
‘ಸಿರಿವಂತನಾದರೂ ತಾಂಡಾದಲ್ಲೇ ಇರುವೆ’ ಹನುಮಂತನ ಶಪಥ!
ಬಿಗ್ ಬಾಸ್ ಸೀಸನ್ 11 ಮುಕ್ತಾಯವಾಗಿದೆ. ಹಳ್ಳಿ ಹೈದ, ಕುರುಗಾಹಿ ಹನುಮಂತ ಶೋ ಗೆದ್ದು ಟ್ರೋಫಿ ಎತ್ತಿ ಹಿಡಿದಿದ್ದಾನೆ. ಭರ್ತಿ ಅರ್ಧ ಕೋಟಿ ಬಹುಮಾನ ಗೆದ್ದಿದ್ದಾನೆ.
ಹಳ್ಳಿ ಹೈದ, ಕುರಿಗಾಹಿ ಹನುಮಂತ ಈ ಬಾರಿಯ ಬಿಗ್ ಬಾಸ್ ವಿಜೇತನಾಗಿ ಹೊರಹೊಮ್ಮಿದ್ದಾನೆ. ಬರೊಬ್ಬರಿ ಅರ್ಧ ಕೋಟಿ ಬಹುಮಾನ ಗೆದ್ದು,5 ಕೋಟಿ ಕನ್ನಡಿಗರ ಮನಸು ಗೆದ್ದಿದ್ದಾನೆ. ಬಿಗ್ ಬಾಸ್ನಿಂದ ಹನುಮಂತನ ಲೈಫೇ ಸೆಟಲ್ ಆಗಿದೆ.
ಹಾಗಂತ ಹನುಮಂತ ಬಿಗ್ ಬಾಸ್ಗೆ ಕಾಡಿ ಬೇಡಿ ಬಂದವನಲ್ಲ. ನಿಜ ಹೇಳಬೇಕು ಅಂದ್ರೆ ಕಳೆದ 4 ಸೀಸನ್ನಿಂದ ಬಿಗ್ ಬಾಸ್ ಆಯೋಜಕರೇ ಹನುಮನ ಹಿಂದೆ ಬಿದ್ದಿದ್ರು. 4 ಬಾರಿ ಒಲ್ಲೆ ಅಂದವನು ಈ ಬಾರಿ ದೊಡ್ಮನೆಗೆ ಬಂದಿದ್ದೇಕೆ..? ಆ ಕುರಿತ ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.