ಶಾಲಾ ಪಠ್ಯ ಪರಿಷ್ಕರಣೆ ಬೆನ್ನಲ್ಲೇ ಇನ್ನೊಂದು ವಿವಾದ, ಪೇಚಿಗೆ ಸಿಲುಕಿದ ಬೊಮ್ಮಾಯಿ ಸರ್ಕಾರ

ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ವಿವಾದದ (Text Book Row) ಜೊತೆಗೆ ಸರ್ಕಾರ ಪದೇ ಪದೇ ಎಡವಟ್ಟು ಮಾಡುತ್ತಿದೆ. ಪ್ರಾಥಮಿಕ ಶಾಲೆಯ ಪಠ್ಯ ದಂಗಲ್ ನಡೆಯುತ್ತಿರುವಾಗಲೇ ರೋಹಿತ್ ಚಕ್ರತೀರ್ಥ (Rohit Chakrathirtha) ನೇತೃತ್ವದಲ್ಲಿ ಪಿಯು ಪಠ್ಯ ಪುಸ್ತಕವನ್ನೂ ಪರಿಷ್ಕರಣೆ ಮಾಡಲಾಗಿತ್ತು.

First Published Jun 6, 2022, 10:47 AM IST | Last Updated Jun 6, 2022, 11:33 AM IST

ಬೆಂಗಳೂರು (ಜೂ. 06): ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ವಿವಾದದ (Text Book Row) ಜೊತೆಗೆ ಸರ್ಕಾರ ಪದೇ ಪದೇ ಎಡವಟ್ಟು ಮಾಡುತ್ತಿದೆ. ಪ್ರಾಥಮಿಕ ಶಾಲೆಯ ಪಠ್ಯ ದಂಗಲ್ ನಡೆಯುತ್ತಿರುವಾಗಲೇ ರೋಹಿತ್ ಚಕ್ರತೀರ್ಥ (Rohit Chakrathirtha) ನೇತೃತ್ವದಲ್ಲಿ ಪಿಯು ಪಠ್ಯ ಪುಸ್ತಕವನ್ನೂ ಪರಿಷ್ಕರಣೆ ಮಾಡಲಾಗಿತ್ತು. ಪಿಯು ಪಠ್ಯ (PU Syllabus)  ಪರಿಷ್ಕರಣೆ ವರದಿ ಪಡೆಯುವ ಮುನ್ನವೇ ಸಮಿತಿಯನ್ನು ವಿಸರ್ಜಿಸಲಾಗಿದೆ. ದ್ವಿತೀಯ ಪಿಯು ಅಧ್ಯಾಯ 4.2 ರಲ್ಲಿ ಹೊಸ ಧರ್ಮಗಳ ಉದಯ ಪಠ್ಯವನ್ನು ಪರಿಷ್ಕರಣೆ ಮಾಡಲಾಗಿದೆ. ಇದು ಕೆಲವು ಧರ್ಮದವರ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ದೂರು ಬಂದಿದೆ. ಹೀಗಾಗಿ ಈಗ ಪಿಯು ಪಠ್ಯ ಪರಿಷ್ಕರಣಾ ವರದಿ ಸ್ವೀಕರಿಸುವ ಬಗ್ಗೆಯೂ ಗೊಂದಲ ಹೆಚ್ಚಿದೆ. 

'ಸಂವಿಧಾನ ಶಿಲ್ಪಿ' ಪದ ಕೈ ಬಿಟ್ಟು ವಿವಾದ ಮಾಡಿಕೊಂಡಿತಾ ಪಠ್ಯ ಪರಿಷ್ಕರಣಾ ಸಮಿತಿ..?