ಸೋಲುಗಳೇ ಯಶಸ್ಸಿನ ಮೆಟ್ಟಿಲು, ಇದು ನನ್ನ 7ನೇ ಅಟ್ಟೆಂಪ್ಟ್: ಯುಪಿಎಸ್ಸಿ ಟಾಪರ್ ದೀಪಕ್ ಶೇಟ್
ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2021ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾದ 685 ಅಭ್ಯರ್ಥಿಗಳ ಪೈಕಿ ರಾಜ್ಯದ 32 ಅಭ್ಯರ್ಥಿಗಳು ಇದ್ದಾರೆ.
ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2021ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾದ 685 ಅಭ್ಯರ್ಥಿಗಳ ಪೈಕಿ ರಾಜ್ಯದ 32 ಅಭ್ಯರ್ಥಿಗಳು ಇದ್ದಾರೆ. ಹೊನ್ನಾವರ ತಾಲೂಕಿನ ಮಂಕಿ ಗ್ರಾಮದ ದೀಪಕ್ ರಾಮಚಂದ್ರ ಶೇಟ್ ಯುಪಿಎಸ್ಸಿ ಪರೀಕ್ಷೆಯಲ್ಲಿ 311ನೇ ರಾರಯಂಕ್ ಪಡೆದಿದ್ದಾರೆ.
‘ಚಿಕ್ಕ ವಯಸ್ಸಿನಿಂದಲೇ ದೇಶದ ಸಾರ್ವಜನಿಕ ಸೇವಾ ರಂಗದಲ್ಲಿ ಸೇವೆ ಮಾಡಬೇಕು ಎನ್ನುವ ಕನಸು ಶುರುವಾಯಿತು. ಎಂಜಿನಿಯರಿಂಗ್ ಅಧ್ಯಯನ ನಂತರ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭವಾಗಿತ್ತು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ನಡೆದುಕೊಂಡು ಬಂದಿತ್ತು. ಯುಪಿಎಸ್‌ಸಿ ಪರೀಕ್ಷೆಗೆ ಶಿಸ್ತು ಅವಶ್ಯಕ. ಶಿಸ್ತಿರದ ಕಾರಣ ನನ್ನ ಸಾಧನೆ ಕೊಂಚ ವಿಳಂಬವಾಯಿತು. ಆಲಸ್ಯವಿರಬಾರದು, ನಿರಂತರ ಪರಿಶ್ರಮವಿರಬೇಕು. ಪ್ರತಿದಿನದ ಶೆಡ್ಯೂಲ್ ಪ್ರಕಾರ ನಮ್ಮ ತಯಾರಿ ಇರಬೇಕು. ಯಾವುದೇ ಪ್ರಯತ್ನದಲ್ಲಿ ಸೋಲು ಕಂಡಾಗ ಮತ್ತೆ ಪ್ರಯತ್ನಿಸಬೇಕು. ಆಗ ಯಶಸ್ಸು ಕಟ್ಟಿಟ್ಟಬುತ್ತಿ’ ಎಂದು ಯುಪಿಎಸ್ಸಿ ಟಾಪರ್ ದೀಪಕ್ ರಾಮಚಂದ್ರ ಶೇಟ್ ಹೇಳಿದರು.