ಪಠ್ಯ ಪರಿಷ್ಕರಣೆಗೆ ಸಾಹಿತಿಗಳ ವಿರೋಧ, ಹಿಂದಿನ ಪಠ್ಯವನ್ನೇ ಮುಂದುವರೆಸಲು ಆಗ್ರಹ

ರೋಹಿತ್‌ ಚಕ್ರತೀರ್ಥ (Rohit Chakrathirtha) ಅಧ್ಯಕ್ಷತೆಯ ಪಠ್ಯ ಪುಸ್ತಕ ಪರಿಷ್ಕರಣಾ (Revision of Books) ಸಮಿತಿ ರದ್ದುಗೊಳಿಸಿ, ಗೊಂದಲ ಉಂಟು ಮಾಡಿರುವ ಪಠ್ಯಗಳನ್ನು ಜಾರಿ ಮಾಡದೇ ಪ್ರಸಕ್ತ ವರ್ಷ ಹಿಂದಿನ ಪಠ್ಯಗಳನ್ನೇ ಮುಂದುವರೆಸಬೇಕು ಎಂದು ಶಿಕ್ಷಣ ತಜ್ಞರು, ಚಿಂತಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 26): ರೋಹಿತ್‌ ಚಕ್ರತೀರ್ಥ (Rohit Chakrathirtha) ಅಧ್ಯಕ್ಷತೆಯ ಪಠ್ಯ ಪುಸ್ತಕ ಪರಿಷ್ಕರಣಾ (Revision of Books) ಸಮಿತಿ ರದ್ದುಗೊಳಿಸಿ, ಗೊಂದಲ ಉಂಟು ಮಾಡಿರುವ ಪಠ್ಯಗಳನ್ನು ಜಾರಿ ಮಾಡದೇ ಪ್ರಸಕ್ತ ವರ್ಷ ಹಿಂದಿನ ಪಠ್ಯಗಳನ್ನೇ ಮುಂದುವರೆಸಬೇಕು ಎಂದು ಶಿಕ್ಷಣ ತಜ್ಞರು, ಚಿಂತಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಆಂಜನೇಯ ದೇವಸ್ಥಾನವಾಗಿತ್ತಾ ಮಸೀದಿ? ಮಂಡ್ಯದ ಜಮಿಯಾ ಮಸೀದಿ ಕಟ್ಟಡ ಹೇಳಿದ ಕಥೆ ಏನು?

‘ಜಾಗೃತ ನಾಗರಿಕರು-ಕರ್ನಾಟಕ’ಸಂಘಟನೆ ‘ಪಠ್ಯ ಪುಸ್ತಕ ರಚನೆ, ಪರಿಷ್ಕರಣೆ, ಮರು ಪರಿಷ್ಕರಣೆ’ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡಿದ್ದ ಗಣ್ಯರು, ಪಠ್ಯಕ್ರಮ ರೂಪಿಸುವಾಗ ಪ್ರಜಾಸತ್ತಾತ್ಮಕ ವಿಧಾನ ಅನುಸರಿಸಿಲ್ಲ. ರೋಹಿತ್‌ ಚಕ್ರತೀರ್ಥ ಶಿಕ್ಷಣ ತಜ್ಞರಲ್ಲ, ಬರಹಗಾರರೂ ಅಲ್ಲ. ಆದ್ದರಿಂದ ಪರಿಷ್ಕರಣಾ ಸಮಿತಿ ರದ್ದುಗೊಳಿಸಿ ಶಿಫಾರಸುಗಳನ್ನು ತಿರಸ್ಕರಿಸಬೇಕು. ಕಳೆದ ಎರಡು ವರ್ಷದಲ್ಲಿ ಕೊರೋನಾದಿಂದ ಮಕ್ಕಳಿಗೆ ಕಲಿಕೆ ನಷ್ಟಉಂಟಾಗಿದ್ದು ಪಠ್ಯದಲ್ಲಿ ಅನಗತ್ಯ ಪ್ರಯೋಗಕ್ಕೆ ಕೈಹಾಕದೇ ಈ ವರ್ಷ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಆಗ್ರಹಿಸಿದರು.

Related Video