PSI Recruitment Scam ಬಿಜೆಪಿ ನಾಯಕಿಯ ಶಾಲೆಯಲ್ಲಿ ಅಕ್ರಮದ್ದೇ ಕಾರುಬಾರು!

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಪತಿ ರಾಜೇಶ್ ಹಾಗರಗಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

Share this Video
  • FB
  • Linkdin
  • Whatsapp

ಕಲಬುರಗಿ (ಏ.18): PSI ನೇಮಕಾತಿ ಅಕ್ರಮ ಪ್ರಕರಣದಲ್ಲಿ (PSI Exam Fraud Case) ಕಲಬುರಗಿಯ ಬಿಜೆಪಿ (BJP) ನಾಯಕಿ ದಿವ್ಯಾ ಹಾಗರಗಿ (Divya Hagaragi) ಶಾಮೀಲಾಗಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಸಿಐಡಿ ತಂಡ ಇಂದು ಕಲಬುರಗಿಯ (Kalaburagi) ದಿವ್ಯಾ ಹಾಗರಗಿ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ. ದಿವ್ಯಾ ಹಾಗರಗಿ ಪರಾರಿಯಾಗಿದ್ದಾರೆ. ಪತಿ ರಾಜೇಶ್ ಹಾಗರಗಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಪಿಎಸ್‌ಐ ನೇಮಕಾತಿ ಅಕ್ರಮ ಬಗೆದಷ್ಟು ಬಯಲಾಗುತ್ತಿದೆ. ಕಲಬುರಗಿಯಲ್ಲಿಯೇ ಬೀಡು ಬಿಟ್ಟು ಪ್ರಕರಣ ಜಾಲಾಡುತ್ತಿರುವ ಸಿಐಡಿ (CID) ಎಸ್‌ಪಿ ರಾಘವೇಂದ್ರ ಹೆಗಡೆ ,ಡಿವೈಎಸ್‌ಪಿ ಶಂಕರಗೌಡ ಪಾಟೀಲ್, ಪ್ರಕಾಶ ರಾಠೋಡ್ ಮತ್ತು ಟೀಂ ನವರು ತನಿಖೆ ತೀವ್ರಗೊಳಿಸಿದ್ದಾರೆ. 

545 PSI ಹುದ್ದೆ ನೇಮಕಾತಿಯಲ್ಲಿ ಆಕ್ರಮ ಪ್ರಕರಣ: ಮಹತ್ವದ ಹೇಳಿಕೆ ಕೊಟ್ಟ ಡಿಜಿ ಐಜಿಪಿ

40 ರಿಂದ 60 ಲಕ್ಷ ಕ್ಕೆ ಡೀಲ್: OMR ಶೀಟ್ ತಿದ್ದುಪಡಿ ಮಾಡುತ್ತಿದ್ದ ಜಾಲ ಸಿಕ್ಕಿದ್ದೇ ರೋಚಕವಾಗಿದ್ದು, ಕಲಬುರಗಿಯ ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರವೇ ಈ ಅಕ್ರಮಕ್ಕೆ ಮೂಲವಾಗಿದೆ. ಅಕ್ರಮದ ರುವಾರಿಗಳು ಪ್ರತಿ ಅಭ್ಯರ್ಥಿಯಿಂದ ತಲಾ 40 ರಿಂದ 60 ಲಕ್ಷ ರೂಪಾಯಿ ವಸೂಲಿ ಮಾಡಿಕೊಂಡು ಅವರ IMR ಶೀಟ್‌ನಲ್ಲಿ ಸರಿ ಉತ್ತರ ಮೇಲ್ವಿಚಾರಕರಿಂದ ಬರೆಸಿ ಪಾಸ್ ಮಾಡಿಸಲಾಗಿದೆ. 

Related Video