'ಸಂವಿಧಾನ ಶಿಲ್ಪಿ' ಪದ ಕೈ ಬಿಟ್ಟು ವಿವಾದ ಮಾಡಿಕೊಂಡಿತಾ ಪಠ್ಯ ಪರಿಷ್ಕರಣಾ ಸಮಿತಿ..?

ವಿವಾದ ಮುಗಿಯುತ್ತಿಲ್ಲ. ಪಠ್ಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಪಠ್ಯವನ್ನು ಕೈ ಬಿಟ್ಟಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಪಠ್ಯ ಪರಿಷ್ಕರಣೆಗೆ ದಲಿತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಪಠ್ಯದಲ್ಲಿ ಪ್ರಸ್ತಾವಿತವಾದ ಅಂಬೇಡ್ಕರ್ ವಿಷಯಗಳ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. 

First Published Jun 6, 2022, 11:25 AM IST | Last Updated Jun 6, 2022, 11:25 AM IST

ಬೆಂಗಳೂರು (ಜೂ. 06): ಪಠ್ಯ ಪರಿಷ್ಕರಣಾ ಸಮಿತಿಯಿಂದ (Text Book Row) ಎಡವಟ್ಟಿನ ಮೇಲೆ ಎಡವಟ್ಟು ಆಗುತ್ತದೆ. ಸಮಿತಿಯನ್ನು ವಿಸರ್ಜಿಸಿದರೂ, ವಿವಾದ ಮುಗಿಯುತ್ತಿಲ್ಲ. ಪಠ್ಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ (Ambedkar)  ಪಠ್ಯವನ್ನು ಕೈ ಬಿಟ್ಟಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಪಠ್ಯ ಪರಿಷ್ಕರಣೆಗೆ ದಲಿತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಪಠ್ಯದಲ್ಲಿ ಪ್ರಸ್ತಾವಿತವಾದ ಅಂಬೇಡ್ಕರ್ ವಿಷಯಗಳ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. 

ಶಾಲಾ ಪರಿಷ್ಕರಣೆ ಬೆನ್ನಲ್ಲೇ ಇನ್ನೊಂದು ವಿವಾದ, ಪೇಚಿಗೆ ಸಿಲುಕಿದ ಬೊಮ್ಮಾಯಿ ಸರ್ಕಾರ

ಏನಿದು ಅಂಬೇಡ್ಕರ್ ವಿವಾದ..?
ಸಂವಿಧಾನ ಶಿಲ್ಪಿ ಎಂಬ ಬಿರುದನ್ನು ಸಮಿತಿ ಕೈ ಬಿಟ್ಟಿದೆ. 2 ವರ್ಷ 11 ತಿಂಗಳು 18 ದಿನಗಳಲ್ಲಿ ಕರಡು ಸಮಿತಿ ಕಾರ್ಯ ನಿರ್ವಹಿಸಿದೆ. ಪರಿಷ್ಕರಣೆ ಪಠ್ಯದಲ್ಲಿ 145 ದಿನ ಸಭೆ ನಡೆಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದು ಅಂಬೇಡ್ಕರ್‌ಗೆ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.