Omicron Threat: ಶಾಲಾ -ಕಾಲೇಜುಗಳು ಬಂದ್ ಆಗುತ್ತಾ.? ಶಿಕ್ಷಣ ಸಚಿವರ ಸ್ಪಷ್ಟನೆ

ರಾಜ್ಯದಲ್ಲಿ ಒಮಿಕ್ರಾನ್ ಭೀತಿ (Omicron Threat) ಹೆಚ್ಚಾಗುತ್ತದೆ. ಮತ್ತೆ ಶಾಲಾ- ಕಾಲೇಜುಗಳು ಬಂದ್ ಆಗುತ್ತಾ.? ಎಂಬ ಆತಂಕ ಪೋಷಕರಲ್ಲಿ ಶುರುವಾಗಿದೆ. ವಸತಿ ಶಾಲೆಗಳಲ್ಲಿ ಕೊರೋನಾ (Covid 19) ಸೋಂಕು ಹೆಚ್ಚಾಗುತ್ತಿರುವುದು ಇನ್ನಷ್ಟು ಆತಂಕವನ್ನು ಹುಟ್ಟಿಸುತ್ತಿದೆ.  

First Published Dec 8, 2021, 3:07 PM IST | Last Updated Dec 8, 2021, 3:07 PM IST

ಬೆಂಗಳೂರು (ಡಿ. 08): ರಾಜ್ಯದಲ್ಲಿ ಒಮಿಕ್ರಾನ್ ಭೀತಿ ಹೆಚ್ಚಾಗುತ್ತದೆ. ಮತ್ತೆ ಶಾಲಾ- ಕಾಲೇಜುಗಳು ಬಂದ್ ಆಗುತ್ತಾ.? ಎಂಬ ಆತಂಕ ಪೋಷಕರಲ್ಲಿ ಶುರುವಾಗಿದೆ. ವಸತಿ ಶಾಲೆಗಳಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವುದು ಇನ್ನಷ್ಟು ಆತಂಕವನ್ನು ಹುಟ್ಟಿಸುತ್ತಿದೆ.  ಈ ಬಗ್ಗೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಪೋಷಕರಿಗೆ ಧೈರ್ಯ ನೀಡಿದ್ದಾರೆ. 

'ಶಾಲಾ- ಕಾಲೇಜುಗಳನ್ನು ಬಂದ್ ಮಾಡಲ್ಲ. ಒಂದೂವರೆ ವರ್ಷದಿಂದ ಮಕ್ಕಳು ಮನೆಯಲ್ಲಿದ್ದು ಅವರ ಆಟ,ಪಾಠ ಎಲ್ಲವೂ ಅವ್ಯವಸ್ಥೆಯಾಗಿದೆ. ಅದನ್ನು ಸರಿ ಮಾಡುತ್ತಿರುವಾಗ ಈಗ ಒಮಿಕ್ರೋನ್ ಶುರುವಾಗಿದೆ. ನಾವು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ. ಪೋಷಕರು 2 ನೇ ಡೋಸ್ ತೆಗೆದುಕೊಳ್ಳಿ. ಮಕ್ಕಳನ್ನು ಧೈರ್ಯವಾಗಿ ಕಳುಹಿಸಿ. ನಮಗೂ ಮಕ್ಕಳ ಬಗ್ಗೆ ಜವಾಬ್ದಾರಿಯಿದೆ' ಎಂದು ಬಿ ಸಿ ನಾಗೇಶ್ ಮನವಿ ಮಾಡಿದ್ದಾರೆ.