Asianet Suvarna News Asianet Suvarna News

ಖಾಸಗಿ ಶಾಲೆಗಳನ್ನು ಮೀರಿಸುವಂತಿದೆ ಈ ಸರ್ಕಾರಿ ಹೈಟೆಕ್ ಶಾಲೆ; ನೋಡೋಣ ಬನ್ನಿ!

ಸರ್ಕಾರಿ ಶಾಲೆ ಎಂದಾಕ್ಷಣ ಮೂಗು ಮುರಿಯುವವರೇ ಜಾಸ್ತಿ. ಒಂದಷ್ಟು ಕಲ್ಪನೆಗಳಿವೆ ಹೀಗೆ ಇರತ್ತೆ. ಹಾಗೆ ಇರತ್ತೆ ಅಂತ. ಆದರೆ ಅದನ್ನು ಮೀರಿಸುವಂತಿದೆ ಈ ಸರ್ಕಾರಿ ಹೈಟೆಕ್ ಶಾಲೆ!

ಚಿಕ್ಕಬಳ್ಳಾಪುರ (ಸೆ. 14): ಸರ್ಕಾರಿ ಶಾಲೆ ಎಂದಾಕ್ಷಣ ಮೂಗು ಮುರಿಯುವವರೇ ಜಾಸ್ತಿ. ಒಂದಷ್ಟು ಕಲ್ಪನೆಗಳಿವೆ ಹೀಗೆ ಇರತ್ತೆ. ಹಾಗೆ ಇರತ್ತೆ ಅಂತ. ಆದರೆ ಅದನ್ನು ಮೀರಿಸುವಂತಿದೆ ಈ ಸರ್ಕಾರಿ ಹೈಟೆಕ್ ಶಾಲೆ!

ಚಿಕ್ಕಬಳ್ಳಾಪುರ ದಲ್ಲಿ ರೆಡಿಯಾಗಿದೆ ದೇಶದ ಮಾದರಿ ಸರ್ಕಾರಿ ‌ಶಾಲೆ. ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್ ಮಾರ್ಗದರ್ಶನ, ಜಿಲ್ಲಾ ಪಂಚಾಯತ್ ಸಿಇಓ ಪೌಜಿಯಾ ತರುನಮ್  ನೇತೃತ್ವದಲ್ಲಿ ಹೈಟೆಕ್ ಶಾಲೆ ನಿರ್ಮಾಣವಾಗಿದೆ. 
ನರೇಗಾ ಯೋಜನೆಯಲ್ಲಿ ಸರ್ಕಾರಿ ಶಾಲೆ ಉನ್ನತಿಕರಿಸಿ‌ ಅಭಿವೃದ್ಧಿ.ಗೊಳಿಸಲಾಗಿದೆ.

ಮಕ್ಕಳ ಶಾಲಾ-ಕಾಲೇಜು ಶುಲ್ಕ ಮನ್ನಾ ಕೂಗು: ಮೋದಿ ಸರ್ಕಾರ ಪೋಷಕರಲ್ಲಿ ತರಿಸುತ್ತಾ ನಗು!

ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಹುಟ್ಟೂರು ಮುದ್ದೇನಹಳ್ಳಿಯಲ್ಲಿ ಈ ಮಾದರಿ ಶಾಲೆಯಿದೆ. ಕಂಪ್ಯೂಟರ್ ಲ್ಯಾಬ್, ಸೈನ್ಸ್  ಲ್ಯಾಬ್, ಸಮಾಜ ಶಾಸ್ತ್ರ ಲ್ಯಾಬ್ ಗಳ ನಿರ್ಮಾಣ, ಪ್ರತಿ ಕೊಠಡಿಯಲ್ಲಿ ಐತಿಹಾಸಿಕ ‌ಪ್ರವಾಸಿತಾಣಗಳ ಪೆಂಟಿಂಗ್ಸ್ ಹೀಗೆ. ಯಾವ ಖಾಸಗಿ ಶಾಲೆಗಳಿಗೂ ಕಮ್ಮಿಯಿಲ್ಲದಂತೆ ನಿರ್ಮಾಣಗೊಂಡಿದೆ ಸರ್ಕಾರಿ ಶಾಲೆ.   ಈ‌ ಶಾಲೆಯನ್ನು ನೋಡಲು ವಿದ್ಯಾರ್ಥಿಗಳು, ಪೋಷಕರು, ಐಎಎಸ್ ಅಧಿಕಾರಿಗಳ ದಂಡು ಬರುತ್ತಿದೆ.  ಈ ಬಗ್ಗೆ ನಮ್ಮ ಪ್ರತಿನಿಧಿ ರವಿಕುಮಾರ್ ವಾಕ್ ಥ್ರೂ ನಡೆಸಿದ್ದಾರೆ ಬನ್ನಿ ನೋಡೋಣ. 

Video Top Stories