ಬ್ಯಾಡ್‌ ಮ್ಯಾನರ್ಸ್ ರುದ್ರಾಭಿಷೇಕ ಟೈಟಲ್ ಟ್ರ್ಯಾಕ್ ಹವಾ: ಲೈಫ್ ಅಂದ್ರೆ ಗೇಮು ಟೋಟಲ್ ಧಮಾಕಾ!

ಸ್ಯಾಂಡಲ್ವುಡ್ನಲ್ಲಿ ಡೈರೆಕ್ಟರ್ ಮೇಲೆ ನಂಬಿಕೆ ಇಟ್ಟು ಸಿನಿಮಾ ಹೋಗುತ್ತೇವೆ ಎಂದರೆ ಅದರಲ್ಲಿ ಸೂರಿ ಹೆಸರು ಅಗ್ರಪಂಕ್ತಿಯಲ್ಲಿ ಬರುತ್ತದೆ. ಸೂರಿ ಸದ್ಯ ನಟ ಅಭಿಷೇಕ್ ಅಂಬರೀಶ್ಗೆ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನಿರ್ದೇಶನ ಮಾಡಿದ್ದು, ಅದರ ಚಿತ್ರೀಕರಣ ಮುಗಿದಿದೆ.

First Published Mar 23, 2023, 11:07 AM IST | Last Updated Mar 23, 2023, 12:18 PM IST

ಯುಗಾದಿ ಹಬ್ಬಕ್ಕೆ  ಮಂಡ್ಯ ಅಭಿಮಾನಿಗಳಿಗೆ ಬೆಲ್ಲದಂಥಾ ಹಾಡು. ಯಂಗ್ ರೆಬೆಲ್‌ ಸ್ಟಾರ್ ಅಭಿಷೇಕ್ ಅಂಬರೀಷ್ ಅಭಿನಯದ ಎರಡನೆ ಸಿನಿಮಾ ಬ್ಯಾಡ್‌ ಮ್ಯಾನರ್ಸ್ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಥೇಟ್ ಅಪ್ಪನಂತೆ ಕಾಣೊ ಅಭಿಷೇಕ್ ಅಂಬರೀಷ್ ಬ್ಯಾಡ್ ಮ್ಯಾನರ್ಸ್‌ನ ಈ ಟೈಟಲ್ ಟ್ರ್ಯಾಕ್‌ನಲ್ಲಿ ಅಷ್ಟೆ ಕ್ರೇಜಿಯಾಗಿ ಕಾಣಿಸಿಕೊಂಡಿದ್ದಾರೆ. ಲೈಫ್  ಅಂದ್ರೆ ಗೇಮು  ಹಿಡಿಯೋ ಲಗಾಮು ಎಲ್ಲಕ್ಕೂ ರೊಕ್ಕ 2020 ಲೋಕ.. ನೌಟಂಕಿ ಬೇಡ.. ರುದ್ರಾಭಿಷೇಕ… ಹೀಗೆ ಸಾಗುವ ಧನಂಜಯ್ ರಂಜನ್ ಬರೆದಿರೊ ಸಾಲುಗಳು ಪ್ರೇಕ್ಷಕನಿಗೆ ಥ್ರಿಲ್ ನೀಡುತ್ತೆ. ಚರಣ್ ರಾಜ್ ಸಂಗೀತ ರಾಕಿಂಗ್.. ಉಷಾಉತ್ತಪ್ಪ  ಆಕಾಶ್ ಜೇಕಾಬ್ ಸಿಂಗಿಂಗ್ ಕಿಕ್ ನೀಡುವಂತೆ.. ಚೂರು ಬ್ಯಾಡ್ ಮ್ಯಾಡ್, ಚೂರು ವೈಲ್ಡ್, ಮೈಲ್ಡ್ ಹೇಟರ್ಸ್ ಮಾಮೂಲಿ… ಅಂಬಿ ಅಭಿಮಾಣಿಗಳಿಗೆ ನಿಜವಾದ ಯುಗಾದಿ ಹಬ್ಬ ಇದಾಗಿದೆ. 

ಅಮರ್ ಸಿನಿಮಾದಲ್ಲಿ  10 ಪರ್ಸೆಂಟ್ ಅಭಿಷೇಕ್ನ ನೋಡಿದ್ರೆ ಇನ್ನುಳಿದ 90 ಪರ್ಸೆಂಟ್ ಈ ಸಿನಿಮಾದಲ್ಲಿ ನೋಡುತ್ತೀರಿ ಎನ್ನುತ್ತಿದ್ದಾರೆ ಅಭಿಷೇಕ್. ಸ್ಯಾಂಡಲ್ವುಡ್ನಲ್ಲಿ ಡೈರೆಕ್ಟರ್ ಮೇಲೆ ನಂಬಿಕೆ ಇಟ್ಟು ಸಿನಿಮಾ ಹೋಗುತ್ತೇವೆ ಎಂದರೆ ಅದರಲ್ಲಿ ಸೂರಿ ಹೆಸರು ಅಗ್ರಪಂಕ್ತಿಯಲ್ಲಿ ಬರುತ್ತದೆ. ಸೂರಿ ಸದ್ಯ ನಟ ಅಭಿಷೇಕ್ ಅಂಬರೀಶ್ಗೆ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನಿರ್ದೇಶನ ಮಾಡಿದ್ದು, ಅದರ ಚಿತ್ರೀಕರಣ ಮುಗಿದಿದೆ. ಈ ಸಿನಿಮಾದ ಫಸ್ಟ್ ಲುಕ್, ಟೀಸರ್ಗೆ ಈಗಾಗಲೇ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಈ ಸಿನಿಮಾಗೆ ಸುಮಾರು ನೂರಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಿದಾಗ, ಇದರಲ್ಲಿ ಸೂರಿ ಬೇರೆ ಏನೋ ಮಾಡುತ್ತಿದ್ದಾರೆ ಎಂದೆನಿಸಿತ್ತು. ಈಗ ಈ ಸಿನಿಮಾದ ಇಂಟ್ರಡಕ್ಷನ್ ಹಾಡನ್ನು ಅವರು ಅದ್ಭುತವಾಗಿ ಮಾಡಿದ್ದಾರೆ. 

ಡಾನ್ಸ್ ಗೆ ನಾನು ದೂರ ಎನ್ನುತ್ತಿದ್ದ ಅಭಿಷೇಕ್ ಈ ಹಾಡಿಗೆ ಕೊಂಚ ಕಷ್ಟಪಟ್ಟು ಮ್ಯಾನೇಜ್  ಮಾಡಿದ್ದಾರೆ. ಬ್ಯಾಡ್ ಮ್ಯಾನರ್ಸ್ನ ಈ ರುದ್ರಾಭಿಷೇಕ ಹಾಡಿಗೆ ಧನು ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಸೂರಿ ‘ಜಾಕಿ’ ಸಿನಿಮಾದ ಇಂಟ್ರಡಕ್ಷನ್ ಹಾಡಿನಂತೆ ಇದು ಸಹ ಸಖತ್ ಕ್ರೇಜಿಯಾಗಿದೆ. ನಾಯಕನ ಬಗ್ಗೆ ಹೇಳಿಕೊಳ್ಳುವಂತಹ ಹಾಡಿದು. ಕಾಸ್ಟ್ಯೂಮ್, ಸೆಟ್, ಅಭಿ ಲುಕ್, ಸ್ಟೈಲ್ ಎಲ್ಲವೂ ಈ ಹಾಡಿನ ಹೈಲೈಟ್ಸ್. ಚರಣ್ ರಾಜ್ ಅದ್ಭುತ ಸಂಗೀತ ನೀಡಿದ್ದು, ಸಿನಿಮಾಟೋಗ್ರಾಫರ್ ಶೇಖರ್ ಅದನ್ನು ಅಷ್ಟೇ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ನೋಡಿದವರಿಗೆ ಈ ಹಾಡು ಈಗಾಗಲೆ ಇಷ್ಟವಾಗಿದೆ.  ಸಿನಿಮಾ ರಿಲೀಸ್ಗೆ ಸಿದ್ಧವಾಗಿದ್ದು ಅಭಿಷೇಕ್ ಖಡಕ್ ಪೋಲೀಸ್ ಆಫಿಸರ್ ಪಾತ್ರದಲ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ಗೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಅದ್ಯಕ್ಕೆ ಅಬಿ ಅಭಿ ಫ್ಯಾನ್ಸ್ ರುದ್ರಾಭಿಷೇಕ ಹಾಡಿನ ಗುಂಗಲ್ಲಿದ್ದಾರೆ. ಇನ್ನೊಂದು ತಿಂಗಳಲ್ಲಿ ಸಿನಿಮಾ ರಿಲೀಸ್ ಆಗೊ ಸಾಧ್ಯತೆಗಳಿವೆ.

Video Top Stories