Asianet Suvarna News Asianet Suvarna News

ಫಲಿಸಲಿಲ್ಲ ಪ್ರಾರ್ಥನೆ; ಕೋವಿಡ್‌ನಿಂದ ಬಳಲುತ್ತಿದ್ದ ಶಿಕ್ಷಕಿ ಸಾವು

Oct 16, 2020, 1:44 PM IST
  • facebook-logo
  • twitter-logo
  • whatsapp-logo

ಮಂಗಳೂರು (ಅ. 16): ವಿದ್ಯಾಗಮದಿಂದ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಮೂಡಬಿದ್ರೆ ಶಿಕ್ಷಕಿ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ವಿದ್ಯಾಗಮದಿಂದ  ಮೂಡಬಿದ್ರೆಯ ಶಿಕ್ಷಕ ದಂಪತಿಗೆ ಕೋವಿಡ್ ಸೋಂಕು ತಗುಲಿತ್ತು. ಪತಿ ಚೇತರಿಸಿಕೊಂಡರೆ ಪತ್ನಿ ಮಾತ್ರ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಹಣವಿಲ್ಲ ಎಂದು ಪುತ್ರಿ ಐಶ್ವರ್ಯಾ ಜೈನ್ ಅಳಲು ತೋಡಿಕೊಂಡಿದ್ದರು. ಶಿಕ್ಷಕಿಯ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ವಿಧಿ ಮಾತ್ರ ಬಹಳ ಕ್ರೂರಿ. ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. 

ವಿದ್ಯಾಗಮದಿಂದ ಶಿಕ್ಷಕ ದಂಪತಿಗೆ ಕೊರೊನಾ; ಶಾಸಕರಿಂದ ಆರ್ಥಿಕ ಸಹಾಯ ಮಾಡುವ ಭರವಸೆ