Asianet Suvarna News Asianet Suvarna News

ಬದುಕೇ ಬೇಡ ಅನ್ನಿಸಿಬಿಡುತ್ತೆ.. ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಪತ್ನಿಯ ನೋವು

Aug 1, 2019, 9:13 PM IST

ಕನ್ನಡದ ಗಾಯಕಿ, ಖ್ಯಾತ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರ ಪತ್ನಿ 'ವಾಣಿ ಹರಿಕೃಷ್ಣ' ಎಂದೇ ಖ್ಯಾತರಾಗಿರುವ 'ಅಕ್ಷರಾ ಹರಿ'  ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಪೋಸ್ಟ್ ಗುರುವಾರ ದೊಡ್ಡ ಸುದ್ದಿ ಮಾಡಿದೆ. ’ಬದುಕೇ ಬೇಡ ಅನ್ನಿಸಿಬಿಡುತ್ತದೆ , ಒಂದು ಹಾಡೇ ಜೀವನವಲ್ಲ ಅಂತಾರೆ, ಆದರೆ ನನಗೆ ಎಷ್ಟೋ ಹಾಡುಗಳು ನನ್ನದಾಗುಳಿಯಲಿಲ್ಲ , ಈಗ " ಕುರುಕ್ಷೇತ್ರ" ಹಾಗೂ " ರಾಂಧವ" ಚಿತ್ರ ಗಳಲ್ಲಿ ನನ್ನನ್ನು ಹಾಡಿಸಿ , ಧ್ಧನಿ ಉಳಿಸಿಲ್ಲ , ನಮ್ಮನ್ನು ಹಾಡಿಸಲೇಬಾರದು ನಂತರ ಬೇರೆಯವರನ್ನು ಹಾಡಿಸುವುದಾದರೆ.’ ಎಂದು ಬರೆದುಕೊಂಡಿದ್ದು ಬೇಸರ ಹೊರಹಾಕಿದ್ದಾರೆ.

Video Top Stories