ಉತ್ತರ ಕನ್ನಡ: ಸಂಪರ್ಕಕ್ಕೆ ಸಿಗದ SSLC ವಿದ್ಯಾರ್ಥಿಗಳು, ಶಿಕ್ಷಕರಿಗೆ ಪತ್ತೇದಾರಿ ಕೆಲಸ!
ಉತ್ತರ ಕನ್ನಡ, ಕಾರವಾರ ಭಾಗಗಳಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪಾಡು ಹೇಳತೀರದು. ಒಂದೆಡೆ ನೆಟ್‌ವರ್ಕ್ ಸಮಸ್ಯೆ, ಇನ್ನೊಂದೆಡೆ ಬಸ್ ಸಂಪರ್ಕವಿಲ್ಲ. ಹಾಗಾಗಿ ವಿದ್ಯಾರ್ಥಿಗಳು, ಶಿಕ್ಷಕರ ನಡುವಿನ ಸಂಪರ್ಕವೇ ಕಡಿತಗೊಂಡಿದೆ.
ಉತ್ತರ ಕನ್ನಡ (ಜೂ. 30): ಕೊರೋನಾ ನಡುವೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಉತ್ತರ ಕನ್ನಡ, ಕಾರವಾರ ಭಾಗಗಳಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪಾಡು ಹೇಳತೀರದು. ಒಂದೆಡೆ ನೆಟ್‌ವರ್ಕ್ ಸಮಸ್ಯೆ, ಇನ್ನೊಂದೆಡೆ ಬಸ್ ಸಂಪರ್ಕವಿಲ್ಲ. ಹಾಗಾಗಿ ವಿದ್ಯಾರ್ಥಿಗಳು, ಶಿಕ್ಷಕರ ನಡುವಿನ ಸಂಪರ್ಕವೇ ಕಡಿತಗೊಂಡಿದೆ. ಇಂತಹ ವಿದ್ಯಾರ್ಥಿಗಳನ್ನು ಹುಡುಕುವ ಸವಾಲು ಶಿಕ್ಷಕರದ್ದಾಗಿದೆ. ಅಂತಹ ವಿದ್ಯಾರ್ಥಿಗಳಿಗೆ ಹೊಸ ಮಾದರಿಯ ಪರೀಕ್ಷಾ ಕ್ರಮದ ಬಗ್ಗೆ ತಿಳಿಸಿಕೊಡಬೇಕಾಗಿದೆ. ಸದ್ಯ ಶಿಕ್ಷಕರು ಮಕ್ಕಳ ಪತ್ತೇದಾರಿ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.