
ಕ್ಯಾಮೆರಾ ಕಂಡು ಕಾಲ್ಕಿತ್ತ ಬಿಪಾಶಾ ಬಸು; ಅಂದು ಓಡಿಬರೋರು ಇಂದು ಓಡಿಹೋಗಿದ್ದೇಕೆ?
2002ರಲ್ಲಿ ರಾಝ್ ಸಿನಿಮಾ ಸೂಪರ್ ಡೂಪರ್ ಹಿಟ್ ಆಗೋದ್ರೊಂದಿಗೆ ಬಿಪಾಶಾಗೆ ಸ್ಟಾರ್ ಪಟ್ಟ ತಂದುಕೊಟ್ತು. ಇನ್ನೂ 2003ರಲ್ಲಿ ಬಂದ ಜಿಸ್ಮ್ ಮೂವಿಯಲ್ಲಿ ಬಿಪಾಶಾ ಹಸಿ ಬಿಸಿಯಾಗಿ ಕಾಣಿಸಿಕೊಂಡು ಪಡ್ಡೆಹೈಕಳ ಹೃದಯಕ್ಕೆ ಲಗ್ಗೆ ಇಟ್ಟಿದ್ರು.
ಬಿಪಾಶಾಬಸು.. ಈ ಹೆಸರು ಕೇಳಿದ್ರೆ ಪಡ್ಡೆ ಹೈಕಳ ಕಿವಿ ನೆಟ್ಟಗಾಗುತ್ವೆ. ಒಂದು ಕಾಲದಲ್ಲಿ ತನ್ನ ಹಸಿ ಬಿಸಿ ಅವತಾರದಿಂದ ಬಾಲಿವುಡ್ ಬಿಚ್ಚಮ್ಮ ಅಂತ ಖ್ಯಾತಿ ಪಡೆದಿದ್ರು ಬಿಪಾಶಾ (Bipasha Basu) ಜೀರೋ ಸೈಜ್ ಸುಂದರಿಯಾಗಿದ್ದ ಬಿಪಾಶಾ ಈಗ ಹೇಗಾಗಿದ್ದಾರೆ ಗೊತ್ತಾ..?. ಇತ್ತೀಚಿಗೆ ಬಿಪಾಶಾನ ನೋಡಿದವರು.. ಅರೇ ಇವರು ಅವರೇನಾ ಅಂತ ಕನ್ಪ್ಯೂಸ್ ಆಗಿದ್ದಾರೆ.
ಹೌದು, ಇತ್ತೀಚಿಗೆ ಸಿನಿಲೋಕದಿಂದ ಕೊಂಚ ದೂರವಾಗಿರೋ ಬಿಪಾಶಾ ಬಸು ಮುಂಬೈನಲ್ಲಿ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಆದ್ರೆ ಅವರು ಇವರೇನಾ ಅಂತ ಅನುಮಾನ ಪಡ್ತಾನೆ ಶೂಟಿಂಗ್ ಮಾಡಿದ್ದಾರೆ ಪಾಪಾರಾಜಿಗಳು. ಯಾಕಂದ್ರೆ ಆಗ ಸೈಜ್ ಜೀರೋ ಸುಂದರಿಯಾಗಿದ್ದ ಬಿಪಾಶಾ ತೀರಾ ತೂಕ ಹೆಚ್ಚಿಸಿಕೊಂಡಿದ್ದಾರೆ. ಅರೇ ಇವರು ಅವರೇನಾ ಅಂತ ಕ್ಯಾಮೆರಾಕಣ್ಣು ಬಿಡುವಷ್ಟರಲ್ಲಿ ಬಿಪಾಶಾ ಲಗುಬಯಿಂದ ಅಲ್ಲಿಂದ ಕಾರ್ ಏರಿ ಕಾಣೆಯಾಗಿದ್ದಾರೆ.
ಅಸಲಿಗೆ ದೆಹಲಿ ಬೆಡಗಿ ಬಿಪಾಶಾ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಅಜನಬಿ ಸಿನಿಮಾದಿಂದ. ಮೊದಲ ಚಿತ್ರದಲ್ಲೇ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಈ ಬಿಪಾಶಾ ತಾನು ಬಾಲಿವುಡ್ ಆಳಲಿಕ್ಕೆ ಬಂದ ಬ್ಯೂಟಿ ಅಂತ ಪ್ರೂವ್ ಮಾಡಿದ್ರು. ಶ್ವೇತವರ್ಣದ ಚೆಲುವೆಯರ ನಡುವೆ ಈ ಕೃಷ್ಣ ಸುಂದರಿ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡಿದ್ರು.
2002ರಲ್ಲಿ ರಾಝ್ ಸಿನಿಮಾ ಸೂಪರ್ ಡೂಪರ್ ಹಿಟ್ ಆಗೋದ್ರೊಂದಿಗೆ ಬಿಪಾಶಾಗೆ ಸ್ಟಾರ್ ಪಟ್ಟ ತಂದುಕೊಟ್ತು. ಇನ್ನೂ 2003ರಲ್ಲಿ ಬಂದ ಜಿಸ್ಮ್ ಮೂವಿಯಲ್ಲಿ ಬಿಪಾಶಾ ಹಸಿ ಬಿಸಿಯಾಗಿ ಕಾಣಿಸಿಕೊಂಡು ಪಡ್ಡೆಹೈಕಳ ಹೃದಯಕ್ಕೆ ಲಗ್ಗೆ ಇಟ್ಟಿದ್ರು.
ರೇಸ್ , ಫಿರ್ ಹೇರಾಫೇರಿ, ಕಾರ್ಪೊರೇಟ್, ಓಂಕಾರ ಸೇರಿದಂತೆ ಬಿಪಾಶಾ ಅಕೌಂಟ್ನಲ್ಲಿ ಲೆಕ್ಕವಿಲ್ಲದಷ್ಟು ಹಿಟ್ ಸಿನಿಮಾಗಳಿವೆ. 2016ರಲ್ಲಿ ಮದುವೆಯಾದ ಮೇಲೆ ಬಿಪಾಶಾ ಬಣ್ಣ ಲೋಕದಿಂದ ಕೊಂಚ ಕೊಂಚವೇ ದೂರವಾದ್ರು. ಸದ್ಯ ತಾಯ್ತನವನ್ನ ಎಂಜಾಯ್ ಮಾಡ್ತಾ ಇರೋ ಬಿಪಾಶಾ ಬಹುಕಾಲದ ಬಳಿಕ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.
ಒಂದು ಕಾಲದಲ್ಲಿ ಸೈಜ್ ಜೀರೋ ಸುಂದರಿಯಾಗಿದ್ದ ಬಿಪಾಶಾ ಈ ಪರಿ ದಪ್ಪ ಆಗಿರೋದನ್ನ ಕಂಡು ಟ್ರೋಲ್ ಮಾಡಲಾಗ್ತಾ ಇದೆ. ಈ ಬಗ್ಗೆ ಸಿಕ್ಕಾಪಟ್ಡೆ ಮೀಮ್ಸ್ ಹರಿದಾಡ್ತಾ ಇವೆ. ಆದ್ರೆ ಹೆರಿಗೆಯ ನಂತರ ಹೆಣ್ಣುಮಕ್ಕಳ ತೂಕ ಹೆಚ್ಚೋದು ಸಹಜ. ಹಾರ್ಮೋನ್ಗಳ ಅಸಮತೋಲನದಿಂದ ಅನೇಕ ಮಹಿಳೆಯರು ದಪ್ಪ ಆಗ್ತಾರೆ. ಸೋ ತೂಕವನ್ನ ನೆಪವಾಗಿಟ್ಟುಕೊಂಡು ಹೆಣ್ಣನ್ನ ಟ್ರೋಲ್ ಮಾಡೋದು ಎಷ್ಟು ಸರಿ ಅಂತ ಫ್ಯಾನ್ಸ್ ಬಿಪಾಶಾ ಬೆಂಬಲಕ್ಕೆ ನಿಂತುಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ…