New Year 2023: ಸುವರ್ಣ ಪಾರ್ಟಿಯಲ್ಲಿ 'ಅಮೃತಾಂಜನ್' ಟೀಂ ಮಾತು

'ಅಮೃತಾಂಜನ್' ಎಂಬ ಕಿರು ಚಿತ್ರ ಸೋಶಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಎಬ್ಬಿಸಿತ್ತು. ಆ ಟೀಂ ಸುವರ್ಣ ಪಾರ್ಟಿಯಲ್ಲಿ ಭಾಗಿಯಾಗಿದೆ.

Share this Video
  • FB
  • Linkdin
  • Whatsapp

ಅಮೃತಾಂಜನ್ ಎರಡು ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫುಲ್ ಧೂಳು ಎಬ್ಬಿಸಿತ್ತು. ಅಮೃತಾಂಜನ್ ಟೀಮ್‌ ಸುವರ್ಣ ಪಾರ್ಟಿಯಲ್ಲಿ ಮಾತನಾಡಿದ್ದಾರೆ. ಸಹಜವಾಗಿ ನಮ್ಮ ಜೀವನದಲ್ಲಿ ನಡೆಯುವ ಘಟನೆಗಳನ್ನು ಇಟ್ಟುಕೊಂಡು ನಿರ್ದೇಶನವನ್ನು ಮಾಡುವ ಅದ್ಭುತ ನಿರ್ದೇಶಕ ಇದ್ದರೆ ಆತ ಬಹಳ ಬೇಗ ಜನರಿಗೆ ಹತ್ತಿರ ಆಗುತ್ತಾರೆ ಎಂದು ನಿರ್ದೇಶಕ ಜ್ಯೋತಿರಾವ್‌ ಮೋಹಿತ್‌ ಹೇಳಿದರು. ಕಿರು ಚಿತ್ರವನ್ನು ಮಾಡುವಾಗ 30 ದಿನ ರಿಹರ್ಸಲ್‌ ಮಾಡುತ್ತೇವೆ. ಸ್ಕ್ರಿಪ್ಟ್‌ ಮಾಡುವಾಗ ಕಣ್ಮುಂದೆ ಏನೂ ನಡೆಯುತ್ತೆ ಅದನ್ನೇ ಬಳಸಿಕೊಳ್ಳುತ್ತೇನೆ ಎಂದು ನಿರ್ದೇಶಕ ಜ್ಯೋತಿರಾವ್‌ ಮೋಹಿತ್‌ ಹೇಳಿದ್ದಾರೆ. ಈ ವೇಳೆ ಮಧುಮತಿ, ಸುಧಾಕರ ಗೌಡ , ಪಾಯಲ್‌ ಇದ್ದರು.

Related Video