ಕೈ ಕೊಟ್ಟ ಹುಡುಗಿ, ದಿಬ್ಬಣದ ಕಾರು ಪುಡಿಗಟ್ಟಿದ ಪ್ರಿಯತಮ; ಪವರ್ ಫುಲ್ ಕಪ್ಪೆ, ಜೀವ ಉಳಿಸಿಕೊಳ್ಳಲು ಒದ್ದಾಡಿದ ಹಾವು!
ಕೈ ಕೊಟ್ಟ ಪ್ರೀತಿಸಿದ ಹುಡುಗಿ.. ಫುಲ್ ರೊಚ್ಚಿಗೆದ್ದ ಯುವಕ.. ದಿಬ್ಬಣಕ್ಕೆ ಹೊರಟಿದ್ದ ಕಾರು ಪುಡಿಪುಡಿ.. ಮತ್ತೊಂದು ಕಡೆ ಹೈಸ್ಪೀಡ್ ರೈಲಿಗೆ ಅಡ್ಡ ಬಂದ ಅಗ್ನಿಶಾಮಕ ವಾಹನ ಪೀಸ್ ಪೀಸ್.. ಬೈಕ್ನಲ್ಲಿ ತ್ರಿಬಲ್ ರೈಡಿಂಗ್... ಮೂವರಲ್ಲಿ ಇಬ್ಬರ ಸಾವು.
ಕೈ ಕೊಟ್ಟ ಪ್ರೀತಿಸಿದ ಹುಡುಗಿ.. ಫುಲ್ ರೊಚ್ಚಿಗೆದ್ದ ಯುವಕ.. ದಿಬ್ಬಣಕ್ಕೆ ಹೊರಟಿದ್ದ ಕಾರು ಪುಡಿಪುಡಿ.. ಮತ್ತೊಂದು ಕಡೆ ಹೈಸ್ಪೀಡ್ ರೈಲಿಗೆ ಅಡ್ಡ ಬಂದ ಅಗ್ನಿಶಾಮಕ ವಾಹನ ಪೀಸ್ ಪೀಸ್.. ಬೈಕ್ನಲ್ಲಿ ತ್ರಿಬಲ್ ರೈಡಿಂಗ್... ಮೂವರಲ್ಲಿ ಇಬ್ಬರ ಸಾವು. ಮಗದೊಂದು ಕಡೆ ಬೆನ್ನಿನಲ್ಲಿದ್ದ ಬ್ಯಾಗ್, ವ್ಯಕ್ತಿಯೊಬ್ಬನ ಜೀವ ಉಳಿಸಿದೆ. ಇನ್ನೂ ಹಲವು ಎದೆ ಝಲ್ ಎನ್ನುವಂತಹ ವಿಡಿಯೋಗಳು.. ಮುಖದಲ್ಲಿ ಮಂದಹಾಸ ತರುವಂತಹ ದೃಶ್ಯಗಳನ್ನ ನೋಡ್ಕೊಂಡು ಬರೋಣ. ಇದೇ ಈ ಹೊತ್ತಿನ ವಿಶೇಷ ಸೂಪರ್ ಡೆಡ್ಲಿ ಡೇಂಜರ್. ಊಟಕ್ಕೆ ಕಾದು ಕೂತವರ ಕಡೆ ಯಮವೇಗದಲ್ಲಿ ನುಗ್ಗಿಬಂದ ಕಾರು.. ಅವರು ಬದುಕಿ ಉಳಿದಿದ್ದೇ ರೋಚಕ.. ರೈಲಿನಲ್ಲಿ ಹುಚ್ಚಾಟ ಆಡೋಕೆ ಹೋದವನು ಕರೆಂಟ್ ಶಾಕ್ನಿಂದ ಕೈ ಕಳೆದುಕೊಂಡ.
70ನ ಅಡಿ ಎತ್ತರಿಂದ ನದಿಗೆ ಜಿಗಿದು ಸಾಯೋಕೆ ಹೊರಟವಳನ್ನ ಉಳಿಸಿದ್ಹೇಗೆ..? ಅದು ಎಷ್ಟೇ ದುಬಾರಿ ಕಾರ್ ಆಗಿದ್ರೂ ಅದೂ ಕೂಡ ಕೆಲವೊಮ್ಮೆ ಕೆಟ್ಟು ನಿಲ್ಲುತ್ತೆ. ಹೀಗೆ ಕೆಟ್ಟು ನಿಂತ ಕಾರಿನ ಸಹಾಯಕ್ಕೆ ಬಂದಿವೆ ಎರಡು ಎತ್ತುಗಳು. ಮೊಟ್ಟೆಯನ್ನ ಕದ್ದು ತಿಂದ ಕಾಗೆಗೆ ಕಾದು ಅಟ್ಯಾಕ್ ಮಾಡಿದ ಹಕ್ಕಿ..ಮರಿಗಳ ರಕ್ಷಣೆಗೆ ಸಿಂಹಗಳ ಜೊತೆಯೇ ಕಾದಾಟಕ್ಕೆ ಇಳಿದ ಮಹಾತಾಯಿ. ಒಂದು ಕಡೆ ಬೈಕ್ನಲ್ಲಿ ಹುಚ್ಚಾಟ ಆಡ್ತಿದ್ದವರು ಪಲ್ಟಿ ಪಲ್ಟಿ ಹೊಡೆದು ಬಿದ್ದಿದ್ರೆ, ಇನ್ನೊಂದು ಕಡೆ ತಾನೇ ತೋಡಿದ ಗುಂಡಿಯೊಳಗೆ ಬಿದ್ದು ಬಿಟ್ಟಿದೆ ಬೋರ್ವೆಲ್..ಮಾತನಾಡಿಸೋ ನೆಪದಲ್ಲಿ ಬಂದು ಚೈನ್ ಎಗರಿಸಿದ ಖದೀಮ.. ರೀಲ್ಸ್ ಹುಚ್ಚಿಗೆ ಪ್ರಾಪತಕ್ಕೆ ಬಿದ್ದ ಯುವಕ.. ಅಬ್ಬಬ್ಬಾ ಇವು ನಿಜಕ್ಕೂ ಡೆಡ್ಲಿ ಡೇಂಜರ್ ವೀಡಿಯೋಗಳು. ಕೆಎಸ್ಆರ್ಟಿಸಿ ಬಸ್ ಓಡಿಸ್ತಾಯಿದ್ದ ಡ್ರೈವರ್ಗೆ ಇದ್ದಕಿದ್ದ ಹಾಗೆ ಪಿಟ್ಸ್ ಬಂದಿದೆ.
ಸರಣಿ ಅಪಘಾತವೇ ನಡೆದಿದೆ. ಇಲ್ಲಿಬ್ಬರು ಯುವಕರು ಹುಚ್ಚು ಸಾಹಸ ಮಾಡಿದ್ದಾರೆ. ಒಂಚೂರು ಯಾಮಾರಿದ್ರು, ಅವರ ಪ್ರಾಣ ಪಕ್ಷಿಯೇ ಹಾರಿ ಹೋಗ್ತಿತ್ತು. ಅದು ಗೊತ್ತಿದ್ರೂ ರಿಸ್ಕ್ ತೆಗೆದುಕೊಂಡು ಸ್ಟಂಟ್ ಮಾಡಿದ್ದಾರೆ. ಇನ್ನು ಕೇಶವಿನ್ಯಾಸಕಿಯೊಬ್ಬಳು ಮಾಡೋ ಹೇರ್ಸ್ಟೈಲ್ ನೋಡಿದ್ರೆ, ನೀವು ಬಾಯ್ಮೇಲೆ ಬೆರಳಿಟ್ಟು ಕೂರೋದಂತೂ ಖಂಡಿತ. ಒಬ್ರ ಮೇಲೆ ಒಬ್ರು ಹತ್ತಿ ಹ್ಯೂಮನ್ ಪಿರಮಿಡ್ ಕ್ರಿಯೇಟ್ ಮಾಡೋದ್ನ ನೀವು ನೋಡಿರ್ಬೋದು. ಆದ್ರೆ ಅದನ್ನೇ ಬಹಳ ಸ್ಪೀಡ್ ಆಗಿ, ಹೆಚ್ಚು ಜನ್ರು ಸೇರ್ಕೊಂಡು ಮಾಡಿ, ಗಿನ್ನಿಸ್ ರೆಕಾರ್ಡ್ ಅನ್ನೇ ಕ್ರಿಯೇಟ್ ಮಾಡಿರೋ ಒಂದು ಟೀಮ್ನ ಪ್ರದರ್ಶನವನ್ನ ನಾವೀಗ ನಿಮ್ಗೆ ತೋರಿಸ್ತೀವಿ. ಆದ್ರ ಜೊತೆಗೆ ಇಲ್ಲೊಬ್ಬ ಡೇಂಜರ್ ಜೇನುಗಳಿಗೂ ಒಂಚೂರು ಭಯ ಪಡದೇ ಮೈ ತುಂಬ ಜೇನು ಬಿಡ್ಕೊಂಡು ಗಿನ್ನಿಸ್ ರೆಕಾರ್ಡ್ ಮಾಡಿದ್ದಾನೆ.