ಮಡೇನೂರು ಹೊಸ ಆಡಿಯೋ ವೈರಲ್; ಕಿಲಾಡಿನಾ ಕಿಡಿಗೇಡಿನಾ ಅಂತಿದಾರಲ್ಲ..!

ಮನೆಯಲ್ಲಿ ಮಡದಿಯನ್ನ ಇಟ್ಟುಕೊಂಡು ಸಹನಟಿಯ ಜೊತೆಗೆ ಕಳ್ಳಾಟ ಆಡ್ತಿದ್ದ ಈತನಿಗೆ ಸರಿಯಾದ ಬುದ್ದಿ ಕಲಿಸಿದ್ದಾಳೆ ಆ ನಟಿ. ಇನ್ನೂ ಬರೀ ಬಲಾತ್ಕಾರ ಅಲ್ಲ ಈತನಿಗೆ ಹಲವು ವಿಕೃತಿಗಳು ಇದ್ದವು ಅನ್ನೋ ವಿಷ್ಯಗಳು ಕೂಡ ಬಯಲಿದೆ ಬಂದಿವೆ. ಕಾಮಿಡಿ ಕಿಲಾಡಿಗಳು..

Share this Video
  • FB
  • Linkdin
  • Whatsapp

ಸಹನಟಿಯ ಮೇಲೆ ಬಲಾತ್ಕಾರ ಮಾಡಿದ ಆರೋಪ ಹೊತ್ತು ಪೊಲೀಸರ ಅತಿಥಿಯಾಗಿರೋ ಮಡೆನೂರು ಮನುವಿನ ಒಂದೊಂದೇ ಕಲ್ಯಾಣ ಗುಣಗಳು ಹೊರಗೆ ಬರ್ತಾ ಇವೆ. ಅದ್ರಲ್ಲೂ ಮಡೆನೂರು ಸ್ಯಾಂಡಲ್​ವುಡ್​ನ ಹಿರಿಯ ನಟರುಗಳ ಬಗ್ಗೆ ಮಾತನಾಡಿರೋ ಒಂದು ಆಡಿಯೋ ವೈರಲ್ ಆಗಿದ್ದು, ಆ ನಟರ ಅಭಿಮಾನಿಗಳೆಲ್ಲಾ ಮಡೆನೂರುಗೆ ವಡೆ ತಟ್ಟೋಕೆ ಸಿದ್ದವಾಗಿ ನಿಂತಿದ್ದಾರೆ.

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ವಿನ್ನರ್ ಆಗಿದ್ದ ಮಡೆನೂರು ಮನುವಿನ ಒಂದೊಂದೇ ಅವತಾರಗಳು ಹೊರಗೆ ಬರ್ತಾ ಇವೆ. ಈತ ನಾಯಕನಾಗಿ ನಟಿಸಿದ ಚಿತ್ರ ಬಿಡುಗಡೆಗೆ ಸಜ್ಜಾದ ಹೊತ್ತಲ್ಲೇ ಈತನ ಸಹನಟಿ ಬಂದು ಬಲಾತ್ಕಾರ ಆರೋಪ ಮಾಡಿದ್ಳು. ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ ಕಾಮಿಡಿ ಕಿಲಾಡಿ.

ಮನೆಯಲ್ಲಿ ಮಡದಿಯನ್ನ ಇಟ್ಟುಕೊಂಡು ಸಹನಟಿಯ ಜೊತೆಗೆ ಕಳ್ಳಾಟ ಆಡ್ತಿದ್ದ ಈತನಿಗೆ ಸರಿಯಾದ ಬುದ್ದಿ ಕಲಿಸಿದ್ದಾಳೆ ಆ ನಟಿ. ಇನ್ನೂ ಬರೀ ಕಳ್ಳಾಟ ಅಲ್ಲ ಈತನಿಗೆ ಹಲವು ವಿಕೃತಿಗಳು ಇದ್ದವು ಅನ್ನೋ ವಿಷ್ಯಗಳು ಕೂಡ ಬಯಲಿದೆ ಬಂದಿವೆ. ಕಾಮಿಡಿ ಕಿಲಾಡಿಗಳು ಸಹಸ್ಪರ್ಧಿ ಅಪ್ಪಣ್ಣನ ಬಗ್ಗೆ ಈತನೇ ಕುಮ್ಮಕ್ಕು ಕೊಟ್ಟು ನಕಲಿ ಆಡಿಯೋ ರೆಡಿ ಮಾಡಿಸಿದ್ದನಂತೆ.

ಇವೆಲ್ಲದರ ನಡುವೆ ಈಗ ಮಡೆನೂರು ಮನುವಿನದ್ದು ಅಂತ ಹೇಳಲಾಗುವ ಒಂದು ಆಡಿಯೋ ವೈರಲ್ ಆಗಿದೆ. ಅದ್ರಲ್ಲಿ ಸ್ಯಾಂಡಲ್​ವುಡ್​​ನ ನಟರುಗಳ ಬಗ್ಗೆ ಮನು ನಾಲಿಗೆ ಹರಿಬಿಟ್ಟಿದ್ದಾನೆ. ಶಿವಣ್ಣ, ದರ್ಶನ್, ಧ್ರುವ ಸರ್ಜಾ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ.

ಶಿವರಾಜ್‌ಕುಮಾರ್‌ ಇನ್ನೊಂದು ಆರು ವರ್ಷ ಬದುಕಿದ್ರೆ ಹೆಚ್ಚು, ಸತ್ತು ಹೋಗ್ತಾರೆ ನನಗೆ ಗೊತ್ತು. ಧ್ರುವ ಸರ್ಜಾ ಇನ್ನೊಂದು ಎಂಟು ವರ್ಷ ಮಾರ್ಕೆಟ್‌ನಲ್ಲಿರಬಹುದು. ನಟ ದರ್ಶನ್‌ ಈಗಾಗಲೇ ಸತ್ತೇ ಹೋಗಿದ್ದಾನೆ. ದರ್ಶನ್‌ ಸರ್‌ಗೆ ಇನ್ನೊಂದು ಆರು ವರ್ಷ ಕ್ರೇಜ್‌ ಇರುತ್ತೆ, ಆದ್ರೆ ಸಿನಿಮಾ ಮಾಡಲ್ಲ. ಈ ಮೂವರ ವಿರುದ್ಧ ಕಾಂಪಿಟೇಶನ್‌ ಕೊಡೋಕೆ ಬಂದಿರೋ ಗಂಡುಗಲೀರಿ ನಾನುʼ
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

Related Video