Asianet Suvarna News Asianet Suvarna News

ಸರ್ಕಾರದಲ್ಲಿ ಸಮನ್ವಯ ಕೊರತೆ ಇಲ್ಲ, ದೆಹಲಿಗೆ ಹೊರಟ ಸುಧಾಕರ್

Jun 29, 2021, 5:34 PM IST

ಬೆಂಗಳೂರು( ಜೂ. 29)   ಎಸ್‌ಎಸ್‌ಎಲ್ ಸಿ ಪರೀಕ್ಷೆ ದಿನಾಂಕ ಪ್ರಕಟ ವಿಚಾರದಲ್ಲಿ ಸಮನ್ವಯ ಕೊರತೆ ಇಲ್ಲ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ. ನಿನ್ನೆ ರಾತ್ರಿ  ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.

ಸುಧಾಕರ್ ಬೇಸರ ವ್ಯಕ್ತಪಡಿಸಿದ್ದಕ್ಕೆ ಏನು ಕಾರಣ?

ಪರೀಕ್ಷೆ ದಿನಾಂಕ ಪ್ರಕಟದ ಬಗ್ಗೆ ನನಗೆ ಮಾಹಿತಿ ಇಲ್ಲ ಎನ್ನುವಂತಹ ಹೇಳಿಕೆಯನ್ನು ಸುಧಾಕರ್ ನೀಡಿದ್ದರು. ಆದರೆ ಈಗ ಸಮನ್ವಯ ಕೊರತೆ ಇಲ್ಲ.. ಎಲ್ಲವನ್ನು ಮಾತನಾಡಿಯೇ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.