ವಿದ್ಯಾಗಮದಿಂದ ಶಿಕ್ಷಕ ದಂಪತಿಗೆ ಕೋರೊನಾ; ಶಾಸಕರಿಂದ ಆರ್ಥಿಕ ಸಹಾಯ ಮಾಡುವ ಭರವಸೆ
Oct 14, 2020, 1:55 PM IST
ಬೆಂಗಳೂರು (ಅ. 14): ಮೂಡಬಿದ್ರೆಯ ಶಿಕ್ಷಕ ದಂಪತಿಗೆ ವಿದ್ಯಾಗಮದ ಕಾರಣ ಮಕ್ಕಳಿಗೆ ಪಾಠ ಹೇಳಲು ಸುತ್ತಾಡಿದ್ದಕ್ಕೆ ಕೋವಿಡ್ ಸೋಂಕು ತಗುಲಿದೆ. ಅಮ್ಮ ಚಿಂತಾಜನಕ ಸ್ಥಿತಿಯಲ್ಲಿದ್ದರೆ, ಅಪ್ಪ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅಮ್ಮನನ್ನು ಉಳಿಸಿಕೊಡಿ ಎಂದು ಮಗಳು ಐಶ್ವರ್ಯಾ ಜೈನ್ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾಳೆ.
ಅಮ್ಮನಿಗೆ ಏನಾದರೂ ಆದರೆ ಸರ್ಕಾರ ಹೊಣೆ, ವಿದ್ಯಾಗಮದಿಂದ ಶಿಕ್ಷಕ ದಂಪತಿಗೆ ಸೋಂಕು
ಈ ಬಗ್ಗೆ ಶಾಸಕ ಉಮಾಪತಿ ಕೋಟ್ಯಾನ್ ಮಾತನಾಡಿ, ಐಶ್ವರ್ಯಾಗೆ ಧೈರ್ಯ ತುಂಬಿದ್ದಾರೆ. ಆರ್ಥಿಕ ಸಹಾಯ ಮಾಡಲು ನಾನು ಡಿಡಿಪಿಐಗೆ ಕರೆ ಮಾಡಿ ತಿಳಿಸಿದ್ದೇನೆ. ಖಂಡಿತಾ ನಾವು ನಿಮ್ಮ ಸಹಾಯಕ್ಕೆ ನಿಲ್ಲುತ್ತೇವೆ' ಎಂದು ಧೈರ್ಯ ಹೇಳಿದ್ಧಾರೆ.