Asianet Suvarna News Asianet Suvarna News

ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್‌ ಆಯ್ಕೆ ಮಾಡೋದ್ಯಾಕೆ?

ಪೂರ್ವ ಯುರೋಪಿಯನ್ ರಾಷ್ಟ್ರವು ಗುಣಮಟ್ಟದ ಶಿಕ್ಷಣವನ್ನು ನೀಡುವ ಅನೇಕ ಜಾಗತಿಕ ಮಟ್ಟದ ವಿಶ್ವವಿದ್ಯಾನಿಲಯಗಳನ್ನು ಹೊಂದಿರುವುದರ ಜೊತೆಗೆ  ಆರು ವರ್ಷಗಳ ವೈದ್ಯಕೀಯ ಕೋರ್ಸ್ ಶಿಕ್ಷಣ ವೆಚ್ಚ  ಕಡಿಮೆಯಾಗಿರುವುದೇ ಉಕ್ರೇನ್‌ ಗೆ ತೆರಳಲು ಪ್ರೇರಣೆಯಾಗಿದೆ.

ರಷ್ಯಾ- ಉಕ್ರೇನ್ (Russia-Ukraine) ಸಂಘರ್ಷದ ನಡುವೆ ಪೂರ್ವ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರಲ್ಲಿ ಬಹುತೇಕ ಮಂದಿ ಟೌನ್ ನ್ಯಾಷನಲ್ ಮೆಡಿಕಲ್ ಯೂನಿರ್ವಸಿಟಿ, ಖಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯ (kharkiv national university ukraine), ಇವಾನೊ - ಫ್ರಾನ್ ಕಿವ್ಸ್ಕ್  ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯ ಮತ್ತಿತರ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ. ಈ ಪೂರ್ವ ಯುರೋಪಿಯನ್ ರಾಷ್ಟ್ರವು ಗುಣಮಟ್ಟದ ಶಿಕ್ಷಣವನ್ನು ನೀಡುವ ಅನೇಕ ಜಾಗತಿಕ ಮಟ್ಟದ ವಿಶ್ವವಿದ್ಯಾನಿಲಯಗಳನ್ನು ಹೊಂದಿರುವುದರ ಜೊತೆಗೆ  ಆರು ವರ್ಷಗಳ ವೈದ್ಯಕೀಯ ಕೋರ್ಸ್ ಶಿಕ್ಷಣ ವೆಚ್ಚ ಸ್ವಲ್ಪ ಕಡಿಮೆಯಾಗಿರುವುದರಿಂದ ಭಾರತದ ವಿದ್ಯಾರ್ಥಿಗಳು ಉಕ್ರೇನ್ ಗೆ ತೆರಳಲು ಪ್ರೇರಣೆಯಾಗಿದೆ.

ಕರ್ನಾಟಕದಲ್ಲಿ 18 ಕಂಪನಿಗಳಿಂದ ಮಳಿಗೆ ಸ್ಥಾಪನೆ, 15 ಸಾವಿರ ಉದ್ಯೋಗ ಸೃಷ್ಠಿ

ಮಾತ್ರವಲ್ಲ ವಿಶ್ವ ಆರೋಗ್ಯ ಸಂಸ್ಥೆ (WHO), ಯುರೋಪಿಯನ್ ಕೌನ್ಸಿಲ್ ಮತ್ತು ಇತರ ಜಾಗತಿಕ ಸಂಸ್ಥೆಗಳು ಸೇರಿದಂತೆ ಉಕ್ರೇನ್‌ನಲ್ಲಿ ಗಳಿಸಿದ ಪದವಿಗಳನ್ನು ವಿಶ್ವದಾದ್ಯಂತ ಗುರುತಿಸಲಾಗಿದೆ. ಇದಲ್ಲದೆ, ಉಕ್ರೇನ್‌ನಲ್ಲಿ ಅಧ್ಯಯನ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ನಂತರ ಯುರೋಪ್‌ನಲ್ಲಿ ಶಾಶ್ವತ ನಿವಾಸ ಮತ್ತು ವಸಾಹತು ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದುಬಂದಿದೆ.

Video Top Stories