Asianet Suvarna News Asianet Suvarna News

ABVP Protests at Bengaluru University: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಪ್ರತಿಭಟನೆ, ಪೋಲಿಸರಿಂದ ಲಾಠಿಚಾರ್ಜ್

ಬೆಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ ನಡೆಸುತ್ತಿದೆ. ಸುಮಾರು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್​ ಮಾಡಿದ್ದಾರೆ. 

First Published Jan 31, 2022, 3:10 PM IST | Last Updated Jan 31, 2022, 3:10 PM IST

ಬೆಂಗಳೂರು(ಜ.31): ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (Bangalore University) ಎಬಿವಿಪಿ (ABVP) ಪ್ರತಿಭಟನೆ ನಡೆಸಿದ್ದು, ಧರಣಿ ನಿರತ ಎಬಿವಿಪಿ ಕಾಯರ್ಕರ್ತರ ಮೇಲೆ ಪೊಲೀಸರು (Karnataka Police) ಲಾಠಿಚಾರ್ಜ್​ ಮಾಡಿದ್ದಾರೆ. ಸುಮಾರು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಸಮಸ್ಯೆ ಬಗೆಹರಿಸಲು ಆಗ್ರಹಿಸಿ  ಎಬಿವಿಪಿ ಪ್ರತಿಭಟನೆ (Protest) ನಡೆಸುತ್ತಿದೆ. ಪರೀಕ್ಷೆ ಮೌಲ್ಯಮಾಪನ, ಫಲಿತಾಂಶ ಮತ್ತು 3 ವರ್ಷದಿಂದ  ಮಾರ್ಕ್ಸ್ ಕಾರ್ಡ್ () ಇಲ್ಲದೆ ಸಮಸ್ಯೆಯಾಗಿದೆ. ಇದನ್ನು ಆದಷ್ಟು ಬೇಗ ಬಗೆಹರಿಸಬೇಕು ಎಂದು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ.

BENGALURU UNIVERSITY: ಇಂಟರ್ನಲ್, ವೈವಾ ಪರೀಕ್ಷೆ ಅಂಕ ನೀಡಿದ್ರೂ ವಿದ್ಯಾರ್ಥಿಗಳು ಫೇಲ್.!

ಈ ವೇಳೆ ವಿಶ್ವವಿದ್ಯಾಲಯ ಮುತ್ತಿಗೆ ಹಾಕಲು ಮುಂದಾಗಿದ್ದ ಅಖಿಲಾ ಭಾರತೀಯ ವಿದ್ಯಾರ್ಥಿ ಪರಿಷತ್  ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಹಾಸ್ಟೆಲ್ ಸಮಸ್ಯೆ, ವಿದ್ಯಾರ್ಥಿ ವೇತನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ವಿವಿಗೆ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಇದೇ ವೇಳೆ ದೂರ ಶಿಕ್ಷಣ ವಿದ್ಯಾರ್ಥಿಗಳ ಫಲಿತಾಂಶ ವಿಳಂಬ ಹಿನ್ನೆಲೆ ಎಬಿವಿಪಿ ವಿದ್ಯಾರ್ಥಿಗಳಿಂದ ವಿವಿಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸಂಶೋಧನಾ ವಿದ್ಯಾರ್ಥಿಗಳಿಂದಲೂ ಪ್ರತಿಭಟನೆ ನಡೆದಿದೆ. 2 ಸಂಘಟನೆ ಪ್ರತಿಭಟನೆ ವಿಚಾರವಾಗಿ ಗಲಾಟೆ ನಡೆದಿದೆ. ರಾಜಕೀಯತೇರ ವಿದ್ಯಾರ್ಥಿ ಸಂಘಟನೆಗಳಿಗೆ ಅವಕಾಶವಿಲ್ಲ. ಪ್ರತಿಭಟನೆ ನಡೆಸುವ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ವಿದ್ಯಾರ್ಥಿಗಳಿಗೆ ಸಮಸ್ಯೆ ಇದ್ದರೆ ನೇರವಾಗಿ ಬಂದು ಕೇಳಲಿ. ವಿವಿ ಆವರಣದಲ್ಲಿ ಇಂತಹ ಸಂಘಟನೆಗೆ ಅವಕಾಶ ನೀಡಲ್ಲ ಎಂದು ಬೆಂಗಳೂರು ವಿವಿ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ.