Gadag: ಶಾಲಾ ಛಾವಣಿ ಕುಸಿಯುವ ಭೀತಿ: ಸ್ವಲ್ಪ ಯಾಮಾರಿದ್ರೂ ಮಕ್ಕಳ ಜೀವಕ್ಕೆ ಕುತ್ತು

*  ಗದಗ ನಗರದ ಎಸ್‌.ಎಂ. ಭೂಮರೆಡ್ಡಿ ಸರ್ಕಾರಿ ಶಾಲೆಯಲ್ಲಿ ನಡೆದ ಘಟನೆ
*  ಬಿಸಿಲು, ಮಳೆ ಲೆಕ್ಕಿಸದೆ ಅಂಗಳದಲ್ಲೇ ಪಾಠ ಕೇಳುತ್ತಿರುವ ಮಕ್ಕಳು 
*  ಇದರ ಬಗ್ಗೆ ಮಾಹಿತಿ ಕೊಟ್ಟಿದ್ರೂ ಇತ್ತ ಕಡೆ ತಲೆಹಾಕಿ ನೋಡ ಅಧಿಕಾರಿಗಳು

Share this Video
  • FB
  • Linkdin
  • Whatsapp

ಗದಗ(ನ.28):  ಮಳೆಯ ಕಾಟಕ್ಕೆ ವಿದ್ಯಾರ್ಥಿಗಳು ಸುಸ್ತಾಗಿದ್ದಾರೆ. ಹೌದು, ಶಾಲಾ ಛಾಬಣಿ ಕುಸಿಯುವ ಭೀತಿಯಿಂದಾಗಿ ಅಂಗಳದಲ್ಲೇ ಪಾಠ ಮಾಡುತ್ತಿರುವಂತ ಘಟನೆ ಗದಗ ನಗರದ ಎಸ್‌.ಎಂ. ಭೂಮರೆಡ್ಡಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಸ್ವಲ್ಪ ಯಾಮಾರಿದ್ರೂ ಈ ಶಾಲೆಯ ಮಕ್ಕಳ ಜೀವಕ್ಕೆ ಕುತ್ತು ಬರಲಿದೆ. ಬಿಸಿಲು, ಮಳೆ ಲೆಕ್ಕಿಸದೆ ಮಕ್ಕಳು ಅಂಗಳದಲ್ಲೇ ಪಾಠ ಕೇಳುತ್ತಿದ್ದಾರೆ. ಇದರ ಬಗ್ಗೆ ಮಾಹಿತಿ ಕೊಟ್ಟಿದ್ರೂ ಅಧಿಕಾರಿಗಳು ಮಾತ್ರ ಇತ್ತ ಕಡೆ ತಲೆಹಾಕಿ ನೋಡಿಲ್ಲ ಅನ್ನೋದು ಸ್ಥಳೀಯರ ಆರೋಪವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Chamarajanagar: ಕೊಚ್ಚಿ ಹೋದ ಸೇತುವೆ, ಶಾಲಾ-ಮಕ್ಕಳ ಪರದಾಟ

ಇದರಿಂದಾಗಿ ಶಿಕ್ಷಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಮಕ್ಕಳನ್ನ ಶಾಲೆಯ ಒಳಗಡೆ ಬಿಡದೆ ಅಂಗಳದಲ್ಲೇ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಈ ಬಗ್ಗೆ ಮಕ್ಕಳು ಹಾಗೂ ಶಿಕ್ಷಕರು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಳಿ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ. 

Related Video