Asianet Suvarna News Asianet Suvarna News

Operation Ganga: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತ ಸರ್ಕಾರ ಏನೂ ಮಾಡ್ತಿಲ್ಲ ಎಂದ ವಿದ್ಯಾರ್ಥಿಗಳು

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರವಾಗಲಿ  ರಾಯಭಾರ ಸಿಬ್ಬಂದಿಯಾಗಲಿ ಏನೂ ಸಹಾಯ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

First Published Mar 4, 2022, 7:38 PM IST | Last Updated Mar 4, 2022, 7:38 PM IST

ಬೆಂಗಳೂರು(ಮಾ.4): ಉಕ್ರೇನ್‌ನಲ್ಲಿ (Ukraine) ಸಿಲುಕಿರುವ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರವಾಗಲಿ (Government of India), ರಾಯಭಾರ ಸಿಬ್ಬಂದಿಯಾಗಲಿ ಏನೂ ಸಹಾಯ ಮಾಡುತ್ತಿಲ್ಲ. ಉಕ್ರೇನ್‌ ಪಶ್ಚಿಮ ಭಾಗದಲ್ಲಿರುವವರು ಮಾತ್ರ ಬರುತ್ತಿದ್ದಾರೆ. ಎಲ್ಲರೂ ತಾವೇ ಬಸ್ಸು ಮತ್ತಿತರೆ ವಾಹನ ಹಿಡಿದು ಹೇಗೋ ಗಡಿ ತಲುಪುತ್ತಿದ್ದಾರೆ. ಅದಕ್ಕೂ ಉಕ್ರೇನ್‌ ಪೊಲೀಸರು ನೆರವಾಗುತ್ತಿದ್ದಾರೆಯೇ ಹೊರತು, ಒಬ್ಬೇ ಒಬ್ಬ ಭಾರತೀಯ ರಾಯಭಾರ ಸಿಬ್ಬಂದಿ ಸಹಾಯಕ್ಕೆ ಧಾವಿಸಿಲ್ಲ. ಗಡಿಗೆ ಬಂದ ನಂತರ  ರಾಯಭಾರ ಸಿಬ್ಬಂದಿ ಸಹಾಯಕ್ಕೆ ಬರುತ್ತಾರೆ.

Operation Ganga: ಭಾರತ ಸರ್ಕಾರ ಏನೂ ಮಾಡ್ತಿಲ್ಲ ಎಂದವರ ವಿರುದ್ಧ ಆಕ್ರೋಶ

ಪೂರ್ವ ಭಾಗದಲ್ಲಿ ಸಿಲುಕಿದವರು ಅಲ್ಲಲ್ಲೇ ಇದ್ದಾರೆ. ಮೊದಲು ಅವರನ್ನು ರಕ್ಷಿಸಿ, ಉಕ್ರೇನ್‌ನಿಂದ ಗಡಿಗೆ ಬಂದ ಮೇಲೆ ಸಹಾಯ ಬೇಕಿರುವುದಿಲ್ಲ. ಉಕ್ರೇನ್ ದೇಶದ ಒಳಗಡೆ ಇರುವವರಿಗೆ ಬೇಕು. ಯಾರೂ ರಕ್ಷಣೆಗೆ ಬಂದಿಲ್ಲ. ಕೇಂದ್ರ ಸಚಿವರು ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಉಕ್ರೇನ್‌ನಿಂದ ಬೆಂಗಳೂರಿಗೆ ಆಗಮಿಸಿದ ಕೆಲ ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. ಹೀಗಾಗಿ ಆಪರೇಶನ್ ಗಂಗಾ ಬಗ್ಗೆ ಗೊಂದಲ ಉಂಟಾಗಿದೆ.