'ಬ್ಯಾಡ್‌ ಮ್ಯಾನರ್ಸ್'ನಿಂದ ಬಿಗ್ ಅನೌನ್ಸ್‌ಮೆಂಟ್: ಮಾ.22ಕ್ಕೆ ಸ್ಪೆಷಲ್ ಸಾಂಗ್ ರಿಲೀಸ್!

ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಸುಪುತ್ರ ಅಭಿಷೇಕ್ ಅಂಬರೀಶ್ ಬ್ಯಾಡ್ ಮ್ಯಾನರ್ಸ್ ಸಿನಿಮಾ ಮೂಲಕ ಅಂಬಿ ಫ್ಯಾನ್ಸ್ಅನ್ನ ರಂಜಿಸೋಕೆ ಸಜ್ಜಾಗಿದ್ದಾರೆ. ಇಷ್ಟು ದಿನ ಬ್ಯಾಡ್ ಮ್ಯಾನರ್ಸ್ ಬಗ್ಗೆ ಯಾವ್ದೇ ಅಪ್ಡೇಟ್ ಕೊಡದೇ ತಣ್ಣಗೆ  ಶೂಟಿಂಗ್ ಮಾಡುತ್ತಿದ್ದ ಅಭಿಷೇಕ್ ಈಗ ಬ್ಯಾಡ್ ಮ್ಯಾನರ್ಸ್ ಬಗ್ಗೆ ಬಿಗ್ ಅಪ್ಡೇಟ್ ಒಂದನ್ನ ಕೊಟ್ಟಿದ್ದಾರೆ.

First Published Mar 16, 2023, 9:50 PM IST | Last Updated Mar 16, 2023, 9:50 PM IST

ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಸುಪುತ್ರ ಅಭಿಷೇಕ್ ಅಂಬರೀಶ್ ಬ್ಯಾಡ್ ಮ್ಯಾನರ್ಸ್ ಸಿನಿಮಾ ಮೂಲಕ ಅಂಬಿ ಫ್ಯಾನ್ಸ್ಅನ್ನ ರಂಜಿಸೋಕೆ ಸಜ್ಜಾಗಿದ್ದಾರೆ. ಇಷ್ಟು ದಿನ ಬ್ಯಾಡ್ ಮ್ಯಾನರ್ಸ್ ಬಗ್ಗೆ ಯಾವ್ದೇ ಅಪ್ಡೇಟ್ ಕೊಡದೇ ತಣ್ಣಗೆ  ಶೂಟಿಂಗ್ ಮಾಡುತ್ತಿದ್ದ ಅಭಿಷೇಕ್ ಈಗ ಬ್ಯಾಡ್ ಮ್ಯಾನರ್ಸ್ ಬಗ್ಗೆ ಬಿಗ್ ಅಪ್ಡೇಟ್ ಒಂದನ್ನ ಕೊಟ್ಟಿದ್ದಾರೆ. ಬ್ಯಾಡ್ ಮ್ಯಾನರ್ಸ್ಗೆ ದುನಿಯಾ ಸೂರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ದುನಿಯಾ ಸೂರಿ ಕಲ್ಪನೆಯ ಸಿನಿಮಾಗಳಲ್ಲಿ ಪೊಲೀಸ್ ಇನ್ವೆಸ್ಟಿಗೇಷನ್ ಸ್ಟೋರಿ ಹೆಚ್ಚಾಗಿರುತ್ತೆ. ಬ್ಯಾಡ್ ಮ್ಯಾನರ್ಸ್ ಕೂಡ ಅಂತದ್ದೇ ಕಥೆ ಆಗಿದ್ದು, ಅಭಿಷೇಕ್ ಅಂಬರೀಶ್ ಇಲ್ಲಿ ರಫ್ ಪೊಲೀಸ್ ಆಫೀಸರ್ ಆಗಿರೋ ಕಾಣಿಸುತ್ತಿದ್ದಾರೆ. ಇದೀಗ ಈ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಬ್ಯಾಡ್‌ ಮ್ಯಾನರ್ಸ್‌ನ ಪ್ರಚಾರದ ಹೆಜ್ಜೆ ಇಟ್ಟಿದ್ದಾರೆ ಅಭಿಷೇಕ್ ಅಂಬರೀಶ್.. ಅದಕ್ಕಾಗಿ ಮಾರ್ಚ್ 22ರಂದು ರುದ್ರಾಭಿಷೇಕ ಅನ್ನೋ ಹಾಡನ್ನ ರಿಲೀಸ್ ಮಾಡೋದಕ್ಕೆ ಡೇಟ್ ಫಿಕ್ಸ್ ಮಾಡಿಕೊಳ್ಳಲಾಗಿದೆ. ಇಲ್ಲಿಂದ ಬ್ಯಾಡ್ ಮ್ಯಾನರ್ಸ್ ಪ್ರಚಾರದ ತೇರು ಎಳೆಯಲಿದೆ.