'ಜೈ ಶ್ರೀರಾಮ್' ಎಂದ ಹುಡುಗರೆದುರು ಸಿಟ್ಟಿಗೆದ್ದು 'ಅಲ್ಲಾ ಹು ಅಕ್ಬರ್' ಎಂದ ವಿದ್ಯಾರ್ಥಿನಿಯ ಸ್ಪಷ್ಟನೆ

ಮಂಡ್ಯದ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹುಡುಗರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದು, ಇದಕ್ಕೆ ಸಿಟ್ಟಿಗೆದ್ದ ಬುರ್ಖಾಧಾರಿ ವಿದ್ಯಾರ್ಥಿನಿಯೊಬ್ಬಳು ಅಲ್ಲಾ ಹು ಅಕ್ಬರ್ ಎಂದು ಕೂಗಿದ್ದು, ಅದಕ್ಕೆ ಇದೀಗ ಸ್ವತಃ ವಿದ್ಯಾರ್ಥಿನಿ ಸ್ಪಷ್ಟನೆ ಕೊಟ್ಟಿದ್ದಾರೆ.

Share this Video
  • FB
  • Linkdin
  • Whatsapp

ಮಂಡ್ಯ, (ಫೆ.09): ಹಿಜಾಬ್-ಕೇಸರಿ ಶಾಲು ಕಿಚ್ಚು ಉಡುಪಿಯಿಂದ ಆರಂಭವಾಗಿ ಇದೀಗ ರಾಜ್ಯದಲ್ಲೆಡೆ ಜ್ವಾಲೆಯಾಗಿ ಭುಗಿಲೆದ್ದಿದೆ. ಮಂಡ್ಯದ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹುಡುಗರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದು, ಇದಕ್ಕೆ ಸಿಟ್ಟಿಗೆದ್ದ ಬುರ್ಖಾಧಾರಿ ವಿದ್ಯಾರ್ಥಿನಿಯೊಬ್ಬಳು ಅಲ್ಲಾ ಹು ಅಕ್ಬರ್ ಎಂದು ಕೂಗಿದ್ದು, ಸ್ಥಳದಲ್ಲಿ ಕೆಲ ಕಾಲ ಉದ್ನಿಗ್ನ ವಾತಾವರಣ ಸೃಷ್ಟಿಯಾದ ಘಟನೆ ಮಂಗಳವಾರ ನಡೆಯಿತು.

Hijab Row ವಿದ್ಯಾರ್ಥಿಗಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಕಿವಿ ಮಾತು, ಜತೆಗೆ ಖಡಕ್ ಎಚ್ಚರಿಕೆ

ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕೇಸರಿ ಶಾಲು ಹಾಕಿಕೊಂಡಿದ್ದ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಬುರ್ಖಾ ಧರಿಸಿದ್ದ ವಿದ್ಯಾರ್ಥಿನಿ ಪಾರ್ಕಿಂಗ್ ಪ್ರದೇಶದಿಂದ ತನ್ನ ತರಗತಿ ಕೊಠಡಿಗೆ ಹೋಗುತ್ತಿದ್ದಳು. ಈ ಮಧ್ಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಎದುರಿಗೆ ಬಂದಿದ್ದು, ಯುವತಿಯನ್ನು ಕಂಡ ವಿದ್ಯಾರ್ಥಿಗಳು ಜೈ ಶ್ರೀರಾಮ್ ಎಂದು ಕೂಗಿದ್ದಾರೆ. ಇನ್ನು ಈ ಬಗ್ಗೆ ಸ್ವತಃ ಆ ವಿದ್ಯಾರ್ಥಿನಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

Related Video