ತನ್ನ ಮದುವೆ ಬಳಿಕ ತಮ್ಮನ ಮದುವೆ ಮಾಡಿದ ಅದಿತಿ! ಅದಿತಿ ತಮ್ಮನ ಮದುವೆ ಹೇಗೆಲ್ಲಾ ನಡೀತು?

ಸ್ಯಾಂಡಲ್‌ವುಡ್‌ನ ಶಾನೆ ಟಾಪ್ ಹುಡುಗಿ ಅದಿತಿ ಪ್ರಭುದೇವ ಹೊಸ ಬಾಳಿಕೆ ಕಾಲಿಟ್ಟು ಸಂಸಾರದ ದೋಣಿ ಏರಿದ್ದಾರೆ. ಪ್ರೀತಿಸಿದ ಗೆಳೆಯ ಯಶಸ್ ಜೊತೆ ಯಶಸ್ವಿಯಾಗಿ ತಾಳಿ ಕೊಟ್ಟಿಸಿಕೊಂಡ ಅದಿತಿ ಮದುವೆ ಆಗಿ ಒಂದು ತಿಂಗಳು ಕಳೆದಿದಿಲ್ಲ. 

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನ ಶಾನೆ ಟಾಪ್ ಹುಡುಗಿ ಅದಿತಿ ಪ್ರಭುದೇವ ಹೊಸ ಬಾಳಿಕೆ ಕಾಲಿಟ್ಟು ಸಂಸಾರದ ದೋಣಿ ಏರಿದ್ದಾರೆ. ಪ್ರೀತಿಸಿದ ಗೆಳೆಯ ಯಶಸ್ ಜೊತೆ ಯಶಸ್ವಿಯಾಗಿ ತಾಳಿ ಕೊಟ್ಟಿಸಿಕೊಂಡ ಅದಿತಿ ಮದುವೆ ಆಗಿ ಒಂದು ತಿಂಗಳು ಕಳೆದಿದಿಲ್ಲ. ಸಿನಿಮಾದ ಶೂಟಿಂಗ್, ಸಿನಿಮಾ ಪ್ರಮೋಷನ್‌ಗಳು ಅದಿತಿ ಬರ್ತಾ ಇದ್ದು ಕಾಯಕವೇ ಕೈಲಾಸ ಅಂತ ಕೆಲಸದಲ್ಲೂ ಬ್ಯೂಸಿ ಆಗಿದ್ರು. ಇದರ ಮಧ್ಯೆ ಅದಿತಿ ತನ್ನ ತಮ್ಮನ ಮದುವೆಗೆ ಸಂಸಾರ ಸಮೇತ ಹೋಗಿದ್ದಾರೆ. ಸಿದ್ಧರಾಗಿದ್ದಾರೆ. ಅದಿತಿ ಪ್ರಭುದೇವ ತನ್ನ ತಮ್ಮ ಭರತ್ ಮದುವೆಯನ್ನ ಹಳ್ಳಿಯಲ್ಲೇ ಮಾಡಿದ್ದಾರೆ. ಈ ಮದುವೆಯಲ್ಲಿ ಅರಶಿಣ ಶಾಸ್ತ್ರಕ್ಕೆ ಸಿದ್ಧತೆ ಮಾಡಿರೋ ಅದಿತಿ ಮನೆ ಮಂದಿ ಮುಖಕ್ಕೆಲ್ಲಾ ಅರಶಿಣ ಹಚ್ಚಿದ್ದಾರೆ. ಆದ್ರೆ ಅದಿತಿ ಪತಿದೇವರು ಯಶಸ್ ಮಾತ್ರ ತನ್ನ ಮುದ್ದಿನ ಹೆಂಡತಿ ಮುಖಕ್ಕೆ ಅರಶಿಣ ಹಚ್ಚಿದ್ದು, ಇವರಿಬ್ಬರ ಮಧ್ಯೆ ಇರೋ ಪ್ರೀತಿಗೆ ಸಾಕ್ಷಿಯಂತಿದೆ. ಟಾಪ್ ಹುಡುಗಿ ಅದಿತಿ ತಮ್ಮನ ಮದುವೆ ಮತ್ತೊಂದು ವೀಶೇಷ ವೀರಭದ್ರ ಸ್ವಾಮಿ ಗುಗ್ಗಳ ಪೂಜೆ. ಈ ಪೂಜೆಯಲ್ಲಿ ನವ ದಂಪತಿಗಳಾದ ಅದಿತಿ ಹಾಗು ಯಶಸ್ ಭಾಗಿಯಾಗಿ ಬೆಂಕಿಯ ಕಳಸ ಹೊತ್ತಿದ್ದಾರೆ. ಒಟ್ಟಿನಲ್ಲಿ ಮದುವೆ ಆದ ಮೇಲೆ ನಟಿ ಅದಿತಿ ಪ್ರಭುದೇವ ಸಿನಿಮಾ. ಪ್ರಮೋಷನ್, ಸಂಸಾರ, ಮನೆಯ ಕಾರ್ಯಕ್ರಮದಲ್ಲಿ ಫುಲ್ ಬ್ಯುಸಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Related Video