ಬೆಂಗಳೂರು: ಪಿಇಎಸ್‌ ವಿದ್ಯಾರ್ಥಿಗೆ 1.5 ಕೋಟಿ ಸಂಬಳ..!

* ಪಿಇಎಸ್‌ ವಿದ್ಯಾರ್ಥಿಗಳ ಮಹತ್ತರ ಸಾಧನೆ  
* 87 ಸಾವಿರದಿಂದ 1.5  ಕೋಟಿ ಸಂಬಳದ ಉದ್ಯೋಗ ಗಿಟ್ಟಿಸಿಕೊಂಡ ವಿದ್ಯಾರ್ಥಿಗಳು
* ಕೋರ್ಸ್‌ಗಳ 1740 ವಿದ್ಯಾರ್ಥಿಗಳು ಉದ್ಯೊಗ ಮತ್ತು ಇಂಟರ್ನ್‌ಶಿಪ್‌ಗೆ ಆಯ್ಕೆ

First Published Jul 11, 2021, 10:43 AM IST | Last Updated Jul 11, 2021, 10:43 AM IST

ಬೆಳಗಾವಿ(ಜು.11):  ಕೊರೋನಾ ಸಂಕಷ್ಟದಲ್ಲೂ ಪಿಇಎಸ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮಹತ್ತರ ಸಾಧನೆ ಮಾಡಿದ್ದಾರೆ. ಕ್ಯಾಂಪಸ್‌ ಸಂದರ್ಶನಲ್ಲಿ ವಿವಿಯ ವಿವಿಧ ಕೋರ್ಸ್‌ಗಳ 1740 ವಿದ್ಯಾರ್ಥಿಗಳು ಉದ್ಯೊಗ ಮತ್ತು ಇಂಟರ್ನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ಇದರಲ್ಲಿ ಬಹುತೇಕರು 87 ಸಾವಿರದಿಂದ 1.5  ಕೋಟಿ ಸಂಬಳದ ಉದ್ಯೋಗವನ್ನ ಗಿಟ್ಟಿಸಿಕೊಂಡಿದ್ದಾರೆ. ಸಾರಂಗ ರವೀಂದ್ರ ಎಂಬ ವಿದ್ಯಾರ್ಥಿ ಬ್ರಿಟನ್‌ನ ಕಾನ್‌ಫ್ಲೂಯೆಂಟ್‌ ಕಂಪನಿಯ ವಾರ್ಷಿಕ 1.50 ಕೋಟಿ ರು. ಮೊತ್ತದ ವೇತನ ಪ್ಯಾಕೇಜ್‌ನ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. ಜೀವನಾ ಹೆಗಡೆ ಪ್ರತಿಷ್ಠಿತ ಗೂಗಲ್‌ ಕಂಪನಿಯಲ್ಲಿ ಕ್ಲೌಡ್‌ ಕಸ್ಟಮರ್‌ ಎಂಜಿನಿಯರ್‌ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಕೊರೋನಾ ಇನ್ನೂ ಹೋಗಿಲ್ಲ ಸ್ವಾಮಿ: ಬೆಳಗಾವಿ ಗಡಿಯಲ್ಲಿ ಹೇಳೋರಿಲ್ಲ.. ಕೇಳೋರಿಲ್ಲ..!

Video Top Stories