ಹೇಗಿದೆ ನೋಡಿ ಗುರುದೇವ್ 'ಹೊಯ್ಸಳ' ಚಿತ್ರದ ಕ್ರೇಜ್: ಹೊಸ ಅಪ್ಡೇಟ್ ಏನು ಗೊತ್ತಾ?

ಸ್ಯಾಂಡಲ್‌ವುಡ್‌ನಲ್ಲಿ  ಸದ್ಯ ಗುರುದೇವ್ ಹೊಯ್ಸಳನ ಅಬ್ಬರ ಜೋರಾಗಿಯೇ ಇದೆ. ಕಬ್ಜ ಚಿತ್ರದ ಪ್ರಚಾರದ ಅಬ್ಬರದ ನಡುವೆ ಹೊಯ್ಸಳ ಪ್ರಚಾರ ಹೆಚ್ಚು ಕೇಳಿಸಲೇ ಇಲ್ಲ ಅನಿಸುತ್ತದೆ. ಆದರೆ ಸಿನಿಮಾ ತಂಡ ಎಲ್ಲೂ ಆ ಒಂದು ಚಾನ್ಸ್ ಮಿಸ್ ಮಾಡಿಕೊಳ್ಳಲೇ ಇಲ್ಲ. 

First Published Mar 30, 2023, 9:22 PM IST | Last Updated Mar 30, 2023, 9:22 PM IST

ಸ್ಯಾಂಡಲ್‌ವುಡ್‌ನಲ್ಲಿ  ಸದ್ಯ ಗುರುದೇವ್ ಹೊಯ್ಸಳನ ಅಬ್ಬರ ಜೋರಾಗಿಯೇ ಇದೆ. ಕಬ್ಜ ಚಿತ್ರದ ಪ್ರಚಾರದ ಅಬ್ಬರದ ನಡುವೆ ಹೊಯ್ಸಳ ಪ್ರಚಾರ ಹೆಚ್ಚು ಕೇಳಿಸಲೇ ಇಲ್ಲ ಅನಿಸುತ್ತದೆ. ಆದರೆ ಸಿನಿಮಾ ತಂಡ ಎಲ್ಲೂ ಆ ಒಂದು ಚಾನ್ಸ್ ಮಿಸ್ ಮಾಡಿಕೊಳ್ಳಲೇ ಇಲ್ಲ. ಹೊಯ್ಸಳ ಪ್ರಚಾರದಲ್ಲಿ ಡಾಲಿ ಮತ್ತು ಚಿತ್ರದ ನಾಯಕಿ ಅಮೃತ ಅಯ್ಯಂಗಾರ್ ಫುಲ್ ಬಿಜಿ. ಹೊಯ್ಸಳ ಖಡಕ್ ಪೋಲೀಸ್ ಆಫೀಸರ್ ಕತೆ. ಈ ಚಿತ್ರಕ್ಕೆ ಬೆಳಗಾವಿಯಲ್ಲಿ ನಡೆದ ಒಂದು ಘಟನೆಯೇ ಸಾಕ್ಷಿ ಎನ್ನಲಾಗಿದೆ. ಸಲಗದಲ್ಲಿ ಬೆಂಗಳೂರಿನಲ್ಲಿರುವ ಸಮಸ್ಯೆಯ ಬಗ್ಗೆ ಹೋರಾಡುವ ಪಾತ್ರವಾಗಿತ್ತು. ಆದರೆ ‘ಹೊಯ್ಸಳ’ದಲ್ಲಿ ಅದಕ್ಕಿಂತಲೂ ದೊಡ್ಡ ವಿಷಯವನ್ನು ವಿಚಾರಣೆ ಮಾಡುವಂತಹ ಪಾತ್ರ. ಬೆಳಗಾವಿ, ಅಥಣಿ ಬಳಿ ಈ ಸಿನಿಮಾ ನಡೆಯುತ್ತದೆ. 

ಸಮಾಜದ ಪ್ರಮುಖ ಸಮಸ್ಯೆಯೊಂದನ್ನು ಈ ಸಿನಿಮಾ ಹ್ಯಾಂಡಲ್ ಮಾಡುತ್ತದೆ.   ಖಡಕ್ ಪೋಲಿಸ್ ಆಫೀಸರ್ ಪಾತ್ರದಲ್ಲಿ ಡಾಲಿ ಗಮನ ಸೆಳೆಯುತ್ತಿದ್ದು ಉತ್ತರ ಕರ್ನಾಟಕ ಶೈಲಿಯ ಡೈಲಾಗ್ಸ್ ಫುಲ್ ವೈರಲ್ ಆಗಿವೆ. ಡಾಲಿ ಧನಂಜಯ್ 10 ವರ್ಷಗಳಲ್ಲಿ 25 ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆವರು. ಡಾಲಿ ಕೆರಿಯರ್25 ನೇ ಸಿನಿಮಾ ಹೊಯ್ಳ ಸಹಜವಾಗೆ ನಿರೀಕ್ಷೆ ಹೇಚ್ಚಾಗಿದೆ.  ಈ ಪಾತ್ರಕ್ಕಾಗಿ 10 ಕೆಜಿ ತೂಕ ಕಡಿಮೆ ಮಾಡಿಕೊಂಡು ಫುಲ್ ಫಿಟ್ಟಾಗಿ ಪೋಲೀಸ್ ಪಾಥ್ರಕ್ಕೆ ಬೇಕಾದ ಎಲ್ಲ ಟ್ರೈನಿಂಗ್ ಪಡೆದು ಈ ಪಾಥ್ರ ಮಾಡಿದ್ದಾರೆ. ಸಿನಿಮಾದ ಆಖ್ಷನ್ ದೃಶ್ಯಗಳು ಈಗಾಗಲೆ ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ. 

ಗೀತಾ ಖ್ಯಾತಿಯ ವಿಜಯ್ ಎನ್ ನಿರ್ದೇಶನದ ಹೊಯ್ಸಳ ಈಗಾಗಲೇ ಗಾಂಧಿನಗರದಲ್ಲಿ ಹಿಟ್ ಟಾಕ್ ಶುರುವಾಗಿದೆ., ಕಿಚ್ಚ ಸುದೀಪ್ ಸಿನಿಮಾ ನೋಡಿ ಹಿಟ್ ಮುದ್ರೆ ಒತ್ತಿದ್ದಾರೆ.  ಈ ಸಿನಿಮಾಗೆ ಸಿನಿಮಾಟೋಗ್ರಫರ್‌ ಆಗಿ ಕಾರ್ತಿಕ್‌ ಕೆಲಸ ಮಾಡುತ್ತಿದ್ದಾರೆ. ಅಚ್ಯುತ್‌ ಕುಮಾರ್‌, ರಾಘು ಶಿವಮೊಗ್ಗ, ನಾಗಭೂಷಣ್‌, ಗುಳ್ಟು ನವೀನ್‌ ಸೇರಿದಂತೆ ಹಲವು ಪ್ರಮುಖ ನಟರು ನಟಿಸಿದ್ದಾರೆ. ಮಾಸ್ತಿ ಸಂಭಾಷಣೆ ಈಗಾಗಲೆ ಹಿಟ್ಟಾಗಿದೆ.  ಕೆಆರ್ ಜಿ ಸ್ಟುಡಿಯೋಸ್ ಬ್ಯಾನರ್ನಲ್ಲಿ ಯೋಗಿ ಜಿ ರಾಜ್ ಮತ್ತು ಕಾರ್ತಿಕ್ ಗೌಡ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಡಾಲಿ ಕೆರಿಯರ್ನ ಬಹು ನಿರೀಕ್ಷೆಯ ಸಿನಿಮಾಗೆ ಇದೀಗ ಇನ್ನಿಲ್ಲದ ಕ್ರೇಜ್ ಸೃಷ್ಟಿಯಾಘಿದ್ದು ಡಾಲಿ ಅಭಿಮಾನಿಗಳು ಸಿನಿಮಾನೋಡೋಕೆ ಕಾದು ಕುಂತಿದ್ದಾರೆ.