಈತನಿಗೆ ಅಭಿನಯ ಬ್ಲಡ್​ನಲ್ಲೇ ಬಂದಿದೆಯೇನೋ ಅನ್ನಿಸುತ್ತೆ.

ಜೂನಿಯರ್ ಸಿನಿಮಾದಲ್ಲಿ ಗಟ್ಟಿ ಕತೆ ಇಲ್ಲ. ಹೊಸ ಹುಡುಗನ ಸಿನಿಮಾ ಹೇಗಿದೆಯೋ ಏನೋ ಅಂತ ಅನುಮಾನದಲ್ಲಿ ಥಿಯೇಟರ್​ ಒಳಗೆ ಹೋದ್ರೆ ನಿಮಗೆ ಸರ್​ಪ್ರೈಸ್​ ಗ್ಯಾರಂಟಿ. ಯಾಕಂದ್ರೆ ಮೊದಲ ಸಿನಿಮಾವಾದರೂ ಕೂಡ ಶೋಸ್ಟಾಪರ್ಆಗಿದ್ದಾರೆ ಕಿರೀಟಿ. ಸೂಪರ್ ಡ್ಯಾನ್ಸ್ಸ್ಟೆಪ್ಗಳು, ಎನರ್ಜಿ ಇಡೀ ಸಿನಿಮಾವನ್ನು ಎತ್ತುವುದು. ಫೈಟ್ದೃಶ್ಯಗಳು ಸಖತ್ಆಗಿದ್ದು, ಕಿರೀಟಿಗೆ ಸಿನಿಮಾ ಜಗತ್ತಲ್ಲಿ ಒಳ್ಳೆ ಭವಿಷ್ಯವಂತೂ ಕಟ್ಟಿದ್ದ ಬುತ್ತಿ. 

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ.. 

Related Video