Asianet Suvarna News Asianet Suvarna News

ಬಾಲಿವುಡ್‌ನಲ್ಲಿ ಬಾದ್‌ ಷಾ 50 ನಾಟೌಟ್, ಇನ್ನೂ ಚಿರಯುವಕ

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ 50 ವರ್ಷದ ಹಿಂದೆ ಇದೇ ದಿನ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. 1969ರಲ್ಲಿ ಸಾತ್ ಹಿಂದೂಸ್ತಾನಿ ಎನ್ನುವ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದೀಗ ಬಿಗ್‌ಬಿ ಬಾಲಿವುಡ್ ರಂಗದಲ್ಲಿ 50 ವರ್ಷ ಪೂರೈಸಿದ್ದಾರೆ. 

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ 50 ವರ್ಷದ ಹಿಂದೆ ಇದೇ ದಿನ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. 1969ರಲ್ಲಿ ಸಾತ್ ಹಿಂದೂಸ್ತಾನಿ ಎನ್ನುವ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.  ತಿಂಗಳಿಗೆ 1600 ರೂಪಾಯಿ ಸಂಬಳದ  ಕೆಲಸವನ್ನು ಬಿಟ್ಟು, ಯಾವುದೇ ಅಂಜಿಕೆಯಿಂದಲೇ ಸಿನಿಮಾರಂಗ ಪ್ರವೇಶಿಸಿದರು. ಅಮಿತಾಬ್ ಮೊದಲ ಸಿನಿಮಾ ಸಾತ್ ಹಿಂದೂಸ್ತಾನಿಗೆ ಪಡೆದ ಸಂಭಾವನೆ ಕೇವಲ 5 ಸಾವಿರ ರೂಪಾಯಿಯಾಗಿತ್ತು.

ಇದನ್ನೂ ಓದಿ: ನಟ ಅಮಿತಾಭ್ ಬಚ್ಚನ್‌ಗೆ ದಾದಾ ಸಾಹೇಬ್ ಫಾಲ್ಕೆ ಗರಿ

'ಸಾತ್ ಹಿಂದೂಸ್ತಾನಿ' ಸಿನಿಮಾದಲ್ಲಿ ಅಮಿತಾಬ್ ಗೆ ಕವಿಯ ಸ್ನೇಹಿತನ ಪಾತ್ರವನ್ನು ನೀಡಲಾಗಿತ್ತು. ಕವಿಯ ಪಾತ್ರವನ್ನು ಟೀನು ಆನಂದ್ ವಹಿಸಿದ್ದರು. ಅನಿರೀಕ್ಷಿತ ಬದಲಾವಣೆಯಿಂದಾಗಿ ಟೀನು ಆ ಚಿತ್ರದಿಂದ ಹೊರ ಬರಬೇಕಾಯಿತು. ಕೊನೆಗೆ ಆ ಪಾತ್ರವನ್ನು ಅಮಿತಾಬ್ ಮಾಡಿದರು. ಅದು ಅವರಿಗೆ ಬಿಗ್ ಹಿಟ್ ನೀಡಿತು. ಅಲ್ಲಿಂದ ಶುರುವಾದ ಸಿನಿ ಜರ್ನಿಯಲ್ಲಿ ಅಮಿತಾಬ್ ಹಿಂತಿರುಗಿ ನೋಡಲೇ ಇಲ್ಲ.

ಇದನ್ನೂ ಓದಿ: ನುಡಿದಂತೆ ನಡೆದ ಬಿಗ್-ಬಿ; ಮಗ-ಮಗಳಿಗೆ ಆಸ್ತಿ ಸಮಪಾಲು

ಸಾತ್ ಹಿಂದೂಸ್ತಾನಿ ಚಿತ್ರದಲ್ಲಿ ಅಮಿತಾಬ್ ಬಿಹಾರ ಮೂಲದ ಮುಸ್ಲಿಂ ಕವಿ ಅನ್ವರ್ ಅಲಿ ಪಾತ್ರವನ್ನು ಮಾಡಿದ್ದಾರೆ.  ಇವರ ಜೊತೆ ಬೇರೆ ಬೇರೆ ಭಾಗಗಳಿಂದ ಬಂದ ಇನ್ನೂ ಐವರಿದ್ದರು. ಈ ತಂಡಕ್ಕೆ ಪೋರ್ಚುಗೀಸ್ ಮೂಲದ ಮಾರಿಯಾ ಎನ್ನುವವರು ಸೇರಿಕೊಳ್ಳುತ್ತಾರೆ. ಇವರೆಲ್ಲರೂ ಸೇರಿ ಪೋರ್ಚುಗೀಸ್ ಕೋಟೆಗಳು ಮತ್ತು ಕಟ್ಟಡಗಳ ಮೇಲೆ ಭಾರತೀಯ ಧ್ವಜ ಹಾರಿಸುವ ಮೂಲಕ ಜನರಲ್ಲಿ ರಾಷ್ಟ್ರೀಯವಾದಿ ಭಾವನೆಗಳನ್ನು ಬೆಳೆಸುತ್ತಾರೆ.

ಈ ಚಿತ್ರದಲ್ಲಿ ಮಲಯಾಳಂ ನಟ ಮಧು, ಪ್ರಸಿದ್ಧ ಬಂಗಾಳಿ ನಟ ಉತ್ಪಾಲ್ ದತ್ ಮತ್ತು ಹಾಸ್ಯನಟ ಮೆಹಮೂದ್ ಅವರ ಸಹೋದರ ಅನ್ವರ್ ಅಲಿ ನಟಿಸಿದ್ದಾರೆ.

ಜಪಾನಿನ ಕ್ಲಾಸಿಕ್, ಸೆವೆನ್ ಸಮುರಾಯ್ ಮತ್ತು ಹಾಲಿವುಡ್‌ನ ಕೌಬಾಯ್ ರಿಮೇಕ್ ದಿ ಮ್ಯಾಗ್ನಿಫಿಸೆಂಟ್ ಸೆವೆನ್‌ನಿಂದ ಸ್ಫೂರ್ತಿ ಪಡೆದ ಈ ಚಿತ್ರವು ಸ್ಥಳೀಯ ದೇಶವಾಸಿಗಳಿಗೆ ಸಹಾಯ ಮಾಡಲು ಬರುವ ಹೊರಗಿನವರ ಕ್ಲಾಸಿಕ್ ಕಥೆಯನ್ನು ಆಧರಿಸಿದೆ.

Video Top Stories