ಗುರಾಯಿಸಿದ ರೌಡಿ ಸೈಲೆಂಟ್ ಸುನೀಲನಿಗೆ ದಬಾಯಿಸಿದ ಆಲೋಕ್ ಕುಮಾರ್
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ರೌಡಿ ಪರೇಡ್ ನಡೆಸಿದ್ದಾರೆ. ಕುಖ್ಯಾತ ರೌಡಿಗಳಿಗೆಲ್ಲಾ ಸಿಸಿಬಿ ಪೊಲೀಸರು ಫುಲ್ ಡ್ರಿಲ್ ಮಾಡಿದ್ದು, ಸೈಲೆಂಟ್ ಸುನೀಲ, ಕುಣಿಗಲ್ ಗಿರಿ, ಪಪ್ಪು, ಒಂಟೆ ರೋಹಿತಾ, ಗುಜುರಿ ಅಸೀಫ್, ದಡಿಯಾ ಮಹೇಶ, ರಾಬ್ರಿ ಗಿರಿ ಸೇರಿ ಕುಖ್ಯಾತರಿಗೆಲ್ಲಾ ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆಯಲ್ಲಿ ಭಾಗಿಯಾಗದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕುಖ್ಯಾತ ಹಳೆ ಪಂಟರ್ ತನ್ವೀರ್ ಸೇರಿ 300 ಕ್ಕೂ ಹೆಚ್ಚು ರೌಡಿಶೀಟರ್ ಗಳ ಈ ಪರೇಡ್ ನಲ್ಲಿ ಸೈಲೆಂಟ್ ಸುನಿಲನಿಗೂ ಸಿಸಿಬಿ ಗಿರೀಶ್ ಮಾತಲ್ಲೇ ಬೆಂಡೆತ್ತಿದ್ದಾರೆ. ಎಲ್ಲಿ ನಿನ್ನ ಸ್ನೇಹಿತ ರೋಹಿತ್? ನೋಡೋಕೆ ಚೆನ್ನಾಗಿದೆ ನಮ್ದೆ ಹವಾ ಅನ್ಕೊಬೇಡ, ಮೊದಲಿನಂತಲ್ಲ ಪೊಲೀಸ್ ಆಫೀಸರ್ಸ್ ಬಾಲ ಬಿಚ್ಚಿದ್ರೆ ಬೆಂಡೆತ್ಬಿಡ್ತೀವಿ ಎಂದು ವಾರ್ನಿಂಗ್ ನೀಡಿದ್ದಾರೆ.
ಬೆಂಗಳೂರು[ಏ.12]: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ರೌಡಿ ಪರೇಡ್ ನಡೆಸಿದ್ದಾರೆ. ಕುಖ್ಯಾತ ರೌಡಿಗಳಿಗೆಲ್ಲಾ ಸಿಸಿಬಿ ಪೊಲೀಸರು ಫುಲ್ ಡ್ರಿಲ್ ಮಾಡಿದ್ದು, ಸೈಲೆಂಟ್ ಸುನೀಲ, ಕುಣಿಗಲ್ ಗಿರಿ, ಪಪ್ಪು, ಒಂಟೆ ರೋಹಿತಾ, ಗುಜುರಿ ಅಸೀಫ್, ದಡಿಯಾ ಮಹೇಶ, ರಾಬ್ರಿ ಗಿರಿ ಸೇರಿ ಕುಖ್ಯಾತರಿಗೆಲ್ಲಾ ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆಯಲ್ಲಿ ಭಾಗಿಯಾಗದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.