ಗದ್ದಲವಿಲ್ಲ, ಗಲಾಟೆಯಿಲ್ಲ, ಅಪ್ಪುಗೆ ಶಾಂತಿಯ ಅಶ್ರುತರ್ಪಣ ಕೊಟ್ಟ ಅಭಿಮಾನಿ ದೇವರುಗಳು..!
ಜಾರಿದ ಅಪ್ಪು ಅಂತ್ಯಸಂಸ್ಕಾರದಲ್ಲಿ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದ್ದರೆ, ಸಂಬಂಧಿಕರ ಮಡುಗಟ್ಟಿದ ದುಃಖದಿಂದ ಇಡೀ ಕಂಠೀರವ ಸ್ಟುಡಿಯೋದಲ್ಲಿ ಶೂನ್ಯ ಆವರಿಸಿತ್ತು.
ಬೆಂಗಳೂರು (ನ. 02): ಕೋಟ್ಯಂತರ ಅಭಿಮಾನಿಗಳನ್ನು ತಬ್ಬಲಿ ಮಾಡಿ ಚಿರನಿದ್ರೆಗೆ ಜಾರಿದ ಅಪ್ಪು ಅಂತ್ಯಸಂಸ್ಕಾರದಲ್ಲಿ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದ್ದರೆ, ಸಂಬಂಧಿಕರ ಮಡುಗಟ್ಟಿದ ದುಃಖದಿಂದ ಇಡೀ ಕಂಠೀರವ ಸ್ಟುಡಿಯೋದಲ್ಲಿ ಶೂನ್ಯ ಆವರಿಸಿತ್ತು. ಜೀವನದ ಉದ್ದಕ್ಕೂ ಜತೆಯಾಗಿರುವುದಾಗಿ ಅಗ್ನಿ ಸಾಕ್ಷಿಯಾಗಿ ಪ್ರಮಾಣ ಮಾಡಿ ಮುಂಚೆಯೇ ಹೊರಟುಹೋದ ಪುನೀತರ (Puneeth Rajkumar) ಹಣೆಗೆ ಮುತ್ತಿಟ್ಟು ಅಶ್ವಿನಿ ಬೀಳ್ಕೊಟ್ಟರು. ಅಂತಿಮ ದರ್ಶನದಲ್ಲಿ 25 ಲಕ್ಷಕ್ಕೂ ಹೆಚ್ಚು ಮಂದಿ ಸೇರಿದ್ದು, ಎಲ್ಲಿಯೂ ಏನೂ ಪ್ರಮಾದವಾಗದಂತೆ ನಡೆದುಕೊಂಡರು.
ಪುನೀತ್ ಅಂತಿಮ ಯಾತ್ರೆಯಲ್ಲಿ 25 ಲಕ್ಷಕ್ಕೂ ಹೆಚ್ಚು ಜನ, ಕಂಟ್ರೋಲ್ ಮಾಡಿದ್ದು 6 ಸಾವಿರ ಪೊಲೀಸ್..!
‘ಮೊದಲು ನಾನು ಹೋಗಬೇಕಿತ್ತು. ನೀನು ನನ್ನ ಮಕ್ಕಳ ಜತೆಗಿರು, ನಾನು ಅಪ್ಪ- ಅಮ್ಮನ ನೋಡಬೇಕು ಎಂದು ಹೇಳಿ ಅವನು ಬೇಗ ಹೊರಟು ಹೋಗಿದ್ದಾನೆ. ಅವನನ್ನು ಪ್ರೀತಿಯಿಂದ ಕಳುಹಿಸಿಕೊಡೋಣ ಎಂದು ಆಣೆ ಮಾಡಿ.’ಎಂಬ ರಾಘಣ್ಣನ ಮಾತಿನಂತೆ ಅಭಿಮಾನಿಗಳು ನಡೆದುಕೊಂಡರು. ಇದ್ದರೆ ಇರಬೇಕು ಇಂತಹ ಅಭಿಮಾನಿಗಳು ಎನ್ನುವುದಕ್ಕೆ ಉದಾಹರಣೆಯಾದರು. ಈ ಬಗ್ಗೆ ಒಂದು ವರದಿ ಇಲ್ಲಿದೆ.